Times of Deenabandhu
  • Home
  • ಜಿಲ್ಲೆ
  • ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ, ರಾಜ್ಯ ಸರಕಾರ: ಪ್ರಧಾನಿ ಮತ್ತು ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ನಿರ್ಧಾರ
ಚಿಕ್ಕಮಗಳೂರು ಜಿಲ್ಲೆ

ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ, ರಾಜ್ಯ ಸರಕಾರ: ಪ್ರಧಾನಿ ಮತ್ತು ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ನಿರ್ಧಾರ

 

 

ಮೂಡಿಗೆರೆ, ಜೂ.27: ರಾಜ್ಯದಲ್ಲಿ 10 ಲಕ್ಷ ಕಾಫಿ ಬೆಳಗಾರರು, 25 ಲಕ್ಷ ಕೂಲಿ ಕಾರ್ಮಿಕರು ನಷ್ಟದಲ್ಲಿ ಕಾಫಿ ಬೆಳೆದು 6.ಸಾವಿರ ಕೋಟಿ ರೂಗಳನ್ನು ದೇಶದ ಆರ್ಥಿಕ ಬಧ್ರತೆಗೆ ನೀಡುವ ಕಾಫಿ ಉದ್ಯಮವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಕಡೆಗಣಿಸಿದೆ. ಕಳೆದ ವರ್ಷದ ಅತಿವೃಷ್ಟಿ ಸಮಯ ಈಗಿನ ಕೊವೀಡ್-19 ವೇಳೆಯೂ ಯಾವುದೇ ಪ್ಯಾಕೇಜ್ ಘೋಷಿಸದೇ ಕಡೆಗಣಿಸಿಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಕಲೇಶಪುರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.

ಅವರು ಶನಿವಾರ ತಾ.ಪಂ. ಸಭಾಂಗಣದಲ್ಲಿ ತಾಲೂಕು ಬೆಳೆಗಾರರ ಸಂಘ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾರರು ಕಾಫಿ ಬೆಳೆಯುವ ಜತೆಗೆ ಅರಣ್ಯವನ್ನು ಬೆಳೆಸುತ್ತಾರೆ. ವಾಣಿಜ್ಯ ವಿಭಾಗದಲ್ಲಿ ವಿದೇಶಕ್ಕೆ ಕಾಫಿ ರಫ್ತು ಮಾಡಿ ವಿನಿಮಯಕ್ಕೆ ಒತ್ತು ನೀಡಿ ದೇಶದ ಆರ್ಥಿಕ ಪರಿಸ್ಥಿತಿಗೂ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಕಾಫಿಯಿಂದ ಸುಮಾರು 25 ಲಕ್ಷ ಕುಟುಂಬ ಜೀವನ ನಡೆಸುತ್ತಿದ್ದರೂ ಉಭಯ ಸರಕಾರಗಳು ಮಾತ್ರ ಬೆಳೆಗಾರರನ್ನು ಕಡೆಗಣಿಸಿದೆ. ಮುಂದಿನ ವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜ್ಯ ಕಾಫಿ ಬೆಳೆಗಾರರ ನಿಯೋಗದೊಂದಿಗೆ ಭೇಟಿ ಮಾಡಿ ಚರ್ಚಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

ಬೇಲೂರು ಶಾಸಕ ಲಿಂಗೇಶ್ ಮಾತನಾಡಿ, ಕಾಡಾನೆ ಹಾವಳಿ, ಅತಿವೃಷ್ಟಿ, ಕೋವಿಡ್-19 ನಿಂದ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಚಿನ್ನಾಭರಣ ಒತ್ತೆಯಿಟ್ಟು ಕಾಫಿ ತೋಟವನ್ನು ಅಭಿವೃದ್ಧಿಪಡಿಸಿದ್ದಾರೆ. ಕಾರ್ಮಿಕರ ಸಮಸ್ಯೆಯಿಂದ ಬೆಳೆಗಾರರು ಅತಂತ್ರ ಸ್ಥಿತಿ ತಲುಪಿದ್ದರೆ ಬೆಳೆಗಾರರಿಗೆ ಸರಕಾರ ಪ್ರೋತ್ಸಾಹ ನೀಡುತ್ತಿಲ್ಲ. ಬೆಳೆಗಾರರ ಸಂಕಷ್ಟಕ್ಕೆ ಸರಕಾರ ಮಧ್ಯ ಪ್ರವೇಶಿಸಿ ಪ್ರೋತ್ಸಾಹ ನೀಡದಿದ್ದರೆ ಕೊನೆಯದಾಗಿ ಆತ್ಮಹತ್ಯೆ ದಾರಿ ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಬರಗಾಲ, ಅತಿವೃಷ್ಟಿ, ಕಾರ್ಮಿಕರ ಸಮಸ್ಯೆ, ಬೆಳೆ ನಷ್ಟ,  ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಎಲ್ಲವನ್ನೂ ನಿಬಾಯಿಸಿ ಕಾಫಿ ಬೆಳೆಯಲು ಬ್ಯಾಂಕಿನಿಂದ ಸಾಲ ಪಡೆಯಬೇಕಾಗಿದೆ. ಈಗ ಪಡೆದಿರುವ ಸಾಲವನ್ನು ಆಗಸ್ಟ್ ಅಂತ್ಯದವರೆಗೂ ಮರುಪಾವತಿ ಮಾಡಬೇಕಿಲ್ಲವೆಂದು ರಾಜ್ಯ ಸರಕಾರ ಹೇಳಿದ್ದರೂ ಬ್ಯಾಂಕ್‍ಗಳು ಸಾಲ ಮರುಪಾವತಿಗಾಗಿ ಬೆಳೆಗಾರರಿಗೆ ನೋಟೀಸು ನೀಡಿ ಬೆದರಿಸುತ್ತಿವೆ. ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ, ಕರ್ನಾಟಕ ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ತೀರ್ಥ ಮಲ್ಲೇಶ್, ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಹಿರಿಯ ಬೆಳೆಗಾರ ಡಿ.ಬಿ.ಸುಬ್ಬೇಗೌಡ, ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷ ಭಾಲಕೃಷ್ಣ, ಕಾರ್ಯದರ್ಶಿ ಮನೋಹರ್, ಮುಖಂಡರಾದ ಮೋಹನ್ ಕುಮಾರ್, ಜಗನ್ನಾಥ್, ರಘು, ಪ್ರದೀಪ್, ಸುಬ್ರಾಯಗೌಡ, ಡಿ.ಎಂ.ವಿಜಯ ಮತ್ತಿತರರು ಉಪಸ್ಥಿತರಿದ್ದರು.

 

Related posts

ಜನವರಿ ಅಂತ್ಯದೊಳಗೆ ಹಕ್ಕು ಪತ್ರ ವಿತರಣೆ: ಸಚಿವ ಸಿ.ಟಿ.ರವಿ

Times fo Deenabandhu

ವಿಶೇಷ ಚೇತನರಿಗೆ ಅನುಕಂಪದ ಬದಲು ಪ್ರೋತ್ಸಾಹ ನೀಡಬೇಕು

Times fo Deenabandhu

ಭ್ರಷ್ಟಾಚಾರ, ಅವ್ಯವಹಾರ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ಆಗ್ರಹ

Times fo Deenabandhu