September 27, 2020
Times of Deenabandhu
  • Home
  • ನಮ್ಮ ವಿಶೇಷ
  • ಕೊಲ್ಕೋತಾದಲ್ಲೊಂದು  ವಿಚಿತ್ರ ಘಟನೆ:  9 ವರ್ಷ ತನ್ನೊಡನೆ ಜೀವನ ನಡೆಸಿದ್ದ ಪತ್ನಿ … ಅವನಾಗಿದ್ದೇಗೆ? 
ನಮ್ಮ ವಿಶೇಷ

ಕೊಲ್ಕೋತಾದಲ್ಲೊಂದು  ವಿಚಿತ್ರ ಘಟನೆ:  9 ವರ್ಷ ತನ್ನೊಡನೆ ಜೀವನ ನಡೆಸಿದ್ದ ಪತ್ನಿ … ಅವನಾಗಿದ್ದೇಗೆ? 

 

ಕೊಲ್ಕೋತಾ: ಅತ್ಯಂತ ಸುಖ ಸಂಸಾರ, ಎಷ್ಟರಮಟ್ಟಿನ ಸುಖವೆಂದರೆ ಅಕ್ಕ-ಪಕ್ಕದವರು ಹೊಟ್ಟೆಕಿಚ್ಚು ಪಡುವಷ್ಟು, ಗಂಡ-ಹೆಂಡತಿಯರೆಂದರೆ ಹೀಗಿರಬೇಕಪ್ಪ ಅಂದುಕೊಳ್ಳುವ ಹಾಗೆ ಜೀವನ ನಡೆಸುತ್ತಿದ್ದರು. 9 ವರ್ಷದ ಹಿಂದೆ ಮದುವೆಯಾಗಿದ್ದರು. 30 ವರ್ಷ ಪ್ರಾಯದ ತನ್ನ ಪತ್ನಿಗೆ ಇದ್ದಕ್ಕಿದ್ದಂತೆ ಒಂದು ದಿನ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ತಕ್ಷಣ ಕೊಲ್ಕೋತಾದ ನೇತಾಜಿ ಸುಭಾಶ್ ಚಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಹೋಗಿದ್ದ ಆಕೆಯನ್ನು ಪರೀಕ್ಷಿಸಿದ ಡಾಕ್ಟರ್ ಗಳು ಒಂದೇ ಸಾರಿಗೆ  ಬೆಸ್ತ್ ಬಿದ್ದಿದ್ದಾರೆ. ಯಾಕೆಂದರೆ ಸಂಪೂರ್ಣ ಹೆಣ್ಣಿನ ಗುರುತನ್ನು ಹೊಂದಿದ್ದ ಆಕೆ ಮಹಿಳೆಯಲ್ಲ, ಪುರುಷ ಎಂದು ಕಂಡುಬಂದಿದೆ.

ಕೆಲ ಸಂದರ್ಭದಲ್ಲಿ ವ್ಯಕ್ತಿ ಅನುವಂಶಿಕವಾಗಿ ಪುರುಷನಾಗಿದ್ದರೂ, ಹುಟ್ಟುತ್ತಾ ಮಹಿಳೆಯ ಲಕ್ಷಣ ತುಂಬಿಕೊಂಡಿruttare. ಹೇಗೆಂದರೆ, 30 ವರ್ಷ ಹೆಣ್ಣಿನಂತೆ ಜೀವನ ಮಾಡಿದ್ದ ಆ ವ್ಯಕ್ತಿಗೆ ಸ್ತ್ರೀಯರಿಗೆ ಇರಬೇಕಾದ ಗರ್ಭಕೋಶ ಹಾಗೂ ಅಂಡಾಶಯವೇ ಇರಲಿಲ್ಲ. ಹೀಗಾಗಿ ಋುತುಮತಿಯೂ ಆಗಿರಲಿಲ್ಲ. ಆದರೆ, ಮಹಿಳೆಯರ ಬಾಹ್ಯ ಅಂಗಗಳಾದ ಸ್ತನ ಹಾಗೂ ಸ್ತ್ರೀ ಜನನಾಂಗವಿದೆ. ಅವರ ಹೊಟ್ಟೆಯೊಳಗೆ ಬೆಳವಣಿಗೆಯಾಗದ ವೃಷಣಗಳಿದ್ದವು. ಪುರುಷರ ದೇಹದ ಹೊರಭಾಗದಲ್ಲಿರುವ ವೃಷಣಗಳು ಒಳ ಭಾಗದಲ್ಲಿ ಇದ್ದ ಕಾರಣ ಕ್ಯಾನ್ಸರ್‌ಗೆ ಕಾರಣವಾಗಿದೆ. ಅದರ ಪರಿಣಾಮವಾಗಿ ಕಿಬ್ಬೊಟ್ಟೆ ನೋವು ಕಾಣಿಸಿಕೊಂಡಿತ್ತು.

ಇದೇನಾದರೂ ವಂಶಪರಂಪಾರಿಕವಾಗಿ ಬಂದಿರಬಹುದು ಎಂಬ ಅನುಮಾನದಿಂದ ಆಕೆಯ 28 ವರ್ಷದ ಸಹೋದರಿಯನ್ನೂ ಪರೀಕ್ಷೆ ಮಾಡಿಸಿದಾಗ ಆಕೆಗೂ ಅದೇ ರೀತಿಯ ಲಕ್ಷಣಗಳನ್ನು ಹೊಂದಿರುವುದು ಪತ್ತೆಯಾಗಿದೆ. ತಜ್ಞರ ಪ್ರಕಾರ ಇದು ವಂಶಪರಂಪಾರಿಕವಾಗಿ ಬಂದಿದ್ದು, ವರ್ಷಕ್ಕೆ 22 ಸಾವಿರ ಜನರಲ್ಲಿ ಒಬ್ಬರು ಹುಟ್ಟುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.”ಹೊರಗಿನಿಂದ ನೋಡುವಾಗ ಸಂಪೂರ್ಣ ಹೆಣ್ಣಿನಂತೆಯೇ ಇರುತ್ತಾರೆ. ಧ್ವನಿ, ನೋಟ, ಬೆಳವಣಿಗೆಯಾಗಿರುವ ಸ್ತನಗಳು ಇರುತ್ತವೆ. ತಜ್ಞರ ಪ್ರಕಾರ ಇಂಥ ವ್ಯಕ್ತಿಗಳಿಗೆ ಅಸಹಜ ಸ್ತ್ರೀ ಜನನಾಂಗವಿರುತ್ತದೆ. ಅಂದರೆ ಜನನಾಂಗವು ಸಂತಾನೋತ್ಪತ್ತಿ ಭಾಗಗಳಿಗೆ ಸಂಪರ್ಕ ಹೊಂದಿರುವುದಿಲ್ಲ. ಇವರಿಗೆ ಲೈಂಗಿಕ ಸುಖವೂ ದೊರೆಯುವುದಿಲ್ಲ. ಸ್ತ್ರೀಯರಿಗಿರಬೇಕಾದ ಎಕ್ಸ್‌ಎಕ್ಸ್‌ ಕ್ರೋಮೋಸೋಮ್‌ಗಳ ಬದಲಾಗಿ ಎಕ್ಸ್‌ವೈ ಕ್ರೋಮೋಸೋಮ್‌ಗಳಿರುತ್ತವೆ.

ಸಾಕಷ್ಟು ಸಲ ಮಗುವನ್ನು ಪಡೆಯುವ ಉದ್ದೇಶಕ್ಕೆ ಡಾಕ್ಟರ್ ನ್ನು  ಸಂಪರ್ಕಿಸಿದ್ದಾರೆ. ಆದರೆ, ಅದರಿಂದ ಯಾವುದೇ ರೀತಿಯ ಉಪಯೋಗವಾಗಿಲ್ಲ.. ಈಗ ಕ್ಯಾನ್ಸರ್‌ಗೆ ಒಳಗಾದ ಬಳಿಕ ವಾಸ್ತವ ಅರಿವಿಗೆ ಬಂದಿದೆ.

ಕೃಪೆ:ಟೈಮ್ಸ್ ಆಫ್ ಇಂಡಿಯ

Related posts

ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆ ಶೀಘ್ರ ಅಸ್ಥಿತ್ವಕ್ಕೆ: ಪ್ರೊ. ಶ್ರೀಧರ್

Times fo Deenabandhu

2020ರಲ್ಲಿ ಹನ್ನೆರಡು ರಾಶಿಗಳ ಫಲಾಫಲ ಹೇಗಿರಲಿದೆ ಗೊತ್ತಾ? ಇಲ್ಲಿದೆ ನೋಡಿ ವಾರ್ಷಿಕ ಭವಿಷ್ಯ

Times fo Deenabandhu

ಮಳೆದೇವರು ಕಿಗ್ಗಾದ ಋಷ್ಯಶೃಂಗನಿಗೆ ಅಷ್ಟ ಬಂದ ಮತ್ತು ಕುಂಭಾಭಿಷೇಕ ಸಂಬ್ರಮ

Times fo Deenabandhu