Times of Deenabandhu
  • Home
  • ಜಿಲ್ಲೆ
  • ನಾಡುಪ್ರಭು ಕೆಂಪೇಗೌಡರ ಹೆಸರಿನಲ್ಲಿ ಮ್ಯೂಸಿಯಂ ನಿರ್ಮಾಣ ಕುರಿತು ಪ್ರಸ್ತಾವನೆ: ಸಚಿವ ಸಿ.ಟಿ. ರವಿ
ಚಿಕ್ಕಮಗಳೂರು ಜಿಲ್ಲೆ

ನಾಡುಪ್ರಭು ಕೆಂಪೇಗೌಡರ ಹೆಸರಿನಲ್ಲಿ ಮ್ಯೂಸಿಯಂ ನಿರ್ಮಾಣ ಕುರಿತು ಪ್ರಸ್ತಾವನೆ: ಸಚಿವ ಸಿ.ಟಿ. ರವಿ

ಚಿಕ್ಕಮಗಳೂರು, ಜೂ.೨೭: ಬೆಂಗಳೂರಿನಲ್ಲಿ ನಾಡುಪ್ರಭು ಕೆಂಪೇಗೌಡರ ಹೆಸರಿನಲ್ಲಿ ಮ್ಯೂಸಿಯಂ ನಿರ್ಮಾಣ ಮಾಡುವ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಮತಿ ದೊರೆತಲ್ಲಿ ಕರ್ನಾಟಕ ದರ್ಶನ ಜೊತೆಗೆ ಅಂದಿನ ವಿವಿಧ ರಾಜಮನೆತನಗಳ ಪ್ರದರ್ಶನವನ್ನು ಆಯೋಜಿಸಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದರು.
ಅವರು ಇಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಚಿನ್ನ, ಬೆಳ್ಳಿ, ಬಳೆ, ಬಟ್ಟೆ ವ್ಯಾಪಾರ ಸೇರಿದಂತೆ ವಿವಿಧ ಪೇಟೆಗಳನ್ನು ದೂರದೃಷ್ಠಿ ಹೊಂದಿ ಸುಸಜ್ಜಿತವಾಗಿ ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದ ಅವರು ಬೆಂಗಳೂರು ನಗರ ನಿರ್ಮಾಣದಲ್ಲಿ ಪ್ರಮುಖರಾಗಿರುವ ಇವರು ವಿವಿಧ ಕಡೆಗಳಲ್ಲಿ ಕೆರೆ-ಕಟ್ಟೆ, ಒಳಚರಂಡಿಗಳು, ಅನೇಕ ದೇವಾಲಯಗಳನ್ನು ನಿರ್ಮಾಣದೊಂದಿಗೆ ಆಧುನಿಕ ಬೆಂಗಳೂರಿನ ಆಡಳಿತ ನಡೆಸಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಬೆಂದಕಾಳೂರನ್ನು ಬೆಂಗಳೂರನ್ನಾಗಿಸಿ ಐಟಿ-ಬಿಟಿ, ಸಿಲಿಕಾನ್ ಸಿಟಿಯಾಗಿ ಮಾಡಿ ಖ್ಯಾತಿಗಳಿಸಲು ಕೆಂಪೇಗೌಡರು ಮೂಲ ತಳಪಾಯ. ಇವರ ಹಿಂದಿನ ದೂರದೃಷ್ಠಿ ಆಲೋಚನೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಸವಾಲಾಗಿದೆ ಎಂದು ತಿಳಿಸಿದರು.
ಸರ್ಕಾರ ಈಗಾಗಲೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ನಾಮಕರಣ ಮಾಡಿ ಇಂದು ೧೦೮ ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾಡಿದೆ ಎಂದ ಅವರು ಕೆಂಪೇಗೌಡರ ಹೆಸರಿನಲ್ಲಿ ವಿಮಾನ ನಿಲ್ದಾಣದ ಪಕ್ಕದ ಜಾಗದಲ್ಲಿ ಮ್ಯೂಜಿಯಂ ನಿರ್ಮಾಣದ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಪ್ರಸ್ತಾವನೆ ಸಲ್ಲಿಸಲಾಗಿದೆ, ಅನುಮತಿ ದೊರೆತಲ್ಲಿ ಕರ್ನಾಟಕ ದರ್ಶನದ ಜೊತೆಗೆ ಅಂದಿನ ಕಾಲದಲ್ಲಿ ಆಳಿದ ವಿವಿಧ ರಾಜಮನೆತನಗಳ ಚಿತ್ರಗಳನ್ನು ಪ್ರದರ್ಶನ ಮಾಡಿ ಪ್ರವಾಸಿ ತಾಣವಾಗಿಸಲಾಗುವುದು ಎಂದರು.
ಕೆಂಪೇಗೌಡರು ವಿಜಯನಗರ ಸಂಸ್ಥಾನದ ಮಾಂಡಳೀಕರಾಗಿ ಆಡಳಿತ ನಡೆಸಿದ್ದು, ಅವರ  ದೂರದೃಷ್ಠಿ ಆಡಳಿತ ಇಂದಿನ ಆಧಿಕಾರಿ ವರ್ಗದವರಿಗೆ ಮಾದರಿಯಾಗಲಿದ್ದು ಅವುಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮವಾದ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಸಿ.ಡಿ.ಎ ಅಧ್ಯಕ್ಷ  ಆನಂದ್, ನಗರ ಸಭೆ ಮಾಜಿ ಅಧ್ಯಕ್ಷ ತಮ್ಮಯ್ಯ, ಜಿಲ್ಲಾ ವಕ್ಕಲಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ರಾಜಶೇಖರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

  ಜೆಸಿಐ ಶಿವಮೊಗ್ಗ ಶರಾವತಿಯ ನೂತನ ಅಧ್ಯಕ್ಷರಾಗಿ ಜೆಸಿ.ಗಾರಾ.ಶ್ರೀನಿವಾಸ್ ಪ್ರಮಾಣವಚನ ಸ್ವೀಕಾರ

Times fo Deenabandhu

ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಆಹಾರ ಮೇಳ

Times fo Deenabandhu

೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ: ಕೆ.ಸಿ.ರತನ್

Times fo Deenabandhu