September 27, 2020
Times of Deenabandhu
  • Home
  • ಜಿಲ್ಲೆ
  • ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ
ಚಿತ್ರದುರ್ಗ ಜಿಲ್ಲೆ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

 

ಸಾಣೇಹಳ್ಳಿ, ಜು. 3; ಇಲ್ಲಿನ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬದುಕು ಒಂದು ಅಮೃತ ಸಾಗರವಿದ್ದಂತೆ. ನಾವು ಅಮೃತ ಸಾಗರದಲ್ಲಿದ್ದು ಆಕಳ ಹಾಲ ಬಯಸಬಾರದು. ಸಮಸ್ಯೆಗಳಿಗೆ ಅಂಜಿ ಆತ್ಮಹತ್ಯೆಯ ದಾರಿ ತುಳಿಯಬಾರದು. ಬದುಕು ಮುಖ್ಯವೇ ಹೊರತು ಸಮಸ್ಯೆಗಳಲ್ಲ. ನಾವು ಗಟ್ಟಿಯಾಗಿ ನಿಂತರೆ ಸಮಸ್ಯೆಗಳು ತನ್ನಿಂದ ತಾನೇ ಓಡುವವು. ಇಡೀ ಜಗತ್ತು  ಕರೋನಾದ ಸಂಕಟದಲ್ಲಿ ಬಿದ್ದಿದೆ. ಇದರ ಪರಿಣಾಮ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೂ ಆಗುತ್ತಲಿದೆ. ಈ ಸಮಯವನ್ನು ಶಾಪವೆಂದು ಭಾವಿಸದೆ ವರವೆಂದು ಪರಿಗಣಿಸಬೇಕು. ವಿದ್ಯಾಧ್ಯಯನದ ಪರೀಕ್ಷೆಗಳಿಗಿಂತ ಬದುಕಿನ ಈ ಪರೀಕ್ಷೆಯಲ್ಲಿ ಪಾಸಾಗಬೇಕು. ಕರೋನಾ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯೇ ಬೇಡವೆಂದವರಲ್ಲಿ ನಾವೂ ಒಬ್ಬರು. ಆದರೆ ಶಿಕ್ಷಣ ಇಲಾಖೆಯ ಎಚ್ಚರಿಕೆ ಮತ್ತು ಜವಾಬ್ದಾರಿಯ ಕಾರಣ ಅತ್ಯಂತ ಯಶಸ್ವಿಯಾಗಿ ಪರೀಕ್ಷೆಗಳು ಮುಗಿಯುತ್ತಲಿವೆ. ಈ ಹಿನ್ನೆಲೆಯಲ್ಲಿ ಶ್ರಮಿಸಿದ ಶಿಕ್ಷಣ ಇಲಾಖೆಯ ಮಂತ್ರಿಗಳಿಗೆ, ಅಧಿಕಾರಿಗಳಿಗೆ, ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಬಯಸುತ್ತೇವೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಜೀವನದ ಬಹು ಮುಖ್ಯ ಹಂತ. ಈ ಹಂತದಲ್ಲಿ ಮಾನಸಿಕ ಸಂಮಯಮ ಬಹಳ ಮುಖ್ಯವಾದುದು. ಪರೀಕ್ಷೆಯಲ್ಲಿ ಫೇಲ್ ಆದರೆ ಇನ್ನೊಮ್ಮೆ ಬರೆದು ಪಾಸು ಮಾಡಿಕೊಳ್ಳಬಹುದು. ಆದರೆ ಜೀವನದ ಪರೀಕ್ಷೆಯಲ್ಲಿ ಫೇಲ್ ಆದರೆ ಇನ್ನೊಮ್ಮೆ ಬರೆಯಲು ಅವಕಾಶವಿರುವುದಿಲ್ಲ. ಜೀವನದಲ್ಲಿ ಹಣವೊಂದೇ ಮುಖ್ಯವಲ್ಲ; ಮೌಲ್ಯಯುತ ಬದುಕು ಮುಖ್ಯ. ಗುರು-ಹಿರಿಯರನ್ನು, ಪೋಷಕರನ್ನು ಗೌರವಿಸುವ, ಅವರನ್ನು ಸರಿಯಾಗಿ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲೆ ಇದೆ.  ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಸಂಯಮ, ತಾಳ್ಮೆಯಿಂದ ತಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂದರು.

ಹೊಸದುರ್ಗ ತಾಲ್ಲೂಕು ಶಿಕ್ಷಣಾಧಿಕಾರಿಗಳಾದ ಎಲ್ ಜಯಪ್ಪ ಮಾತನಾಡಿ ಜಗತ್ತನ್ನೇ ಕಾಡಿಸುತ್ತಿರುವ ಕೋವಿಡ್-19 ಸಂದಿಗ್ಧ ಸಂದರ್ಭದಲ್ಲಿ ಸರಕಾರ ಮತ್ತು ಸಮಾಜ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಡೆಸುವ ಮಹತ್ತರ ಜವಾಬ್ದಾರಿಯನ್ನು ನಮ್ಮ ತಾಲ್ಲೂಕು ಶಿಕ್ಷಣ ಇಲಾಖೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ. ಇದಕ್ಕೆ ಸಹಕರಿಸಿದ ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಸ್ಕೌಟ್ ಅಂಡ್ ಗೈಡ್ಸ್, ಪಂಚಾಯತಿ, ಜಿಲ್ಲಾಡಳಿತ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನಾರ್ಹರು. ಹೊಸದುರ್ಗ ಕ್ಷೇತ್ರದಲ್ಲಿ ನಡೆದ ಈ ಪರೀಕ್ಷಾ ಅವಧಿಯಲ್ಲಿ ಕರೋನ ಪಾಜಿಟಿವ್ ಪ್ರಕರಣಗಳು ಎಲ್ಲೂ ಪತ್ತೆಯಾಗಿಲ್ಲ. ಮಾನ್ಯ ಸಚಿವರಾದ ಸುರೇಶ್ ಕುಮಾರ್, ಶಾಸಕರಾದ ಗೂಳಿಹಟ್ಟಿ ಡಿ ಶೇಖರ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಲ ಕಾಲಕ್ಕೆ ನೀಡಿದ ಮಾರ್ಗದರ್ಶನದಂತೆ ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಕಡ್ಡಾಯವಾಗಿ ಪ್ರತಿದಿನವೂ ಪ್ರತಿಯೊಬ್ಬರನ್ನೂ ಆರೋಗ್ಯ ತಪಾಸಣೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. ಪ್ರತಿದಿನ ಪರೀಕ್ಷೆ ಮುಗಿದ ಕೂಡಲೇ ಪರೀಕ್ಷೆ ನಡೆದ ಎಲ್ಲ ಕೊಠಡಿಗಳಿಗೆ ಸ್ಯಾನಿಟರೈಜ್ ದ್ರಾವಣ ಸಿಂಪಡಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬರಲು ಶಾಲಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ವಿದ್ಯಾರ್ಥಿಗಳು ಯಾವುದೇ ಅಂಜಿಕೆ ಇಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಬೇಕಾದ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು. ಉತ್ತಮ ಫಲಿತಾಂಶ ಬರುವುದರಲ್ಲಿ ಯಾವ ಅನುಮಾನವೂ ಇಲ್ಲ. ವಿದ್ಯಾರ್ಥಿಗಳ ಮುಂದಿನ ಬದುಕು ಸುಗಮವಾಗಿ ಸಾಗಲಿ. ಯಶಸ್ವಿಯಾಗಿ ಪರೀಕ್ಷೆ ನಡೆಸಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.

ಮುಖ್ಯೋಪಾಧ್ಯಾಯ ಹೆಚ್ ಎನ್ ಹೊನ್ನೇಶಪ್ಪ ಸ್ವಾಗತಿಸಿದರು. ಅಧ್ಯಾಪಕ ಹೆಚ್ ಎಸ್ ದ್ಯಾಮೇಶ್ ಹಿಂದಿ ಪ್ರಶ್ನೆಪತ್ರಿಕೆ ಕುರಿತಂತೆ ಸೂಕ್ತ ಮಾರ್ಗದರ್ಶನ ನೀಡಿದರು. ಭೂಮಿಕಾ ಮತ್ತು ವೀಣಾ ವಚನ ಪ್ರಾರ್ಥನೆ ಸಲ್ಲಿಸಿದರು. ಅಧ್ಯಾಪಕ ಸಂತೋಷ್ ನಿರ್ವಹಿಸಿದರು. ವಿದ್ಯಾರ್ಥಿಗಳು, ಕರ್ತವ್ಯ ನಿರತ ಅಧ್ಯಾಪಕರು, ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗವಹಿಸಿದ್ದರು. ನಂತರ ಎಲ್ಲ ವಿದ್ಯಾರ್ಥಿಗಳಿಗೂ ಚಾಕಲೇಟ್ ವಿತರಿಸಿ, ಆರೋಗ್ಯ ತಪಾಸಣೆ ನಡೆಸಿ ಇಂದು ನಡೆಯಲಿರುವ `ಹಿಂದಿ’ ಪರೀಕ್ಷೆಗೆ ಕಳುಹಿಸಿಕೊಡಲಾಯಿತು.

ವರದಿ : ಹೆಚ್ ಎಸ್ ದ್ಯಾಮೇಶ್

 

 

 

 

 

 

 

 

 

 

ಸಾಗರ ಹೆಚ್.ಗಣಪತಿಯಪ್ಪಅವರ ಸಾಧನೆ ಸ್ಮರಣೆ ಹೆಜ್ಜೆಗುರುತು ಮೆಲಕು

ಕಾಗೋಡು ಚಳುವಳಿ _ ಭೂಮಿ ಈ

Related posts

ನಿರ್ದೇಶಕರ ಸ್ಥಾನಕ್ಕೆ ಗೆ‍ಲ್ಲಿಸಲು ಕೆ.ಎಸ್.ತಾರಾನಾಥ್ ಮನವಿ

Times fo Deenabandhu

ಗ್ರಾಮೀಣ ಪ್ರದೇಶದಲ್ಲೂ ಪ್ಲಾಸ್ಟಿಕ್ ನಿಷೇಧ ಜಾರಿಗೆ ಕ್ರಮ ಕೈಗೊಳ್ಳಿ: ನ್ಯಾ. ಸುಭಾಷ್ ಅಡಿ

Times fo Deenabandhu

ಗಾಂಧಿ, ಗೋಪಾಲಗೌಡರ ಹೆಸರಳಿಸುವ ಹುನ್ನಾರ ನಡೆದಿವೆ-ಸಮಾಜವಾದ ಸಂಪೂರ್ಣ ಯಶಸ್ಸು ಆಗಬೇಕಿತ್ತು

Times fo Deenabandhu