Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ವಿಶ್ವದ ಅತಿ ದೊಡ್ಡ ಪ್ಲಾಸ್ಮಾ ಚಿಕಿತ್ಸೆ ಯೋಜನೆಗೆ ಚಾಲನೆ

ಮುಂಬೈ: ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಬೃಹತ್‌ ಪ್ಲಾಸ್ಮಾ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ.
ಇದು ಜಗತ್ತಿನಲ್ಲೇ ಚಿಕಿತ್ಸೆ ಜತೆಗೆ ಪ್ರಯೋಗ ನಡೆಸುವ ಅತಿ ದೊಡ್ಡದಾದ ಪ್ಲಾಸ್ಮಾ ಯೋಜನೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಸೋಂಕಿನಿಂದ ಗುಣಮುಖರಾದ ಜನರ ರಕ್ತದಿಂದ ಪ್ಲಾಸ್ಮಾ ಪಡೆದುಕೊಂಡು ಸದ್ಯ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಸೇರಿಸುವ ಪ್ರಕ್ರಿಯೆ ಇದಾಗಿದೆ. ಸಕ್ರಿಯವಲ್ಲದ ದೇಹನಿರೋಧಕ ಚಿಕಿತ್ಸೆ ಎಂದು ಸಹ ಇದನ್ನು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಯೋಜನೆಗೆ ‘ಪ್ಲಾಟಿನಾ’ ಎಂದು ಕರೆಯಲಾಗಿದೆ. ಈ ಯೋಜನೆ ಮೂಲಕ ಗಂಭೀರ ಸ್ಥಿತಿಯಲ್ಲಿರುವ ಸುಮಾರು 500 ಕೋವಿಡ್‌–19 ರೋಗಿಗಳ ಜೀವ ಉಳಿಸುವ ಉದ್ದೇಶವಿದೆ. 21 ವೈದ್ಯಕೀಯ ಕಾಲೇಜುಗಳಲ್ಲಿ ಈ ಬಗ್ಗೆ ಪ್ರಯೋಗ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಎಲ್ಲ ರೋಗಿಗಳು ಉಚಿತವಾಗಿ 200 ಮಿ.ಲೀ. ಪ್ಲಾಸ್ಮಾ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

Related posts

ಲಾಕ್‌ಡೌನ್ ಅವಧಿ ಮೇ.3ರವರೆಗೆ ವಿಸ್ತರಣೆ: ದೇಶಕ್ಕೆ ಸಪ್ತ ಸೂತ್ರಗಳನ್ನು ನೀಡಿದ ಪ್ರಧಾನಿ ಮೋದಿ

Times fo Deenabandhu

ವಿಚಿತ್ರವಾಗಿ ವರ್ತಿಸುವ ಮೂಲಕ ಕ್ಯಾನ್ಸರ್​ ಪತ್ತೆಹಚ್ಚಿ ಮಾಲಕಿಯ ಜೀವ ಉಳಿಸಿದ ಶ್ವಾನಗಳ ರೋಚಕ ಕತೆಯಿದು!

Times fo Deenabandhu

ರೇವತಿಯಂತಹ ಹುಡುಗಿ ಸಿಗಲು ನಾನು ಪುಣ್ಯ ಮಾಡಿದ್ದೆ, ಅವರು ಖಂಡಿತ ಹೊಂದಿಕೊಂಡು ಹೋಗುತ್ತಾರೆ: ನಿಖಿಲ್​ ಕುಮಾರಸ್ವಾಮಿ

Times fo Deenabandhu