Times of Deenabandhu
  • Home
  • ಜಿಲ್ಲೆ
  • ಶಿವಮೊಗ್ಗ ನಗರದಲ್ಲಿ ಹಲವೆಡೆ ಇಂದು ಸೀಲ್ ಡೌನ್ ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ….
ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ಹಲವೆಡೆ ಇಂದು ಸೀಲ್ ಡೌನ್ ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ….

 

ಶಿವಮೊಗ್ಗ ಜೂ.29: ಜಿಲ್ಲೆಯಲ್ಲಿ ಕೊರೋನಾ ಆರ್ಭಟ ದಿನೇ ದಿನೇ ಹೆಚ್ಚಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿ ಇಂದು 8ಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಬಂದಿರುವ ಶಂಕೆ ಇದ್ದು, ನಗರದ ಗಾಡಿಕೊಪ್ಪ, ಭರ್ಮಪ್ಪ ನಗರ, ರಾಜೇಂದ್ರ ನಗರ, ಕೆ.ಆರ್. ಪುರಂ, ಜಿ.ಎಸ್.ಕೆ.ಎಂ ರಸ್ತೆಯ ಪಿಡಬ್ಲ್ಯೂಡಿ ಕ್ವಾಟ್ರ್ರಸ್ ರಸ್ತೆ ಸೀಲ್‍ಡೌನ್ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ. ರಾಜೇಂದ್ರ ನಗರದ 1 ನೇ ತಿರುವಿನ ವೃದ್ಧ ದಂಪತಿಗೆ ಕೊರೋನಾ ಸೋಂಕು ತಗುಲಿದ್ದು, ಜಿಎಸ್‍ಕೆಎಂ ರಸ್ತೆಯ ಪಿಡಬ್ಲ್ಯೂಡಿ ಕ್ವಾಟ್ರ್ರಸ್ ನಿವಾಸಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ತೀರ್ಥಹಳ್ಳಿಯಿಂದ ಹೆಬ್ರಿಗೆ ಓಡಾಡುತ್ತಿದ್ದ ಸ್ಟಾಫ್ ನರ್ಸ್ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವ ಶಂಕೆ ಇದೆ. ಅವರ ಪತಿ ಆಟೋ ಚಾಲಕನಾಗಿದ್ದು, ಸ್ಟಾಫ್ ನರ್ಸ್ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿ, ಅವರ ಪತಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 154ರ ಗಡಿ ದಾಟಿದ್ದು, ಇಂದು ಸಂಜೆ ಅಧಿಕೃತ ಬುಲೆಟಿನ್ ಬಳಿಕ ನಿಖರವಾದ ಮಾಹಿತಿ ಗೊತ್ತಾಗಲಿದೆ.

ನಿನ್ನೆಯವರೆಗೆ 945 ಪರೀಕ್ಷಾ ವರದಿಗಳು ಬರಬೇಕಾಗಿದ್ದು, ನಿನ್ನೆಯವರೆಗೆ ಒಟ್ಟು 146 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇವತ್ತು 8 ಕೇಸು ಸೇರ್ಪಡೆಯಾಗಲಿದೆ ಎನ್ನಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 14,165 ಸ್ಯಾಂಪಲ್ ಸಂಗ್ರಹಿಸಿದ್ದು, 13072  ನೆಗೆಟಿವ್ ವರದಿ ಬಂದಿದೆ. 104 ಜನ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇದುವರೆಗಿನ ಒಟ್ಟು ಪಾಸಿಟಿವ್ ಕೇಸ್ ಗಳಲ್ಲಿ 109 ವಿದೇಶದಿಂದ ಬಂದವರಾಗಿದ್ದಾರೆ. 310 ಜನ ಟ್ರಾವೆಲ್ ಹಿಸ್ಟರಿ ಇರುವವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ನಿನ್ನೆಯವರೆಗೆ 12 ಕಂಟೇನ್ಮೆಂಟ್ ಜೋನ್‍ಗಳಿದ್ದು, ಇಂದು 4 ಸೇರ್ಪಡೆಯಾಗಲಿದೆ ಎನ್ನಲಾಗಿದೆ.

 

Related posts

ತಾಲೂಕು ಆಡಳಿತದಿಂದ ಪಟ್ಟಣಕ್ಕೆ ರಾಸಾಯನಿಕ ಸಿಂಪಡಣೆ ಲಾಕ್ ಡೌನ್ ನಿಯಮದಲ್ಲಿ ಎಲ್ಲಿಯೂ ಲೋಪವಾಗಿಲ್ಲ: ಎಂ.ಪಿ.ಕುಮಾರಸ್ವಾಮಿ

ರೋಟರಿ ಸಂಸ್ಥೆಯಿಂದ ಕ್ಲೀನ್ ಇಂಡಿಯಾ ಜಾಗೃತಿ ಕಾರ್ಯಕ್ರಮ

ನದಿಯಲ್ಲಿ ಸ್ಪೋಟಕ ಸಿಡಿಸುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

Times fo Deenabandhu