Times of Deenabandhu
  • Home
  • ಪ್ರಧಾನ ಸುದ್ದಿ
  • ರಾಜ್ಯದಲ್ಲಿ ಇಂದು ಕೂಡ  1000 ಗಡಿ ದಾಟಿದ ಕೊರೊನಾ…….19  ಸಾವು….. ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ ಸೋಂಕು…….ಇಲ್ಲಿದೆ ಫುಲ್ ಡಿಟೈಲ್ಸ್……   
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ರಾಜ್ಯದಲ್ಲಿ ಇಂದು ಕೂಡ  1000 ಗಡಿ ದಾಟಿದ ಕೊರೊನಾ…….19  ಸಾವು….. ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ ಸೋಂಕು…….ಇಲ್ಲಿದೆ ಫುಲ್ ಡಿಟೈಲ್ಸ್……   

ಬೆಂಗಳೂರು ಜೂ.29: ರಾಜ್ಯದಲ್ಲಿ ಇಂದು ಕೂಡ  1000 ಗಡಿ ದಾಟಿದ ಕೊರೊನಾ ಸೋಂಕು. ಒಟ್ಟು ಇಂದು ….1105 ಜನರಿಗೆ ಸೋಂಕು ಕಾಣಿಸಿಕೊಂಡಿದೆ.. ಇಂದು ಕೂಡ ಕೊರೊನಾಕ್ಕೆ ರಾಜ್ಯದಲ್ಲಿ 19 ಜನರನ್ನು ಬಲಿಯಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲಿಯೇ ಬರೋಬ್ಬರಿ 738 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಬಳ್ಳಾರಿ 76, ದಕ್ಷಿಣಕನ್ನಡದಲ್ಲಿ 32 ಜನರಲ್ಲಿ  ಸೋಂಕು ದೃಢವಾಗಿದೆ. ಉಡುಪಿಯಲ್ಲಿ 18 ಜನರಲ್ಲಿ ಸೋಂಕು ಪತ್ತೆಯಾಗಿದೆ.  ಶಿವಮೊಗ್ಗದಲ್ಲಿ ಇಂದು ಕೂಡ  5 ಜನರಲ್ಲಿ  ಪಾಸಿಟಿವ್ ಕಾಣಿಸಿಕೊಂಡಿದೆ.. ಇದರೊಂದಿಗೆ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ 151 ಕ್ಕೆ ಏರಿಕೆಯಾಗಿದೆ. ಒಟ್ಟು 109 ಜನ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ 40 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಒಟ್ಟು 14295 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಇದೂವರೆಗೆ 7683 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಕೋವಿಡ್ ನಿಂದಾಗಿ 226 ಜನ ಮರಣ ಹೊಂದಿದ್ದಾರೆ.

ಇದು ಇಂದು ಸಂಜೆ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಹೆಲ್ತ್   ಬುಲೆಟಿನ್ ಮಾಹಿತಿಯಾಗಿದೆ.

 

Related posts

ಹೊಸ ಇತಿಹಾಸ ನಿರ್ಮಾಣಕ್ಕೆ ನಾಂದಿಯಾಗಲಿರುವ ನಾಳಿನ ಅಸಂಖ್ಯ ಪ್ರಮಥರ ಗಣಮೇಳ

Times fo Deenabandhu

ನಿಂಬೆ ಹಣ್ಣಿನ ಬಣ್ಣದ ಮರಿಗೆ ಜನ್ಮ ನೀಡಿದ ಶ್ವಾನ

Times fo Deenabandhu

ಮನೆಯಲ್ಲೇ ಕೊರೊನಾ ಪರೀಕ್ಷೆಗೆ ಬಂದಿದೆ ಕಿಟ್‌: 10 ನಿಮಿಷದಲ್ಲೇ ರಿಸಲ್ಟ್‌!!