Times of Deenabandhu
  • Home
  • ಜಿಲ್ಲೆ
  • ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ: ಸಚಿವ ಸಿ.ಟಿ. ರವಿ
ಚಿಕ್ಕಮಗಳೂರು ಜಿಲ್ಲೆ

ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ: ಸಚಿವ ಸಿ.ಟಿ. ರವಿ

ಚಿಕ್ಕಮಗಳೂರು, ಜೂ.೨೭: ಜಿಲ್ಲೆಯನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಹೆಚ್ಚಿನ ಅನುದಾನಗಳನ್ನು ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದರು.
ಅವರು ಇಂದು ಸಖರಾಯಪಟ್ಟಣ ಹಾಗೂ ಬಾಣೂರಿನಲ್ಲಿ ಗ್ರಾಮ ಪಂಚಾಯಿತಿಯ ಮಳಿಗೆ, ರಸ್ತೆಗಳು ಹಾಗೂ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಮತ್ತು ಸ್ತ್ರೀ ಶಕ್ತಿ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಸಖರಾಯಪಟ್ಟಣಕ್ಕೆ ಅದರದೇ ಆದ ಇತಿಹಾಸವಿದ್ದು, ಈ ಪಟ್ಟಣಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕರಿಸಲಾಗಿದೆ ಎಂದ ಅವರು ಕಳೆದ ಬಾರಿ ಭೇಟಿ ನೀಡಿದಾಗ ಮಸೀದಿ ರಸ್ತೆ ಮಾಡಿ ಕೊಡುವುದಾಗಿ ತಿಳಿಸಿದ ಕಾರಣ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ೩೦ ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ ರಸ್ತೆಯನ್ನು ನಿರ್ಮಿಸಲಾಗಿದೆ ಎಂದರು.
ಅಯ್ಯನಕೆರೆ ಅಭಿವೃದ್ಧಿಗೆ ಈ ಹಿಂದೆ ಎರಡು ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿತ್ತು, ಆದರೆ ಈ ಬಾರಿ ಪ್ರವಾಸೋದ್ಯಮವನ್ನು ಹೆಚ್ಚಿನದಾಗಿ ಅಭಿವೃದ್ಧಿಗೊಳಿಸುವ ಸದುದ್ದೇಶದಿಂದ ಪುನಃ ಎರಡು ಕೋಟಿಯನ್ನು ಬಿಡುಗಡೆಗೊಳಿಸಲಾಗಿದೆ ಜೊತೆಗೆ ಸಖರಾಯಪಟ್ಟಣ, ಹಸ್ತಿನಾಪುರ ಮತ್ತು ಕುಮಾರಗಿರಿ ರಸ್ತೆಗೆ ಮೂರು ಕೋಟಿ ರೂಗಳನ್ನು ಬಿಡುಗಡೆಗೊಳಿಸಲಾಗಿದ್ದು ಕಾಮಗಾರಿಯನ್ನು ಕೆಲವೇ ದಿನಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಸಖರಾಯಪಟ್ಟಣದ ಶಕುನಗಿರಿ ರಂಗನಾಥಸ್ವಾಮಿ ದೇವಾಲಯದ ಅಭಿವೃದ್ಧಿ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಮೂರು ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಮತ್ತು ಪಟ್ಟಣದಲ್ಲಿ  ನಿರ್ಮಿಸಲಾಗಿರುವ ಯಾತ್ರಿನಿವಾಸವು ಕಳಪೆ ಕಾಮಗಾರಿಯಿಂದ ಕೂಡಿವ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಕ್ರಮವಹಿಸುವುದಾಗಿ ತಿಳಿಸಲಾಗುವುದು ಎಂದ ಅವರು ತಾಂಡಾಭಿವೃದ್ಧಿ ನಿಗಮದಿಂದ ಕೆಲವೆಡೆ ಸಮುದಾಯ ಭವನದ ಕಟ್ಟಡಗಳು ಮುಕ್ತಾಯದ ಹಂತಕ್ಕೆ ಬಂದಿದೆ ಎಂದರು.
ಈ ಭಾಗದ ಕೆಲವು ದೇವಸ್ಥಾನಗಳ ಜಾಗಗಳು ಹಾಗೂ ಸ್ಮಶಾಣ ಜಾಗಗಳು ಒತ್ತುವರಿಯಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಕ್ರಮವಹಿಸಿ ಸಾರ್ವಜನಿಕರಿಗೆ ಸಹಾಯವಾಗುವಂತೆ ತೆರವುಗೊಳಿಸಿವ ಕೆಲಸ ಮಾಡಿಕೊಡಲಾಗುದು ಎಂದ ಅವರು ಬಾಕಿ ಇರುವ ಕಾಮಗಾರಿಗಳನ್ನು ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧಮೇಗೌಡ ಮಾತನಾಡಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು ತಮಗೆ ಸಿಕ್ಕ ಅವಕಾಶದಲ್ಲಿ ಹೆಚ್ಚು ಶ್ರಮವಹಿಸಿ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ, ಜನ ಪ್ರತಿನಿದಿಗಳಾಗಿ ಅಭಿವೃದ್ಧಿ ಕಾರ್ಯಕ್ಕೆ ಪ್ರಮಾಣಿಕವಾಗಿ ಶ್ರಮಿಸಿದ್ದಾರೆ ಎಂದರು.
ಅಭಿವೃದ್ಧಿಯ ಚಿಂತನೆಯಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದ್ದೇವೆ, ಅಯ್ಯನಕೆರೆಯಿಂದ ಸಾಕಷ್ಟು ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು,  ಅಯ್ಯನಕೆರೆಯ ರಸ್ತೆ ಅಭಿವೃದ್ಧಿ ಕಾರ್ಯದಲ್ಲಿ ಕುಡಿಯುವ ನೀರಿಗೆ ಕಲ್ಪಿಸಿರುವ ವ್ಯವಸ್ಥೆ ಹಾಗೂ ಮಡಬಾವಿಗಳು ಹಾಳಾಗಬಹುದು ಇವುಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಅವಶ್ಯಕವಾಗಿ ಈ ಬಗ್ಗೆ ಗಮನ ಹರಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರು ಮಾತನಾಡಿ, ಮುಖ್ಯಮಂತ್ರಿ ಗ್ರಾಮ ವಿಕಾಸಯೋಜನೆ ಅಡಿಯಲ್ಲಿ ಒಂದು ಕೋಟಿ ರೂಗಳನ್ನು ಅನುದಾನವನ್ನು ಮಂಜೂರು ಮಾಡಿಸಿ ಬಿಡುಗಡೆಗೊಳಿಸಲಾಗಿದ್ದು, ಸಖರಾಯಪಟ್ಟಣಕ್ಕೆ ಉತ್ತಮವಾದ ಸೊಸೈಟಿ ಇಲ್ಲದ ಕಾರಣ  ೨೫ ಲಕ್ಷ ರೂಗಳನ್ನು ನೀಡಲಾಗಿದೇ ಉಳಿದ ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸುವುದಾಗಿ ತಿಳಿಸಿದ ಅವರು ಒತ್ತುವರಿಯಾಗಿರುವ ಸ್ಮಶಾಣ ಜಾಗವನ್ನು ಶೀಘ್ರದಲ್ಲಿಯೇ ತೆರವುಗೊಳಿಸಿಸಲು ಸಚಿವರಿಗೆ ತಿಳಿಸಿದರು.
ಬಾಣೂರು ಅಂಗನವಾಡಿ ಕಟ್ಟದ ಹಾಗೂ ಸ್ತ್ರೀ ಶಕ್ತಿ ಭವನವನ್ನು ಉದ್ಘಾಟಿಸಿ ಮಾತನಾಡಿ, ಬಾಣೂರು, ಹೊಸಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ನಿರ್ಮಾಣಕ್ಕೆ ಮೂರು ಕೋಟಿ ರೂಗಳನ್ನು ನೀಡಲಾಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಕೆಲಸ ನಡೆಯಲಿದೆ ಎಂದ ಅವರು  ಗ್ರಾಮಪಂಚಾತಿಯಿ ಕಟ್ಟದ ಹಾಗೂ ಸ್ತ್ರೀ ಶಕ್ತಿ ಭವನದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು ಈ  ಕಟ್ಟಡಗಳ ಕೆಲಸ ಸಮರ್ಪಕವಾಗಿ ನಡೆದಿಲ್ಲವೆಂದು ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಸಮರ್ಪಕವಾಗಿ ಕೆಲಸವಾಗುವಂತೆ ಕ್ರಮ ವಹಿಸಿಸಲು ತಿಳಿಸಲಾಗುವುದು ಎಂದು ಸಚಿವ ಸಿ.ಟಿ. ರವಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಮ್ಮ, ತಾಲ್ಲೂಕು ಪಂಚಾಯಿತಿ ಕಡೂರು ಅಧ್ಯಕ್ಷ ಆನಂದ್ ನಾಯ್ಕ, ಸಖರಾಯಪಟ್ಟಣದ ಗ್ರಾಮಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಿಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ಆಶ್ರಯ ಯೋಜನೆ: ಅರ್ಹ ಫಲಾನುಭವಿಗಳನ್ನು ಗುರುತಿಸಿ: ಸಚಿವ ಸಿ.ಟಿ.ರವಿ

Times fo Deenabandhu

ನಶಿಸಿ ಹೋಗುತ್ತಿರುವ ಜಾನಪದ ಪ್ರಕಾರವನ್ನು ಉಳಿಸಬೇಕು: ಎಂ.ಎಸ್.ಅನಂತ್

Times fo Deenabandhu

ಡಿ.೧೪ ರಂದು ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ

Times fo Deenabandhu