Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಜುಲೈ 27ರ ಒಳಗೆ ಭಾರತಕ್ಕೆ ಆರು ರಫೇಲ್‌ ಯುದ್ಧ ವಿಮಾನ

ನವದೆಹಲಿ: ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಕಟ್ಟೆಚ್ಚರದಲ್ಲಿರುವ ಭಾರತೀಯ ವಾಯುಪಡೆಯ ಬತ್ತಳಿಕೆಗೆ ಜುಲೈ 27ರೊಳಗಾಗಿ ಮೊದಲ ಹಂತದಲ್ಲಿ ಆರು ರಫೇಲ್‌ ಯುದ್ಧ ವಿಮಾನಗಳು ಹಸ್ತಾಂತರವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಫೇಲ್‌ ಯುದ್ಧ ವಿಮಾನದ ಮೊದಲ ಸ್ಕ್ವಾಡ್ರನ್‌ ಅಂಬಾಲ ವಾಯುನೆಲೆಯಲ್ಲಿ ಇರಲಿದ್ದು, ರಫೇಲ್‌ ಸೇರ್ಪಡೆಯಿಂದ ವಾಯುಪಡೆಯ ಬಲ ಮತ್ತಷ್ಟು ಹೆಚ್ಚಲಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ₹58 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು 2016 ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಫ್ರಾನ್ಸ್‌ ಒಪ್ಪಂದ ಮಾಡಿಕೊಂಡಿತ್ತು.
ಜೂನ್‌ 2ರಂದು ರಕ್ಷಣಾ ಸಚಿವ ರಾಜ‌ನಾಥ್‌ ಸಿಂಗ್‌ ಹಾಗೂ ಫ್ರಾನ್ಸ್‌ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲೆ ಅವರ ಜೊತೆ ದೂರವಾಣಿ ಮಾತುಕತೆ ನಡೆಸಿದ್ದರು. ಕೋವಿಡ್‌–19 ಪಿಡುಗಿನಿಂದ ಫ್ರಾನ್ಸ್‌ ತತ್ತರಿಸಿದ್ದರೂ, ನಿಗದಿತ ಅವಧಿಯೊಳಗೇ ಎಲ್ಲ ಯುದ್ಧ ವಿಮಾನಗಳನ್ನು ಪೂರೈಸುವ ಭರವಸೆಯನ್ನು ಸಚಿವೆ ನೀಡಿದ್ದರು.

Related posts

‘ರೆಮ್‌ಡೆಸಿವಿರ್‌’ ತಯಾರಿಸಲು ಭಾರತದ ಕಂಪನಿಗಳಿಗೆ ಲೈಸನ್ಸ್‌ ನೀಡಿ: ಸಿಪಿಐ(ಎಂ)

ಆಪರೇಷನ್ ಕಮಲದ ಪಿತಾಮಹ ಮಿಸ್ಟರ್ ಯಡಿಯೂರಪ್ಪ: ಸಿದ್ದರಾಮಯ್ಯ ಟೀಕೆ

Times fo Deenabandhu

ಚೀನಾ ತಯಾರಿತ ಮೊಬೈಲ್,​ ಟ್ಯಾಬ್ಲೆಟ್ಸ್​ ನಮಗೆ ಬೇಡ: ಬಜೆಟ್​ ಅಧಿವೇಶನದಲ್ಲಿ ಕಾಂಗ್ರೆಸ್​ ನಾಯಕರ ಒತ್ತಾಯ