September 27, 2020
Times of Deenabandhu
  • Home
  • ಮುಖ್ಯಾಂಶಗಳು
  • ಗಗನಕ್ಕೇರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಏರಿದ ಕೈ ನಾಯಕರು…..
ಮುಖ್ಯಾಂಶಗಳು ರಾಜ್ಯ

ಗಗನಕ್ಕೇರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಏರಿದ ಕೈ ನಾಯಕರು…..

ಬೆಂಗಳೂರು ಜೂ.29: ದೇಶದಲ್ಲಿ ಹಾಗೂ ರಾಜ್ಯದಲ್ಲಿ ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಏರಿದ ಕೈ ನಾಯಕರುಗಳು ಇಂದು ಬೆಂಗಳೂರು ನಗರದಲ್ಲಿ ಸೈಕಲ್ ಸವಾರಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಈ ಸವಾರಿಯ ನೇತೃತ್ವವವನ್ನು ರಾಜ್ಯ ನಿಯೋಜಿತ ಕೆ‌ಪಿ‌ಸಿ‌ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ವಹಿಸಿದ್ದರು. ಇವರಿಗೆ ಜೊತೆಯಾಗಿ ವಿಧಾನಸಭೆ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಶಾಸಕರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಶಿವಾನಂದ ಸರ್ಕಲ್ ನ ನಿವಾಸದಿಂದ ಕೆಪಿಸಿಸಿ ಕಚೇರಿ ಕಡೆಗೆ ಸಿದ್ದರಾಮಯ್ಯನವರು ಸೈಕಲ್ ನಲ್ಲಿ ಹೊರಟರು. ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್ ಮತ್ತು ಚೆಲುವರಾಯ ಸ್ವಾಮಿ ಸಹ ಇವರ ಜೊತೆಯಲ್ಲಿ ಸೈಕಲ್ ತುಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಮೀನ್ಸ್ ಸ್ಕ್ವೇರ್ ವೃತ್ತದಲ್ಲಿರುವ ಆದಾಯ ತೆರಿಗೆ ಕಟ್ಟಡದ ಕಡೆ ಹೊರಟ ಸೈಕಲ್ ಜಾಥಾ ಹೊರಟಿತು.

Related posts

ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ, ಜಾಗತಿಕ ಯೋಚನೆ ಶ್ಲಾಘನೀಯ; ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ

Times fo Deenabandhu

ಕಳೆದ ಬಾರಿಗೆ ಹೋಲಿಸಿದರೆ ಕೊಂಚ ಹಿನ್ನಡೆ ಕಂಡ ಕೇಜ್ರಿವಾಲ್​

Times fo Deenabandhu

  ರಾಜ್ಯದಲ್ಲಿ ಎರಡೂವರೆ ಸಾವಿರದ ಗಡಿ ದಾಟಿದ ಕೊರೊನಾ ಮತ್ತೆ ಸೆಂಚುರಿ..!