Times of Deenabandhu
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

80 ಕೋಟಿ ದೇಶದ ಬಡ ಜನರಿಗೆ 5 ತಿಂಗಳು ಫ್ರೀ ರೇಷನ್ ……

ನವದೆಹಲಿ ಜೂ.30: ದೇಶದ ಜನತೆ ಬಹು ಕಾತುರದಿಂದ ಕಾಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದಲ್ಲಿ  ದೇಶದ 80 ಕೋಟಿ ಬಡ ಜನರಿಗೆ 5 ತಿಂಗಳು ಅಂದರೆ ನವೆಂಬರ್ ವರೆಗೆ ಉಚಿತವಾಗಿ ರೇಷನ್ ನೀಡುವ ಘೋಷಣೆ ಮಾಡಿದ್ದಾರೆ. ಇಂದು ಸಂಜೆ 4 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಕುಟುಂಬದ ಪ್ರತಿ ಸದಸ್ಯರಿಗೆ 5 ಕೆ.ಜಿ.ಗೋಧಿ ಅಥವಾ ಅಕ್ಕಿ ವಿತರಿಸಲಾಗುತ್ತದೆ ಎಂದರು.

ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಅನ್ ಲಾಕ್-2 ಪ್ರವೇಶಿಸಿದ್ದೇವೆ

ಸರಿಯಾದ ಸಮಯದಲ್ಲಿ ಲಾಕ್ಡೌನ್ ಮಾಡಿದ್ದರಿಂದ ಲಕ್ಷಾಂತರ ಮಂದಿಯ ಜೀವ ಉಳಿದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ ಆಗಿದೆ. ಅನ್ ಲಾಕ್ 2.0ರಲ್ಲಿ ಉದಾಸೀನರಾಗಿದ್ದರೆ, ಅಪಾಯ ಖಂಡಿತ ಎಂದು ತಿಳಿಸಿದ ಪ್ರಧಾನಿ ಮೋದಿಯವರು

ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ಯೋಜನೆ ಜಾರಿ.ಮಾಡಲಾಗುವುದು ಎಂದರು.

ಕಂಟೈನ್‌ಮೆಂಟ್‌ ಜೋನ್ ಮೇಲೆ ಹೆಚ್ಚಿನ ನಿಗಾ ಅಗತ್ಯವಾಗಿದೆ. ಮಾಸ್ಕ್ ಧರಿಸಿಲ್ಲ ಎಂದು ದೇಶವೊಂದರ ಮುಖ್ಯಸ್ಥರಿಗೆ ದಂಡ ಹಾಕಿರುವ ಸುದ್ದಿ ಓದಿರಬಹುದು. ಭಾರತದಲ್ಲೂ ಇಂಥ ಕಠಿಣ ಕ್ರಮ ಅಗತ್ಯ. ಕಾನೂನಿನ ಎದುರು ಗ್ರಾಮದ ಪ್ರಧಾನ ಹಾಗೂ ದೇಶದ ಪ್ರಧಾನಿ ಇಬ್ಬರೂ ಒಂದೇ. ಅನ್ ಲಾಕ್ 2.0ರಲ್ಲಿ ಉದಾಸೀನರಾಗಿದ್ದರೆ, ಅಪಾಯ ಖಂಡಿತ. ಜನರ ಬೇಜವಾಬ್ದಾರಿ ವರ್ತನೆ ಚಿಂತೆ ಉಂಟು ಮಾಡಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕರೊನಾ ನಿಯಮಗಳಿಗಿಂತ ಯಾರೂ ಅತೀತರಲ್ಲ. ಸಾಮಾನ್ಯನಿಂದ ಪ್ರಧಾನಿಯವರೆಗೂ ಒಂದೇ ನಿಯಮ ಅನ್ವಯವಾಗುತ್ತದೆ. ನಿಯಮ ಉಲ್ಲಂಘಿಸುವವರಿಗೆ ತಿಳುವಳಿಕೆ ಹೇಳಬೇಕು. ಲಾಕ್​ಡೌನ್​ ನಿಯಮಗಳಿಂದ ಯಾರೂ ಹೊರತಾಗಿಲ್ಲ ಎಂದರು.

ಲಾಕ್​ಡೌನ್​ ಬೆನ್ನಲ್ಲೇ ಗರೀಬ್​ ಕಲ್ಯಾಣ ಯೋಜನೆ ಜಾರಿಗೊಳಿಸಲಾಯಿತು. 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಿಸಲಾಗಿದೆ. ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂ. ಜಮೆಯಾಗಿದೆ. 9 ಸಾವಿರಕ್ಕೂ ಹೆಚ್ಚು ರೈತರ ಖಾತೆಗಳಿಗೆ ಕಿಸಾನ್​ ಸಮ್ಮಾನ್​ ನಿಧಿ ಹಣವನ್ನು ಜಮೆ ಮಾಡಲಾಗಿದೆ. ಬಡವರ ಖಾತೆಗಳಿಗೆ 31 ಸಾವಿರ ಕೋಟಿ ರೂ. ಜಮೆಯಾಗಿದೆ ಎಂದು ಹೇಳಿದರು.

ಇದೇ ವೇಳೆ ಲಾಕ್​ಡೌನ್​ ಕುರಿತು ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಮತ್ತೆ ಲಾಕ್​ಡೌನ್​ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ತಿಳಿಸಿದರು.

 

 

 

 

Related posts

ದೇಶದಲ್ಲಿ 8 ಸಾವಿರ ಗಡಿ ದಾಟಿದ ಸೋಂಕಿತ ಪ್ರಕರಣ!

Times fo Deenabandhu

ವಿಮಾನವನ್ನು ಮದುವೆಯಾಗುತ್ತಾರಂತೆ ಈ ಯುವತಿ…! : ಮಾರ್ಚಿನಲ್ಲಿ ನಡೆಯಲಿದೆ ಕಲ್ಯಾಣ…!

Times fo Deenabandhu

ಬುಧವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ, ಅಕ್ರಮದಲ್ಲಿ ತೊಡಗಿದರೆ 5 ಲಕ್ಷ ದಂಡ

Times fo Deenabandhu