Times of Deenabandhu
  • Home
  • Uncategorized
  • ಶಿವಮೊಗ್ಗದಲ್ಲಿ ಇಂದು ಇನ್ನಷ್ಟು  ಜನರಿಗೆ ಸೋಂಕು ತಗುಲಿರುವ ಸಂಖ್ಯೆ ….?
Uncategorized

ಶಿವಮೊಗ್ಗದಲ್ಲಿ ಇಂದು ಇನ್ನಷ್ಟು  ಜನರಿಗೆ ಸೋಂಕು ತಗುಲಿರುವ ಸಂಖ್ಯೆ ….?

ಶಿವಮೊಗ್ಗ ಜೂ.30 : ಜಿಲ್ಲೆಯಲ್ಲಿ ಇಂದು 23 ಜನರಿಗೆ ಕೊರೋನಾ ಸೋಂಕು ತಗುಲಿರುವ ಸಾಧ್ಯತೆ ಇದೆ? ಎಂದು ಹೇಳಲಾಗುತ್ತಿದೆ.

ಭದ್ರಾವತಿಯಲ್ಲಿ 7 ಮಂದಿಗೆ ಪಾಸಿಟಿವ್ ವರದಿ ಬಂದಿದ್ದು, ಶಿಕಾರಿಪುರದಲ್ಲಿ 8 , ಹೊಸನಗರ, ಸೊರಬ, ತೀರ್ಥಹಳ್ಳಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಶಿಕಾರಿಪುರದ ಕಸವಾಪುರದ ವೃದ್ದೆಯ ಸಾವು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದು ಅಲ್ಲಿ ಸೋಂಕು ಇನ್ನು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಿವಮೊಗ್ಗ ನಗರದಲ್ಲಿ ಇಬ್ಬರು ವೈದ್ಯರು ಸೇರಿದಂತೆ ತಾಲ್ಲೂಕಿನಲ್ಲಿ 8 ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಶಿವಮೊಗ್ಗದ ಗಾಂಧಿನಗರದ `ಬ್ಲಾಕ್ 6ನೇ ತಿರುವು ಹಾಗೂ 1ನೇ ಅಡ್ಡರಸ್ತೆಯಲ್ಲಿ 2 ಹಾಗೂ ಭದ್ರಾವತಿಯ ಗಾಂಧಿನಗರ ಸೇರಿದಂತೆ ಹಲವೆಡೆ ಕೊರೋನಾ ಸೋಂಕಿತರು ವಾಸವಿದ್ದ ಏರಿಯಾಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಸೋಂಕಿತ ವ್ಯಕ್ತಿಯೊರ್ವ ಬಂದು ಹೋಗಿದ್ದ ಹಿನ್ನೆಲೆಯಲ್ಲಿ ಪಾಲಿಕೆಯ ಅನೇಕ ವಿಭಾಗಗಳ ಕಚೇರಿಯನ್ನು ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಪಾಲಿಕೆಗೆ ಭೇಟಿ ನೀಡುವವರ ತಪಾಸಣೆ ನಡೆಸಿ ಒಳಬಿಡಲಾಗಿದೆ.

ಇದುವರೆಗೆ ಶಿವಮೊಗ್ಗ ನಗರದಲ್ಲಿ ಒಟ್ಟು 14 ಕಂಟೈನ್ಮೆಂಟ್ ಜ್ಹೋನ್‍ಗಳಾಗಿದೆ.

ಭದ್ರಾವತಿಯ ಸುಭಾಷ್ ನಗರದಲ್ಲಿ ತಮಿಳುನಾಡು ಟ್ರಾವೆಲ್ ಹಿಸ್ಟರಿ ಹೊಂದಿದ ಇಬ್ಬರಿಗೆ ಹಾಗೂ ಸೋಂಕಿತ ವ್ಯಕ್ತಿಯೊಬ್ಬನ ಗಾಂಧಿನಗರದ ಐವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Related posts

ನಮೋ’ ಕರೆಗೆ ಓಗೊಟ್ಟ ಕರುನಾಡು, ಕೊರೊನಾ ವಿರುದ್ಧ ಕನ್ನಡಿಗರ ದೀಪ ಸಮರ

ಮುಂದುವರೆದ ಕೊರೊನಾ ಮರಣ ಮೃದಂಗ, ವಿಶ್ವದಲ್ಲಿ ಒಂದು ಲಕ್ಷ ದಾಟಿದ ಸಾವಿನ ಸಂಖ್ಯೆ

Times fo Deenabandhu

ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ಇನ್ನಿಲ್ಲ

Times fo Deenabandhu