Times of Deenabandhu
  • Home
  • ಜಿಲ್ಲೆ
  • ಎಲ್ಲರ ವಿಶ್ವಾಸ ಪಡೆದುಕೊಂಡೇ ಕಟ್ಟಡ ನಿರ್ಮಿಸಲಾಗುವುದು.: ಜಯಲಕ್ಷ್ಮಿ
ಚಿಕ್ಕಮಗಳೂರು ಜಿಲ್ಲೆ

ಎಲ್ಲರ ವಿಶ್ವಾಸ ಪಡೆದುಕೊಂಡೇ ಕಟ್ಟಡ ನಿರ್ಮಿಸಲಾಗುವುದು.: ಜಯಲಕ್ಷ್ಮಿ

ಮೂಡಿಗೆರೆ, ಜೂ.29: ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಈಗಿನ ಬಿಜೆಪಿ ಆಡಳಿತ ಮಂಡಳಿ ನಿರ್ಧರಿಸಿರುವುದು ಸರಿಯಲ್ಲವೆಂದು ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ ಮಾಜಿ ಅಧ್ಯಕ್ಷೆ ಕಮಲಾಕ್ಷಮ್ಮ ಹೇಳಿಕೆ ನೀಡಿದ್ದಾರೆ. ನಾವು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗುವುದಾಗಿ ಸಹಕಾರ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ ರಾಮೇಗೌಡ ಸ್ಪಷ್ಟಪಡಿಸಿದರು.

            ಅವರು ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 22 ವರ್ಷದ ಹಿಂದೆ ಕಟ್ಟಿದ ಸಹಕಾರ ಸಂಘದ ಕಟ್ಟಡ ನಿರ್ವಹಣೆ ಇಲ್ಲದೇ ಶಿಥಿಲಗೊಂಡಿದೆ. ಕಳೆದ ವರ್ಷ ಮಳೆಗಾಲದಲ್ಲಿ ಮಳೆ ನೀರು ಸೋರಿಕೆಯಾಗಿದ್ದರಿಂದ ಸಂಘಕ್ಕೆ ರಜೆ ನೀಡಲಾಗಿತ್ತು. ಈ ಬಾರಿ ಕುಸಿದು ಬೀಳುವ ಅಪಾಯದಲ್ಲಿದೆ. ಕಟ್ಟಡದಲ್ಲಿ ಕುಳಿತು ವ್ಯವಹಾರ ಮತ್ತು ಸಭೆ ನಡೆಸಲು ಭಯವಾಗುತ್ತದೆ. ಹಾಗಾಗಿ ಕಟ್ಟಡ ತೆರವುಗೊಳಿಸಿ ದಾನಿಗಳಿಂದ ಧನ ಸಹಾಯ ಪಡೆದು ಬೇರೆ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಪಕ್ಷ ರಾಜಕೀಯವಿಲ್ಲ. ಹಿಂದಿನ ಆಡಳಿತದಲ್ಲಿ ಅವ್ಯವಹಾರವಾಗಿದ್ದು, ಅದನ್ನು ತನಿಖೆಗೆ ಒಪ್ಪಿಸುವುದು ಸೂಕ್ತವಾಗಿದೆ ಎಂದು ತಿಳಿಸಿದರು.

            ಸಂಘದ ಮಾಜಿ ಅಧ್ಯಕ್ಷೆ ಆಶಾ ಮೋಹನ್ ಮಾತನಾಡಿ, ಮಹಿಳೆಯರು ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ. ಹಿಂದೆ ಸಂಘದಲ್ಲಿ 2896 ಸದಸ್ಯರಿದ್ದರು. ಈಗ 3020ಕ್ಕೇರಿಸಲಾಗಿದೆ. ಹೊಸ ಸದಸ್ಯತ್ವಕ್ಕೆ 150 ರೂ ಶುಲ್ಕ ಪಡೆಯುತ್ತಿದ್ದೇವೆ. ತಾನು ಅಧ್ಯಕ್ಷೆಯಾಗಿದ್ದಾಗ ಹಿಂದಿನ ಆಡಳಿತ ಮಂಡಳಿಯವರು ತನನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಆದರೂ ಅವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗಿದೆ. ಮೋಟಮ್ಮ ಅವರು ಸಂಘವನ್ನು ಒಳ್ಳೆಯ ಉದ್ದೇಶದಿಂದ ಕಟ್ಟಿದ್ದಾರೆ. ಆದರೆ ಅದು ಹೇಗೆ ನಡೆಯುತ್ತಿದೆ ಎಂದು ತಿರುಗಿ ನೋಡಬೇಕಿತ್ತು.  ಸಂಘದಲ್ಲಿ ಕುಟುಂಬ ರಾಜಕೀಯ ಮಾಡಿಕೊಂಡು ಕುಟುಂಬದವರೇ ಹಲವು ಬಾರಿ ಅಧ್ಯಕ್ಷರಾಗಿ ದುರಾಡಳಿತ ನಡೆಸಿದ್ದರಿಂದ ಈ ಬಾರಿ ಚುನಾವಣೆ ನಡೆಸಿ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.

            ತಾ.ಪಂ. ಮಾಜಿ ಅಧ್ಯಕ್ಷೆ ನೇಪಾ ಆದಿತ್ಯ ಮಾತನಾಡಿ, ಸಹಕಾರ ಸಂಘಕ್ಕೆ ಸರಕಾರದಿಂದ ಬಿದರಹಳ್ಳಿ ಗ್ರಾಮದಲ್ಲಿ ನಿವೇಶನ ಮಂಜೂರಾಗಿತ್ತು. ಅದೀಗ ಹಿಂದಿನ ಆಡಳಿತದವರ ಪಾಲಾಗಿದೆ. ಮಹಿಳೆಯರ ಅಭಿವೃದ್ಧಿಗೆ ಮೀಸಲಾಗಿರುವ ಮಹಿಳಾ ಸಹಕಾರ ಸಂಘವನ್ನು ಮಾಜಿ ಅಧ್ಯಕ್ಷೆಯೋರ್ವರು ದುರುಪಯೋಗ ಪಡಿಸಿಕೊಂಡಿದ್ದರೆಂದು ದೂರಿದರು.

            ಗೋಷ್ಠಿಯಲ್ಲಿ ಭಾರತೀ ರವೀಂದ್ರ, ಸರೋಜಾ ಸುರೇಂದ್ರ, ಪುಟ್ಟಮ್ಮ ಚಂದ್ರೇಗೌಡ, ಸುಚಿತ್ರ ಜಗದೀಶ್, ಶಾಂತಲಾ ನಾಗೇಶ್, ಅನುಷಾ, ವಿನುತಾ ಪ್ರಸಾಧ್, ರೇಖಾ ಅಶೋಕ್, ಯೋಗಿನಿ ರಾಜಶೇಖರ್ ಉಪಸ್ಥಿತರಿದ್ದರು.

 

 

 

 

 

Related posts

ಕಾರ್ಮಿಕರ ದಿನಾಚರಣೆಯಂದು ಕಾಯಂ ಪೌರಕಾರ್ಮಿಕರನ್ನಾಗಿ ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಒತ್ತಾಯ

Times fo Deenabandhu

ಮರಳು ಬ್ಲಾಕ್‌ಗಳ ನಿರ್ವಾಹಕರು ನಿಯಮ ಪಾಲಿಸಲು ಸೂಚನೆ : ಡಿ.ಸಿ.

Times fo Deenabandhu

ರ್ಯಾಪಿಡ್ ಟೆಸ್ಟ್ ಕಿಟ್ಸ್ ಮೂಲಕ ವೈದ್ಯಕೀಯ ಸಿಬ್ಬಂದಿಗಳ ತಪಾಸಣೆ :ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Times fo Deenabandhu