Times of Deenabandhu
  • Home
  • ಜಿಲ್ಲೆ
  • ಅಭಿವೃದ್ಧಿ ಪಡಿಸಿ ಕೃಷಿ ಮಾಡಿಕೊಂಡು ಬಂದಿದ್ದ ತೋಟವನ್ನು ಉಳಿಸಿಕೊಡಲು ಆಗ್ರಹ
ಚಿಕ್ಕಮಗಳೂರು ಜಿಲ್ಲೆ

ಅಭಿವೃದ್ಧಿ ಪಡಿಸಿ ಕೃಷಿ ಮಾಡಿಕೊಂಡು ಬಂದಿದ್ದ ತೋಟವನ್ನು ಉಳಿಸಿಕೊಡಲು ಆಗ್ರಹ

ಮೂಡಿಗೆರೆ, ಜೂ.29: ಕಳೆದ 25 ವರ್ಷದಿಂದ ಕಾಫಿ ತೋಟ ಮಾಡಿಕೊಂಡು ಬಂದಿರುವ ನನ್ನ ಜಮೀನನ್ನು ಗ್ರಾಮದ ಕೆಲ ಶ್ರೀಮಂತರು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ತಾಲೂಕಿನ ಮುಗ್ರಹಳ್ಳಿ ಗ್ರಾಮದ ನಿವಾಸಿ ಮಂಜುನಾಥ್ ದೂರಿದರು.
ಅವರು ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳೆಕೋಟೆ ಗ್ರಾಮದ ಸರ್ವೆ ನಂ 288ರಲ್ಲಿ 3.8 ಎಕರೆ ಜಮೀನಿನಲ್ಲಿ 1991ರಲ್ಲಿ ಕಾಫಿ, ಬಾಳಿಎ, ಅಡಕೆ, ಏಲಕ್ಕಿ ಗಿಡ ನೆಟ್ಟು ತೋಟ ಮಾಡಿಕೊಂಡಿದ್ದೇನೆ. ಇದೂವರೆಗೂ ಯಾವುದೇ ತೊಂದರೆ ಇರಲಿಲ್ಲ. ಈಗ ಗ್ರಾಮದ ಕೆಲ ಶ್ರೀಮಂತರು ದಲಿತರಿಗೆ ಗ್ರಾಮದಲ್ಲಿ ಜಾಗವಿರಬಾರದೆಂಬ ಉದ್ದೇಶದಿಂದ ಸ್ಮಶಾನಕ್ಕೆ ತನ್ನ ತೋಟವನ್ನು ಬಿಟ್ಟು ಕೊಡುವಂತೆ ತಹಸೀಲ್ದಾರರಿಗೆ ಅರ್ಜಿ ನೀಡಿದ್ದಾರೆ. ಹಾಗಾಗಿ ತಾಲೂಕು ಆಡಳಿತದಿಂದ ಸರ್ವೆ ನಡೆಸಲಾಗಿದೆ ಎಂದು ಹೇಳಿದರು.
ತಾನು ಹಿಂದಿನಿಂದಲೇ ತೋಟದಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ ವರದಿಯನ್ನು ತಹಸೀಲ್ದಾರರಿಗೆ ಸರ್ವೆಯವರು ಸಲ್ಲಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಸೇರಿ ಅಭಿವೃದ್ಧಿ ಪಡಿಸಿರುವ ತೋಟವನ್ನು ಯಾರೂ ಕಬಳಿಸದಂತೆ ತೋಟವನ್ನು ಉಳಿಸಿಕೊಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುದ್ದುರಾಜು ಇದ್ದರು.

Related posts

ನಾವೆಲ್ಲರೂ ಸರ್ಕಾರದ ಜೊತೆಗೆ ಇದ್ದೇವೆ. ಸರ್ಕಾರವೂ ನಮ್ಮ ಜೊತೆಗೆ ಇರಬೇಕು- ಕಿಮ್ಮನೆ ರತ್ನಾಕರ್

Times fo Deenabandhu

ವಿದ್ಯಾರ್ಥಿಗಳ ಜೀವನ ಉಜ್ವಲಗೊಳಿಸಲು ಶಿಕ್ಷಣ ಸಂಸ್ಥೆಗಳಿಂದ ಸಾಧ್ಯ: ಕೆ.ಸಿ.ರತನ್

ಸಮಸ್ತ ಕನ್ನಡಿಗರಿಗೆ ಯಕ್ಷಗಾನ ಮೆಚ್ಚಿಸಲು ಬಾ.ಸಾಮಗ ಕರೆ

Times fo Deenabandhu