Times of Deenabandhu
  • Home
  • ಜಿಲ್ಲೆ
  • ಕೊರೊನಾ ವೈರಾಣು ಕ್ರಮೇಣ ತನ್ನ ಕಬಂಧಬಾಹುಗಳನ್ನು ವಿಸ್ತರಿಸುತ್ತ ನಡೆದಿದೆ ಜಾಗೃತೆ ವಹಿಸಲು ಜನತೆಗೆ ಡಾ. ಶಿವಮೂರ್ತಿ ಮುರುಘಾ ಶರಣರ ಕರೆ…..
ಚಿತ್ರದುರ್ಗ ಜಿಲ್ಲೆ

ಕೊರೊನಾ ವೈರಾಣು ಕ್ರಮೇಣ ತನ್ನ ಕಬಂಧಬಾಹುಗಳನ್ನು ವಿಸ್ತರಿಸುತ್ತ ನಡೆದಿದೆ ಜಾಗೃತೆ ವಹಿಸಲು ಜನತೆಗೆ ಡಾ. ಶಿವಮೂರ್ತಿ ಮುರುಘಾ ಶರಣರ ಕರೆ…..

ಚಿತ್ರದುರ್ಗ ಜು.3: ಕೊರೊನಾ ವೈರಾಣು ಕ್ರಮೇಣ ತನ್ನ ಕಬಂಧಬಾಹುಗಳನ್ನು ವಿಸ್ತರಿಸುತ್ತ ನಡೆದಿದ್ದು ರಾಜ್ಯವು ಸೇರಿದಂತೆ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗದಲ್ಲಿಯೂ ವ್ಯಾಪಿಸುತ್ತ ಹೊರಟಿದೆ. ಈ ಬಗ್ಗೆ ಜನರು ಜಾಗರೂಕರಾಗಬೇಕಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ಇಂದು ಮಾಧ್ಯಮಗಳಿಗೆ ಶ್ರೀಗಳು  ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ  ತಿಳಿಸಿದ್ದಾರೆ.

ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳಬೇಕಾಗಿರುವುದು ಇಂದಿನ ಅತ್ಯಂತ ಅನಿವಾರ್ಯವಾಗಿದೆ. ಆದ್ದರಿಂದ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಮುಖಕ್ಕೆ ಮಾಸ್ಕ್ ಧರಿಸುವುದು ಅತ್ಯಗತ್ಯವಾಗಿದೆ. ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದಾಗ್ಯು ಅದನ್ನು ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದು ಏನೂ ಮಾಡುವುದಿಲ್ಲ ಎಂಬಂತೆ ಯಥಾವತ್ತಾಗಿ ಜೀವನ ನಡೆಸುವ ಪದ್ಧತಿಯು ಆತಂಕವನ್ನು ಹುಟ್ಟಿಸುತ್ತಿದೆ. ಕಾರಣ ಇನ್ನಾದರೂ ಜನರು ಈ ಬಗ್ಗೆ ಎಚ್ಚರ ವಹಿಸುವುದು ಮುಖ್ಯವಾಗಿದೆ.

ಪಕ್ಕದ ಕೇರಳ ರಾಜ್ಯದಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡು ನಂತರದ ದಿನಗಳಲ್ಲಿ ಆ ರಾಜ್ಯವು ಕೊರೋನಾ ವೈರಾಣು ವ್ಯಾಪಿಸುವುದನ್ನು ಸಂಪೂರ್ಣವಾಗಿ ನಿಯಂತ್ರಿಸಿದೆ. ಇದು ಹೇಗೆ ಸಾಧ್ಯವಾಯಿತೆಂದರೆ ಅಲ್ಲಿನ ಜನರು ಸ್ವತಃ ಮನೆಯಲ್ಲಿದ್ದು ತಾವೇ ದಿಗ್ಬಂಧನ ಹಾಕಿಕೊಂಡು ಚಾಚೂತಪ್ಪದೆ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿದ್ದರಿಂದ ನಿಯಂತ್ರಣ ಸಾಧ್ಯವಾಗಿದೆ. ಈ ಉದಾಹರಣೆಯನ್ನು ನಾವುಗಳು ಇಟ್ಟುಕೊಂಡು ನಿಯಂತ್ರಣ ತರುವಲ್ಲಿ ಯಶಸ್ವಿಯಾಗಬೇಕೆಂದು ಶ್ರೀಗಳು ಜನತೆಗೆ ಕರೆ ನೀಡಿದ್ದಾರೆ.

 

 

Related posts

ಪತ್ರಕರ್ತನಿಗೆ ಬೇಕು ಬಹುಮುಖಿ ಚಿಂತನೆ: ಹಿರಿಯ ಪತ್ರಕರ್ತ ಡಾ. ಗಣೇಶ್ ಅಮೀನ್‌ಗಡ ಅಭಿಪ್ರಾಯ

Times fo Deenabandhu

ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಶಾಲೆಯ ಶಿಕ್ಷಕನಿಗೆ ಕೊರೊನಾ ಪಾಸಿಟಿವ್…ನಗರದ ಹಲವೆಡೆ ಸೀಲ್ ಡೌನ್…

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ

Times fo Deenabandhu