Times of Deenabandhu
  • Home
  • ಪ್ರಧಾನ ಸುದ್ದಿ
  • ಸಂಜೆ 4ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಷಣ..! ದೇಶವಾಸಿಗಳಲ್ಲಿ ಗರಿಗೆದರಿದ ಕುತೂಹಲ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಸಂಜೆ 4ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಷಣ..! ದೇಶವಾಸಿಗಳಲ್ಲಿ ಗರಿಗೆದರಿದ ಕುತೂಹಲ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಜೂನ್‌ 30 ಸಂಜೆ 4ಕ್ಕೆ ರಾಷ್ಟ್ರವನ್ನುದ್ದೇಶೀಸಿ ಮಾತನಾಡಲಿದ್ದಾರೆ. ಕೇಂದ್ರ ಸರಕಾರ ಚೀನಾದ 59 ಆಪ್‌ಗಳನ್ನು ನಿಷೇಧಿಸಿದ ಮರುದಿನವೇ ಮೋದಿ ಭಾಷಣ ನಿಗದಿಯಾಗಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಚೀನಾ ವಿರುದ್ಧ ಕೇಂದ್ರ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳ ಬಗ್ಗೆ ಮೋದಿ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಟ್ವೀಟ್‌ ಮಾಡಿ ಜೂನ್‌ 30 ಸಂಜೆ 4ಕ್ಕೆ ಭಾಷಣ ನಿಗದಿಯಾಗಿರುವುದನ್ನು ಖಚಿತಪಡಿಸಿದೆ.
ಪ್ರಧಾನಿ ಮಂಗಳವಾರ ಯಾವ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂಬುದು ಇನ್ನು ಬಹಿರಂಗವಾಗಿಲ್ಲ. ಆದರೆ, ಚೀನಾದ ಆಪ್‌ಗಳ ನಿಷೇಧದ ಬಗ್ಗೆ ಹಾಗೂ ಬಾಯ್ಕಾಟ್‌ ಚೀನಾ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಜೊತೆಗೆ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಘೋಷಿಸಿ 100 ದಿನ ಸಮೀಪಿಸುತ್ತಿರುವ ಹಿನ್ನೆಲೆ ಮೋದಿ ಮಾತು ಮಹತ್ವ ಪಡೆದಿದೆ.

ಇನ್ನು, ದೇಶದಲ್ಲಿ ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಮತ್ತೆ ಲಾಕ್‌ಡೌನ್‌ ಚರ್ಚೆಯು ಕೂಡ ದೇಶದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ಕೂಡ ಪ್ರಧಾನಿ ಭಾಷಣ ದೇಶದ ಗಮನಸೆಳೆದಿದ್ದು, ದೇಶವಾಸಿಗಳಲ್ಲಿ ಹಲವು ಕುತೂಹಲಗಳು ಗರಿಗೆದರಿವೆ. ಈ ಹಿಂದೆ ಮಾರ್ಚ್‌ 24ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದ್ದರು, ವಿಸ್ತರಣೆ ಸಮಯದಲ್ಲಿಯೂ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು.

Related posts

2 ದಿನ ಕೋಣೆಯಿಂದ ಮಹಿಳೆಯನ್ನು ಹೊರಗೆ ಬರಲು ಬಿಡದ ಬೆಕ್ಕುಗಳು!

Times fo Deenabandhu

ಇನ್ಫೊಸಿಸ್ ನಾರಾಯಣ ಮೂರ್ತಿ ಅಳಿಯ ಬ್ರಿಟನ್‌ ಹಣಕಾಸು ಸಚಿವ

Times fo Deenabandhu

ಪೌರತ್ವ ತಿದ್ದುಪಡಿ ಕಾಯ್ದೆ ಶೇ.1000 ಪಟ್ಟು ಸರಿ: ಪ್ರತಿಭಟನೆಗಳಿಗೆ ಕಾಂಗ್ರೆಸ್​​ ಮಿತ್ರಪಕ್ಷಗಳು ಕಾರಣ

Times fo Deenabandhu