Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಒಂದೇ ದಿನ 1267 ಪ್ರಕರಣ, ಬೆಂಗಳೂರಿನಲ್ಲಿ 783

 

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಸಂಜೆ 5ರಿಂದ ಭಾನುವಾರ ಸಂಜೆ 5 ಗಂಟೆ ನಡುವಣ ಅವಧಿಯಲ್ಲಿ 1267 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು, ಅಂದರೆ 783 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ರಾಜ್ಯದಲ್ಲಿ 24 ಗಂಟೆ ಅವಧಿಯಲ್ಲಿ 16 ಸಾವು ಸಂಭವಿಸಿದೆ. ಒಟ್ಟು ಸೋಂಕಿತರ ಸಂಖ್ಯೆ 13,190ಕ್ಕೆ ಏರಿಕೆಯಾಗಿದೆ. ಈವರೆಗೆ 207 ಮಂದಿ ಮೃತಪಟ್ಟಿದ್ದಾರೆ. ಸದ್ಯ 5,472 ಸಕ್ರಿಯ ಪ್ರಕರಣಗಳಿವೆ.

 

ಇಂದು (ಭಾನುವಾರ) 220 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 7,507 ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.‌

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ 27, ಧಾರವಾಡ 18, ಮೈಸೂರು 18, ಬಾಗಲಕೋಟೆ 17, ಉತ್ತರ ಕನ್ನಡ 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್, ಚಿತ್ರದುರ್ಗ ತಲಾ 7, ರಾಯಚೂರು, ಮಂಡ್ಯ, ದಾವಣಗೆರೆ ತಲಾ 6, ವಿಜಯಪುರ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ, ಕೊಪ್ಪಳ ಚಿಕ್ಕಮಗಳೂರು, ಕೊಡಗು ತಲಾ 3, ತುಮಕೂರು 2 ಮತ್ತು ಯಾದಗಿರಿಯಲ್ಲಿ 1 ಪ್ರಕರಣ ವರದಿಯಾಗಿದೆ.

 

Related posts

ದೇಶಾದ್ಯಂತ 60 ಸಾವಿರ ದಾಟಿದ ಸೋಂಕಿತರು: 2000 ಗಡಿ ಮುಟ್ಟಿದ ಮೃತರ ಸಂಖ್ಯೆ!

ನಾವೆಲ್ಲ ಒಂದೇ ದೇಶದವರು, ಒಟ್ಟಾಗಿ ದೇಶ ಕಟ್ಟೋಣ: ಅಜಿತ್ ಡೊಭಾಲ್

Times fo Deenabandhu

ಕೊರೊನಾ ವೈರಸ್‌: ಕಾಸರಗೋಡಿನಲ್ಲಿ 101 ಮಂದಿ ಮೇಲೆ ನಿಗಾ

Times fo Deenabandhu