Times of Deenabandhu
  • Home
  • ಜಿಲ್ಲೆ
  • ಶಿವಮೊಗ್ಗ
  • ಹಿಂದಿನವರ ಸಾಧನೆ ಹೊಸ ತಲೆಮಾರಿಗೆ ದಾರಿ ದೀಪವಾಗಲಿ, ಇಬ್ಬರ ಬದುಕು ಸಮಾಜಕ್ಕೆ ಮಾದರಿಯಾಗಿದೆ.
ಜಿಲ್ಲೆ ಶಿವಮೊಗ್ಗ

ಹಿಂದಿನವರ ಸಾಧನೆ ಹೊಸ ತಲೆಮಾರಿಗೆ ದಾರಿ ದೀಪವಾಗಲಿ, ಇಬ್ಬರ ಬದುಕು ಸಮಾಜಕ್ಕೆ ಮಾದರಿಯಾಗಿದೆ.

 

ಶಿವಮೊಗ್ಗ :-ಸಮಾಜಕ್ಕಾಗಿ ದುಡಿದವರನ್ನು ಮತ್ತೆ ಮತ್ತೆ ಜ್ಞಾಪಕ ಮಾಡುವುದರ ಮೂಲಕ ಅವರಿಗೆ ಸಲ್ಲಿಸುವ ಗೌರವ, ಅವರು ಮಾಡಿದ ಸಾಧನೆ, ನಡೆದ ಹಾದಿ ಹೊಸತಲೆಮಾರಿಗೆ ಪರಿಚಯವಾಗಬೇಕಾದ ಅಗತ್ಯ ತುಂಬಾಯಿದೆ. ಎಚ್. ಇಬ್ರಾಹಿಂ ಸಾಹೇಬರು ಮತ್ತು ಸಾಗರದ ಟಿ. ಮಹಾಬಲೇಶ್ವರ ಭಟ್ಟರ ಅಪರೂಪದ ವ್ಯಕ್ತಿಗಳಾಗಿದ್ದರು. ಇಬ್ಬರ ಬದುಕು ಸಮಾಜಕ್ಕೆ ಮಾದರಿಯಾಗಿತ್ತು ಎಂದು ಅಭಿಮಾನದ ಮಾತುಗಳನ್ನಾಡಿದವರು ಖ್ಯಾತ ಕವಿ ಬಿ. ಆರ್. ಲಕ್ಷ್ಮಣ್‍ರಾವ್ ಅವರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆಯು ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ಆನ್‍ಲೈನ್ ಜ್ಯೂಮ್ ಆ್ಯಪ್ ಮತ್ತು ಫೇಸ್‍ಬುಕ್ ಮೂಲಕ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲೆಯ ಸಾಧಕರ ಸಾಧನೆ ಸ್ಮರಣೆ, ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮವನ್ನು ಬೆಂಗಳೂರಿನ ತಮ್ಮ ಮನೆಯಿಂದಲೇ ಪತ್ನಿ ಸಹಿತರಾಗಿ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಹೆಚ್. ಇಬ್ರಾಹಿಂ ಸಾಹೇಬರಂತವರು ನಮ್ಮೊಂದಿಗಿದ್ದರು ಎಂದರೆ ಇವತ್ತಿನವರು ನಂಬಲಾರರು. ಹುಟ್ಟಿದ್ದು ಮುಸ್ಲಿಂರಾಗಿ. ಬೆಳದದ್ದು ಡಿ.ವಿ.ಜಿ. ಯವರ ಕಗ್ಗದ ಸಾಲುಗಳಂತೆ ವನಸುಮವಾಗಿ ಅರಳಿದವರು, ಸರಳತೆ, ಸಜ್ಜನಿಕೆ ಅವರ ಆಭರಣ. ಎಲ್ಲರನ್ನೂ ಇವ ನಮ್ಮವ ಎಂದೆನಿಸಿದವರು. ಎಲ್ಲರಿಗೂ, ಎಲ್ಲದಕ್ಕೂ ಮಹಾ ಪೋಷಕರಾಗಿದ್ದವರು. ಸದಭಿರುಚಿಯ ಮನಸ್ಥಿತಿಯ ಅವರು ಆಗರ್ಭ ಶ್ರೀಮಂತರಾಗಿದ್ದರು ಸರಳತೆ ಅವರ ಆಭರಣವಾಗಿತ್ತು ಎಂದು ವಿವರಿಸಿದರು.

ಹೆಚ್. ಇಬ್ರಾಹಿಂ ಅವರು ಹೆಜ್ಜೆಗುರುತು ಮೆಲಕು ಹಾಕಿದ ಸಿಟಿ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಮಲ್ಲೇಶ್ ಹುಲ್ಲುಮನಿ ಅವರು ಸಾಧಕರ ಸ್ಮರಣೆ ವಿನೂತನವಾಗಿದೆ. ಅವರು ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಅವರ ನೆನಪು ಮಾಡಿಕೊಳ್ಳಲು ಖುಷಿಯಾಗುತ್ತದೆ. ಅಂತವರು ಶಿವಮೊಗ್ಗದಲ್ಲಿದ್ದರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಅವರ ಒಡನಾಟ ನಮ್ಮ ಸೌಭಾಗ್ಯ. ಅವರು ವ್ಯವಹಾರಸ್ತರಾಗಿದ್ದರು, ಆದರೆ ವ್ಯಾಪಾರಿ ಮನೋಭಾವ ಕಾಣಲಿಲ್ಲ. ಎಲ್ಲಾ ಸದ್ಗುಣಗಳ ಗಣಿಯಾಗಿದ್ದರು, ಸಜ್ಜನರು, ಕೊಡುಗೈದಾನಿಗಳಾಗಿದ್ದರು. ಅವರ ನಂತರ ಅಂತಹ ವ್ಯಕ್ತಿತ್ವ ಸಿಗಲಿಲ್ಲ ಎಂದು ವಿವರಿಸಿದರು.

ಸಾಹಿತಿಗಳು, ಉಪನ್ಯಾಸಕರಾಗಿರುವ ಹೊಸಪೇಟೆಯ ಡಾ. ಮೃತ್ಯುಂಜಯ ರುಮಾಲೆ ಅವರು ಮಾತನಾಡಿ ಹಿರೇಹಾಳದ ಇಬ್ರಾಹಿಂ ಸಾಹೇಬರಿಗೆ ತಮ್ಮ ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ. ಅವರು ತಮ್ಮೂರಿನಲ್ಲಿ ಅನಕ್ಷರಸ್ಥ ಕುಂಠ ಇಮಾಮ್ ಇದ್ದರು. ಅವರು ಎಲ್ಲರ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೆ ಪ್ರೇರಣೆ ನೀಡುತ್ತ, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬರುವ ಕೆಲಸ ಮಾಡಿದರು. ಅವರಿಂದ ನಮ್ಮೂರಿನ ಎಲ್ಲಾ ಮಕ್ಕಳು ವಿದ್ಯಾವಂತರಾದರು ಎಂದು ನೆನಪು ಮಾಡಿಕೊಳ್ಳುತ್ತಿದ್ದರು. ಅವರನ್ನ ಹತ್ತಿರದಿಂದ ನೋಡಿದ ನನಗೆ ಒಬ್ಬ ಹಿಂದು ನಿಜವಾದ ಹಿಂದುವಾಗಬೇಕು, ಒಬ್ಬ ಕ್ರಿಶ್ಚಿಯನ್ನು ನಿಜವಾದ ಕ್ರಿಶ್ಚಿಯನ್ನಾಗಬೇಕು. ಒಬ್ಬ ಮುಸ್ಲಿಂ ಮುಸ್ಲಿಂನ್ನಾಗಿರಬೇಕು. ಆಗ ನಿಜವಾದ ಭಾರತೀಯನನ್ನು ಕಾಣಬಹುದು ಎಂದು ವಿವರಿಸಿದರು. ಅವರು ಶಿವಮೊಗ್ಗದ ಜನರು ನಾನು ವ್ಯವಹಾರಕ್ಕೆ ಬಂದಾಗ ನನ್ನನ್ನು ಗೌರವಿಸಿ ಪ್ರೀತಿ ತೋರಿದರು ಎಂದು ಹೆಮ್ಮೆಯಿಂದ ಹೇಳಿದ್ದನ್ನು ನೆನಪು ಮಾಡಿದರು.

ಕವಿಗಳಾದ ಶ್ರೀಮತಿ ಡಿ. ಬಿ. ರಜಿಯಾ ಮಾತನಾಡಿ ಅಪ್ಪಾಜಿಯವರ ಸಾಹಿತ್ಯ ಆಸಕ್ತಿಗೆ ಅವರಿಗೆ ಪಾಠ ಹೇಳಿದ ಕನ್ನಡದ ಮೇಸ್ಟ್ರು ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನಾನು ಕವನ ಬರೆಯಲು ಶುರುಮಾಡಿದಾಗ ಅದನ್ನು ಕೇಳಿ ಅಪ್ಪ ಸಂಭ್ರಮಿಸಿದ್ದನ್ನು ಅವರು ವಿವರಿಸಿದರು.

ಹಿರೇಹಾಳದಿಂದ ಅವರ ಮಗ ಉದ್ಯಮಿ ದಾದಾ ಖಲಂದರ್ ಅವರು ಅಪ್ಪನ ಪ್ರೇರಣೆಯಿಂದ ನಮಗೂ ಸಾಹಿತ್ಯ, ಸಂಗೀತದ ಆಸಕ್ತಿ ಮೂಡಿತು. ಅವರ ಪ್ರಭಾವದಿಂದ ನಮ್ಮ ಸಮುದಾಯಕ್ಕೆ ಸರ್ಕಾರದ ಸೌಲಭ್ಯ ಪಡೆಯಲು ನೆರವಾಯಿತು. ಆಗಿನ ಮಾನ್ಯ ಮುಖ್ಯ ಮಂತ್ರಿಗಳಾಗಿದ್ದ ಜೆ. ಹೆಚ್. ಪಟೇಲ್ ಅವರನ್ನ ಸ್ಮರಿಸಿಕೊಂಡರು. ಮನುಷ್ಯತ್ವಕ್ಕೆ, ಮಾನವೀಯತೆಗೆ ಬೆಲೆಕೊಟ್ಟು ಬೆಳೆದುಬಂದ ಅಪ್ಪನ ಮಗನೆಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.

ಸಾಗರದ ಟಿ. ಮಹಾಬಲೇಶ್ವರ ಭಟ್ಟರು ಸಾಹಿತ್ಯ, ಸಾಂಸ್ಕøತಿಕ ವಲಯಕ್ಕೆ ಜೀವಸಲೆಯಾಗಿದ್ದರು. ಸಂಘಟನೆಯ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರು. ಎಲ್ಲದರಲ್ಲೂ ಅಚ್ಚುಕಟ್ಟುತನ, ಶಿಸ್ತುಬದ್ಧವಾದ, ಮೌಲ್ಯಯುತ ಬದುಕು ಎಲ್ಲರಿಗೂ ಮಾದರಿಯಾಗಿತ್ತು ಎಂದು ಸ್ಮರಿಸಿದವರು ಸಾಹಿತಿಗಳು ಉಪನ್ಯಾಸಕರಾದ ಡಾ. ಸಫ್ರ್ರಾಜ್ ಚಂದ್ರಗುತ್ತಿ ಅವರು. ಅವರು ಕವನ, ಕಥೆ, ಕಾದಂಬರಿ, ಸಂಪಾದನೆ, ಅಂಕಣ ಬರಹ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃತಿಗಳು ಪ್ರಕಟವಾಗಿವೆ.

ನಾಲ್ಕು ನೂರಕ್ಕೂ ಹೆಚ್ಚು ಅಂಕಣ ಬರಹಗಳನ್ನು ಸಂಯುಕ್ತ ಕರ್ನಾಟಕದಲ್ಲಿ ನಿರಂತರ ಬರೆದರು. ಬೇವು ಬೆಲ್ಲ ಶೀರ್ಷಿಕೆಯಲ್ಲಿ ವರ್ಥಮಾನದ ರಾಜಕಾರಣ, ಆರೋಗ್ಯ, ಸಂಘಟನೆ, ಸಹಕಾರ ಸೇರಿದಂತೆ ಹಲವು ವಿಚಾರಗಳ ಮೇಲೆ ಬೆಳಕುಚೆಲ್ಲುವಂತಾಗಿತ್ತು ಎಂದು ವಿವರಿಸಿದರು. ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ದಾಖಲಿಸಿ ಪ್ರವಾಸ ಸಾಹಿತ್ಯದ ಕೊಡುಗೆ ನೀಡಿದರು. ಕನ್ನಡದ ಕುಲದೀಪಕರು ಎಂದು ಬರೆದ ಕೃತಿಯಲ್ಲಿ  ನಾಡಿನ ಎಲ್ಲಾ ಸಾಹಿತಿಗಳ ಪರಿಚಯ ಅದರಲ್ಲಿ ಒಳಗೊಂಡಿದ್ದನ್ನು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಭಟ್ಟರ ಅನುಯಾಯಿಗಳಾದ ಪ್ರಕಾಶ್ ಕಮ್ಮಾರ್, ವಿ. ಟಿ. ಸ್ವಾಮಿ, ಸಾ.ಕೆ. ಸುರೇಶ್ ಅವರುಗಳು ಮಾತನಾಡಿದರು. ಗಾಯಕಿ ರೇಣುಕಾ ಕಾರಂತ ಪ್ರಾರ್ಥಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಮೂರ್ತಿ ಸ್ವಾಗತಿಸಿದರು. ಬೆಂಗಳೂರಿನ ಗಾಯಕ ಅಮೂಲ್ಯ ಭಟ್, ಶಿವಮೊಗ್ಗದ ವಿನಯ್ ಜಿ. ಹೆಬ್ಬಾರ್ ಅವರು ಹಾಡಿದರು. ಕಾರ್ಯದರ್ಶಿ ಡಿ. ಗಣೇಶ್ ವಂದಿಸಿದರು.

 

 

 

Related posts

ಕೃಷಿ ವಿಶ್ವವಿದ್ಯಾಲದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಶೀಘ್ರ ಪೂರ್ಣಗೊಳಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ

ಶ್ರೀಮದ್ರಂಭಾಪುರಿ ಜಗದ್ಗುರು ಶ್ರೀಡಾ.ವೀರಸೋಮೇಶ್ವರ ಶಿವಾಚಾರ್ಯ ಮಹಾಭಗವತ್ಪಾದರ ಜನ್ಮದಿನೋತ್ಸವ

Times fo Deenabandhu

ಫೆ. ೨೪. ಮಾತೃಭಾಷೆ ಈ ಹೊತ್ತಿನ ಸವಾಲುಗಳು ವಿಚಾರ ಸಂಕಿರಣ

Times fo Deenabandhu