Times of Deenabandhu
  • Home
  • ಜಿಲ್ಲೆ
  • ನೆರೆ ಸಂತ್ರಸ್ಥರಿಗೆ ಪುನರ್ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಲು  ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ.ಯೊಗೀಶ್  ಒತ್ತಾಯ
ಜಿಲ್ಲೆ ಶಿವಮೊಗ್ಗ

ನೆರೆ ಸಂತ್ರಸ್ಥರಿಗೆ ಪುನರ್ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಲು  ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ.ಯೊಗೀಶ್  ಒತ್ತಾಯ

 

ಶಿವಮೊಗ್ಗ ಜೂ.30: ವಾರ್ಡ್ ನಂ.33ರ ಸವಾಯಿಪಾಳ್ಯ, ಇಮಾಂಬಡಾ ನೆರೆ ಸಂತ್ರಸ್ಥರಿಗೆ ಪುನರ್ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ.ಯೊಗೀಶ್ ಮತ್ತು ಸದಸ್ಯೆ ಶಬಾನಾ ಖಾನಂ ನೇತೃತ್ವದಲ್ಲಿ ನಿವಾಸಿಗಳು ಇಂದು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಮಹಾನಗರಪಾಲಿಕೆ ವಾ.ನಂ. 33 ಇಮಾಂಬಡಾ ಪ್ರದೇಶದಲ್ಲಿ ಸುಮಾರು 40 ವರ್ಷಗಳಿಂದ 28 ಬಡ ಕುಟುಂಬಗಳು ತುಂಗಾ ನದಿ ಪಕ್ಕದಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ.

ಕಳೆದ ವರ್ಷ ಭಾರೀ ಮಳೆ ತುಂಗಾ ನದಿ ಪ್ರವಾಹದಿಂದ  ನೆರೆ ಸಂಕಷ್ಟಕ್ಕೀಡಾದ ಈ ಕುಟುಂಬದವರಿಗೆ ಮಂಡ್ಲಿ ಗ್ರಾಮದ ಸ.ನಂ.102 ರಲ್ಲಿ ಪಾಲಿಕೆ ಬಡಾವಣೆಯಲ್ಲಿ 20*30 ಅಡಿ ವಿಸ್ತೀರ್ಣದ ನಿವೇಶನ ಹಕ್ಕುಪತ್ರ ನೀಡಲಾಗಿದೆ.

ಇತ್ತೀಚೆಗೆ ಪಾಲಿಕೆ ವತಿಯಿಂದ ಪದೇ ಪದೇ ನೋಟೀಸ್ ಜಾರಿಯಾಗುತ್ತಿದ್ದು, ನಿರಾಶ್ರಿತರಿಗೆ ಯಾವುದೇ ಸೌಲಭ್ಯ ಇಲ್ಲದ ಕಾರಣ ಜೀವನ ಸಾಗಿಸಲು ಕಷ್ಟಕರವಾಗಿದೆ ಎಂದು ದೂರಿದರು.

ಇಮಾಂಬಡಾ ನಿರಾಶ್ರಿತರಿಗೆ ಸೂಚಿಸಿದ ಸ್ಥಳದಲ್ಲಿ ಮನೆ ನಿರ್ಮಿಸಿಕೊಳ್ಳಲು ಒಂದೇ ಕಂತಿನಲ್ಲಿ 5 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದು, ಇಲ್ಲಿಯತನಕ ಹಣ  ಬಿಡುಗಡೆ ಮಾಡಿಲ್ಲ. ಮಳೆಗಾಲದಲ್ಲಿ ಏಕಾಏಕಿ ನೊಟಿಸ್ ನಿರಾಶ್ರಿತರು ಎಲ್ಲಿಗೆ ಹೋಗಬೇಕೆಂದುದಿಕ್ಕು ತೋಚದಂತಾಗಿದೆ ಎಂದರು.

ಪಾಲಿಕೆ ವತಿಯಿಂದ ಎಲ್ಲ ರೀತಿಯ ಮೂಲಸೌಕರ್ಯ ನೀಡಿ ನಂತರ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

               

 

 

 

Related posts

ಭದ್ರಾವತಿಯಲ್ಲಿ ವಿವಿಧ ಸಂಘಟನೆಗಳಿಂದ ಅಂಬೇಡ್ಕರ್ ಜಯಂತಿ

Times fo Deenabandhu

ರಂಜಾನ್ ಹಬ್ಬದ ಹಿನ್ನಲೆಯಲ್ಲಿ 25 ಕುಟುಂಬಕ್ಕೆ ಆಹಾರ ಪದಾರ್ಥ ಕಿಟ್ ವಿತರಣೆ

Times fo Deenabandhu

ಮಿಕ್ಸ್ ಮೋಡ್ ತಂತ್ರಾಂಶ ಬಳಕೆ

Times fo Deenabandhu