Times of Deenabandhu
  • Home
  • ಜಿಲ್ಲೆ
  • ಜೆಸಿಐ ಶಿವಮೊಗ್ಗ ಶರಾವತಿ ಘಟಕದ “100 ಪ್ರೋಗ್ರಾಮ್ಸ್” ಗೆ ಚಾಲನೆ ನೀಡಿದ ರೋಟೇರಿಯನ್ ವಿಜಯ್ ಕುಮಾರ್
ಜಿಲ್ಲೆ ಶಿವಮೊಗ್ಗ

ಜೆಸಿಐ ಶಿವಮೊಗ್ಗ ಶರಾವತಿ ಘಟಕದ “100 ಪ್ರೋಗ್ರಾಮ್ಸ್” ಗೆ ಚಾಲನೆ ನೀಡಿದ ರೋಟೇರಿಯನ್ ವಿಜಯ್ ಕುಮಾರ್

ಶಿವಮೊಗ್ಗ ಜೂ.30:  ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಜೂ.29 ರಂದು ಹಮ್ಮಿಕೊಳ್ಳಲಾಗಿದ್ದ “100 ಪ್ರೋಗ್ರಾಮ್ಸ್” ಎನ್ನುವ ಸೋಷಿಯಲ್ ಡೊನೆಟ್ ಹಾಗೂ ಅರಿವು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೋಟೇರಿಯನ್ ವಿಜಯ್ ಕುಮಾರ್ ರವರು ಗಿಡಕ್ಕೆ ನೀರುಣಿಸುವ ಮುಖೇನ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಮಾಜಿಕ ಸೇವೆ ಎನ್ನುವುದು ಪ್ರತಿಯೋರ್ವನ ಜವಾಬ್ದಾರಿಯಾಗಿರಬೇಕು, ವಿಶ್ವವ್ಯಾಪಿ ಕರೋನಾ ವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಮನುಕುಲ ಆತಂಕದಲ್ಲಿದೆ, ಇಂತಹ ಕಠೀಣ ಸಂದರ್ಭದಲ್ಲೂ ಸಾಮಾಜಿಕವಾಗಿ ಸಂಘ-ಸಂಸ್ಥೆಗಳು ದನಿಯಾಗಲೇಬೇಕಾದ ಅನಿವಾರ್ಯತೆಗಳಿವೆ, ಈ ನಿಟ್ಟಿನಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕ ತಾವೇ ರೂಪಿಸಿಕೊಂಡ “100 ಪ್ರೋಗ್ರಾಮ್ಸ್” ಎನ್ನುವ ಸೋಷಿಯಲ್ ಡೊನೆಟ್ ಹಾಗೂ ಅರಿವು ಕಾರ್ಯಕ್ರಮಕ್ಕೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಜೈವಿಕ ಯುಧ್ದದಂತಹ ಸಂದರ್ಭದಲ್ಲೂ 100 ಕಾರ್ಯಕ್ರಮಗಳನ್ನು ನಿರ್ಗತಿಕ, ಅಸಾಹಾಯಕ ಸಮುದಾಯದತ್ತ ಸಾಮಾಜಿಕ ಅಂತರ, ವೈಯುಕ್ತಿಕ ಸ್ವಚ್ಚತೆ, ಸ್ಯಾನಿಟೈಸರ್, ಮಾಸ್ಕ್ ಬಳಸಿಯೇ ತೆರಳುತ್ತೇವೆ ಎನ್ನುವ ಗಟ್ಟಿತನ ತಳೆದಿರುವ ಜೆಸಿಐ ಶಿವಮೊಗ್ಗ ಶರಾವತಿ ಘಟಕ ಸಮಸ್ತ ವೃಂದದವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ತಿಳಿಸಿದರು.

100 ಪ್ರೋಗ್ರಾಮ್ಸ್” ಕಾರ್ಯಕ್ರಮದಲ್ಲಿ ನಗರದ ಕುಂಬಾರಗುಂಡಿಯಲ್ಲಿ ವಾಸವಾಗಿರುವ ಮಂಜುಳರವರ ಕುಟುಂಬಕ್ಕೆ ಮನೆಯಲ್ಲಿ ಉಪಯೋಗಿಸುವ “ಗೃಹ ಉಪಯೋಗಿ” ಸಾಮಾಗ್ರಿಗಳನ್ನು ಉಚಿತವಾಗಿ ಘಟಕದಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಜೆಸಿ.ಗಾರಾ.ಶ್ರೀನಿವಾಸ್, ಉಪಾಧ್ಯಕ್ಷರಾದ ಜೆಸಿ.ಮೋಹನ್ ಕಲ್ಪತರು, ಬುಲೇಟಿನ್ ಎಡಿಟರ್ ಜೆಸಿ. ಕವಿತಾ ಸಾಗರ್, ನಿರ್ದೇಶಕರಾದ ಜೆಸಿ.ಚಿರಂಜೀವಿ ಬಾಬು, ಸೇರಿದಂತೆ ಉಧ್ಯಮಿ ಶಿವಕುಮಾರ್ , ಅಕ್ಷಯ್ ಕಾರ್ ಸ್ಪಾ ಮಾಲೀಕರಾದ ಚಂದ್ರಹಾಸ್ ಎನ್ ರಾಯ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

 

Related posts

ಶಿವಮೊಗ್ಗ :  ಇಂದು ಕೊರೊನಾಕ್ಕೆ ಒಬ್ಬರ ಬಲಿ… ಮೃತರ ಸಂಖ್ಯೆ 6ಕ್ಕೆ…..

ಬಹುತ್ವದ ಭಾರತದಲ್ಲಿ ಪರಸ್ಪರ ಸಾಹಿತ್ಯ ಅನುವಾದದ ಅಗತ್ಯವಿದೆ – ಸಾಹಿತ್ಯ ಎಲ್ಲಾ ಕಾಲದಲ್ಲೂ ವೈಚಾರಿಕತೆಯನ್ನೇ ಹೇಳಬೇಕು

Times fo Deenabandhu

ಮಲೆನಾಡು ಭಾಗದ ಸಣ್ಣ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಭೂ ಕಂದಾಯ ಕಾಯ್ದೆ 2007ಕ್ಕೆ ತಿದ್ದುಪಡಿ – ಸಂಸದ ಬಿ.ವೈ.ರಾಘವೇಂದ್ರ

Times fo Deenabandhu