Times of Deenabandhu
  • Home
  • ಮುಖ್ಯಾಂಶಗಳು
  • ಬೆಳಗಿನ ತಿಂಡಿ ಸೇವಿಸದಿದ್ದರೆ ಈ ಎಲ್ಲಾ ಕಾಯಿಲೆಗಳು ಬರಬಹುದು ಎಚ್ಚರ!
ಪ್ರಧಾನ ಸುದ್ದಿ ಮುಖ್ಯಾಂಶಗಳು

ಬೆಳಗಿನ ತಿಂಡಿ ಸೇವಿಸದಿದ್ದರೆ ಈ ಎಲ್ಲಾ ಕಾಯಿಲೆಗಳು ಬರಬಹುದು ಎಚ್ಚರ!

ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿ ಇದ್ದರೂ ತಿನ್ನುವಷ್ಟು ವ್ಯವಧಾನ ನಮ್ಮ ಜನರಿಗೆ ಇರುವುದಿಲ್ಲ. ಹರಿಬಿರಿ ಮಾಡಿಕೊಂಡು ಬ್ಯಾಗ್ ನೇತಾಕಿಕೊಂಡು, ನಾನು ಆಫೀಸ್ ನಲ್ಲೇ ತಿನ್ನುತ್ತೇನೆ ಎಂದು ಹೊರಡುವವರೇ ಹೆಚ್ಚು.

ಕೆಲವರು ಹಾಸಿಗೆಯಿಂದ ಏಳುವುದು ತಡ ಮಾಡಿಕೊಂಡು ತಿನ್ನದೆ ಹಾಗೆ ಹೊರಟರೆ, ಇನ್ನು ಕೆಲವರಿಗೆ ಬೆಳಗ್ಗೆ ತಿನ್ನಬೇಕೆಂದರೆ ಅಲರ್ಜಿ. ಆದರೆ ನೀವು ಬೆಳಗಿನ ಹೊತ್ತು ಉಪಹಾರ (ಬ್ರೇಕ್ ಫಾಸ್ಟ್) ಸೇವಿಸಿದಿದ್ದರೆ ಮುಂದೆ ಏನೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಗೊತ್ತಾ? ಇಲ್ಲಿ ನೋಡಿ.
ಹೃದಯಾಘಾತದ ಸಾಧ್ಯತೆ
ಜಾಮಾ ಅಧ್ಯಯನದ ಪ್ರಕಾರ, ಬೆಳಗಿನ ಉಪಹಾರವನ್ನು ತ್ಯಜಿಸುವ ಪುರುಷರಲ್ಲಿ ಹೃದಯಾಘಾತದ ಸಾಧ್ಯತೆ ಶೇ.27ಕ್ಕಿಂತ ಹೆಚ್ಚಿರುತ್ತದೆ. ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ಲೇಹ್ ಕಾಹಿಲ್, ನೀವು ಆರೋಗ್ಯಕರವಾದ ಉಪಹಾರ ಸೇವಿಸಿದರೆ ಹೃದಯಾಘಾತದ ಅಪಾಯ ತಡೆಯಬಹುದು.

ಬೆಳಗಿನ ಉಪಾಹಾರವನ್ನು ತ್ಯಜಿಸಿದರೆ ಜನರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದು ಅಪಧಮನಿಗಳ ಅಡಚಣೆಗೆ ಕಾರಣವಾಗುತ್ತದೆ. ಮತ್ತೊಂದೆಡೆ, ಪಾರ್ಶ್ವ ವಾಯು ಸೇರಿದಂತೆ ಇತರ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚು ಮಾಡುತ್ತದೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.
ಮಹಿಳೆಯರಿಗೆ ಟೈಪ್ -2 ಮಧುಮೇಹ
ಆಹಾರ ಪದ್ಧತಿ ಮತ್ತು ಆರೋಗ್ಯದ ನಡುವಿನ ಸಂಬಂಧ ಕಂಡುಹಿಡಿಯಲು ಹಾರ್ವರ್ಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಒಂದು ಅಧ್ಯಯನವನ್ನು ನಡೆಸಿತು. ಸುಮಾರು ಆರು ವರ್ಷಗಳ ಕಾಲ ನಡೆಸಿದ ಈ ಸಂಶೋಧನೆಯಲ್ಲಿ 46,289 ಮಹಿಳೆಯರು ಭಾಗವಹಿಸಿದ್ದರು.

ಆ ನಂತರ ಬಂದ ಅಧ್ಯಯನದ ಫಲಿತಾಂಶಗಳು ಅದ್ಭುತವಾಗಿದ್ದವು. ಅಂದರೆ ಫಲಿತಾಂಶದ ಪ್ರಕಾರ, ಉಪಹಾರವನ್ನು ಸೇವಿಸುವ ಮಹಿಳೆಯರಿಗಿಂತ, ಉಪಹಾರವನ್ನು ತ್ಯಜಿಸುವ ಅಭ್ಯಾಸವನ್ನು ಹೊಂದಿರುವ ಮಹಿಳೆಯರಿಗೆ ಟೈಪ್ -2 ಮಧುಮೇಹ ಬರುವ ಅಪಾಯ ಹೆಚ್ಚಿತ್ತು. ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಟ್ಟು ಕೆಲಸಕ್ಕೆ ಹೊರಡುವ ವರ್ಕಿಂಗ್ ವುಮನ್ಸ್ ಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಶೇ.54 ಕ್ಕಿಂತ ಹೆಚ್ಚಿರುತ್ತದೆ.
ತೂಕ ಹೆಚ್ಚಾಗುತ್ತದೆ
ನೀವು ಒಂದು ಕಡೆ ತೂಕ ಇಳಿಸುವ ಪ್ಲಾನ್ ಮಾಡಿಕೊಂಡು, ಮತ್ತೊಂದೆಡೆ ಬೆಳಗಿನ ಉಪಹಾರ ತ್ಯಜಿಸುವ ಅಭ್ಯಾಸ ಹೊಂದಿದ್ದರೆ ನಿಮ್ಮ ಆರೋಗ್ಯದ ಕಥೆ ಏನಾಗಬಹುದು ಎಂದು ಊಹಿಸಿದ್ದೀರಾ?. ಬೆಳಗಿನ ಸಮಯದಲ್ಲಿ ಉಪಹಾರವನ್ನು ಸೇವಿಸದಿರುವವರ ಕುರಿತು ನಡೆಸಿದ ಅಧ್ಯಯನಗಳ ಪ್ರಕಾರ, ಬೆಳಗ್ಗೆ ತಿಂಡಿ ತಿನ್ನದವರು ಕ್ರಮೇಣ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಹಸಿವಿನ ಮಟ್ಟ ಹೆಚ್ಚಾದಷ್ಟೂ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ. ತಿಂಡಿ ತ್ಯಜಿಸುವ ನಿರಂತರ ಅಭ್ಯಾಸವು ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಹೊರತು ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ ಎನ್ನುವುದನ್ನು ಮರೆಯಬೇಡಿ.

ದೇಹದ ಶಕ್ತಿ ಕುಗ್ಗುತ್ತದೆ
ಅಧ್ಯಯನದ ಪ್ರಕಾರ, ಉಪಹಾರವನ್ನು ತ್ಯಜಿಸುವುದರಿಂದ ದೇಹದ ಶಕ್ತಿ ಮತ್ತು ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿ ಉಪವಾಸವಿದ್ದ 144 ಆರೋಗ್ಯವಂತ ಜನರ ಮೇಲೆ ಬ್ರಿಟಿಷ್ ಸಂಶೋಧನಾ ತಂಡ ಅಧ್ಯಯನ ನಡೆಸಿತು. ಈ ಗುಂಪನ್ನು ಮೂರು ಭಾಗಗಳಾಗಿ ವಿಂಗಡಿಸ ಲಾಯಿತು.

ಒಂದು ಗುಂಪಿಗೆ ಆರೋಗ್ಯಕರ ಮತ್ತು ಮಧ್ಯಮ ಉಪಹಾರ, ಎರಡನೇ ಗುಂಪಿಗೆ ಕಾಫಿ ಮಾತ್ರ ಮತ್ತು ಮೂರನೇ ಗುಂಪಿಗೆ ಉಪಹಾರ ನೀಡಲಿಲ್ಲ. ಅಧ್ಯಯನದ ಪ್ರಕಾರ, ಉಪಹಾರ ಸೇವಿಸಿದ ಗುಂಪಿನಲ್ಲಿ ಹೆಚ್ಚಿನ ಆಯಾಸ ಕಂಡು ಬಂದಿತು. ಇತರ ಎರಡು ಗುಂಪುಗಳ ನಡುವೆ ಯಾವುದೇ ಹೆಚ್ಚಿನ ವ್ಯತ್ಯಾಸವಿರಲಿಲ್ಲ.
ಕ್ಯಾನ್ಸರ್ ಬರಬಹುದು!!
ಬೆಳಗಿನ ಸಮಯದಲ್ಲಿ ಉಪಹಾರ ತ್ಯಜಿಸಿ, ಆ ನಂತರ ಆಹಾರವನ್ನು ಅತಿಯಾಗಿ ಸೇವಿಸಿದರೆ ಸ್ಥೂಲಕಾಯತೆ ಬರಲು ದಾರಿ ಮಾಡಿ ಕೊಟ್ಟಂತಾಗುತ್ತದೆ. ಕ್ಯಾನ್ಸರ್ ರಿಸರ್ಚ್ ಯುಕೆ ನಡೆಸಿದ ಸಂಶೋಧನೆಯ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ವ್ಯಕ್ತಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ತಿಳಿದುಬಂದಿದೆ.

ವಿಶುಯಲ್ ಸರ್ಚ್ ಟೆಸ್ಟ್
12 ರಿಂದ 15 ವರ್ಷದೊಳಗಿನ ಮಕ್ಕಳ ಮೇಲೆ ಒಂದು ಅಧ್ಯಯನ ನಡೆಸಲಾಯಿತು. ಮೊದಲನೆ ಪ್ರಯೋಗದಲ್ಲಿ ಇವರಿಗೆ ಉಪಹಾರ ನೀಡಲು ಅವಕಾಶ ನೀಡಲಾಯಿತು. ಎರಡನೇ ಪ್ರಯೋಗದಲ್ಲಿ ಉಪಹಾರ ಕೊಡಲಿಲ್ಲ. ಆಗ ಬಂದ ಫಲಿತಾಂಶ ಹೀಗಿತ್ತು. ಉಪಹಾರ ಸೇವಿಸಿದಾಗ ವಿಶುಯಲ್ ಸರ್ಚ್ ಟೆಸ್ಟ್ ರಿಸಲ್ಟ್ ಉತ್ತಮವಾಗಿತ್ತು. ಉಪಹಾರದ ಸೇವಿಸದಿದ್ದಾಗ ರಿಸಲ್ಟ್ ಶೂನ್ಯ. ಹದಿಹರೆಯದವರ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದ್ದರೂ ಇದು ವಯಸ್ಕರಿಗೂ ಅನ್ವಯವಾಗುತ್ತದೆ.
ಕೂದಲು ಉದುರುತ್ತದೆ
ಬೆಳಗಿನ ಸಮಯ ಉಪಹಾರ ತ್ಯಜಿಸುವುದರಿಂದ ಆಗುವ ಅಡ್ಡಪರಿಣಾಮವೆಂದರೆ ಕೂದಲು ಉದುರುವುದು. ಇದು ಕೂದಲಿನ ಬೆಳವಣಿಗೆಯನ್ನು ತಪ್ಪಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನಿಮಗೆ ಗೊತ್ತಿದೆಯೋ, ಇಲ್ಲವೋ ನೀವು ಬೆಳಗಿನ ಸಮಯ ಉಪಹಾರ ಸೇವಿಸುವುದರಿಂದ ಕೂದಲು ಕಿರುಚೀಲಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ನೀವು ನಿಜಕ್ಕೂ ಸೊಂಪಾದ ಕೂದಲನ್ನು ಬಯಸಿದ್ದರೆ ಪ್ರತಿದಿನ ಪ್ರೊಟೀನ್ ಭರಿತ ಉಪಹಾರ ಸೇವಿಸಿ.
ಚಯಾಪಚಯ ಕ್ರಿಯೆ ಉಪಹಾರದಿಂದಲೇ
ಇಂಧನ ಇಲ್ಲದಿದ್ದರೆ ಕಾರು ಹೇಗೆ ಸ್ಟಾರ್ಟ್ ಆಗುವುದಿಲ್ಲವೋ ಅಂತೆಯೇ, ನಮ್ಮ ಚಯಾಪಚಯ ಕ್ರಿಯೆ ಪ್ರಾರಂಭವಾಗಲು ಉಪಹಾರ ಬೇಕು. ರಾತ್ರಿ 12 ಗಂಟೆಗಳ ಕಾಲ ವಿಶ್ರಾಂತಿ ಪಡೆದ ನಂತರ ದೇಹವನ್ನು ಪೋಷಿಸುವುದು ಬೆಳಗಿನ ಉಪಾಹಾರ. ವಿವಿಧ ಅಧ್ಯಯನಗಳ ಪ್ರಕಾರ ಉಪಹಾರ ಸೇವಿಸುವ ಜನರ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ.

ಹ್ಯಾಂಗೊವರ್ ನಿಂದ ಹೊರಬರಲು
ಹಿಂದಿನ ರಾತ್ರಿ ಆಲ್ಕೊಹಾಲ್ ಅತಿಯಾಗಿ ಸೇವಿಸಿದ್ದರೆ ಹ್ಯಾಂಗೊವರ್ ಕಡಿಮೆಯಾಗಲು ಪ್ರೊಟೀನ್ ಭರಿತ ಉಪಹಾರ ಸೇವಿಸಬೇಕು. ಕಬ್ಬಿಣ, ಫೋಲೇಟ್, ಖನಿಜಗಳು, ಜೀವಸತ್ವಗಳು ಸಮೃದ್ಧವಾಗಿರುವ ಆರೋಗ್ಯಕರ ಉಪಹಾರವು ನಿಮ್ಮ ದೇಹವು ಕಳೆದು ಹೋದ ಪೋಷಕಾಂಶಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.

ಶಕ್ತಿಯ ಮಟ್ಟವನ್ನು ಸಹ ಹೆಚ್ಚಿಸುತ್ತದೆ. ಆದರೆ ಬೆಳಗಿನ ಉಪಹಾರವನ್ನು ತ್ಯಜಿಸುವುದರಿಂದ ಸಕ್ಕರೆ ಮಟ್ಟ ತಗ್ಗಿ ಹ್ಯಾಂಗೊವರ್ ನಿಂದ ತಲೆನೋವು ವಾಕರಿಕೆ ಬರುತ್ತದೆ. ಉಪಹಾರ ಸೇವಿಸದಿದ್ದರೆ ರಕ್ತದೊತ್ತಡದ ಮಟ್ಟ ಹೆಚ್ಚಾಗಿ ಮೈಗ್ರೇನ್ ಮತ್ತು ತಲೆನೋವು ಬರುವ ಸಂಭವ ಹೆಚ್ಚಿರುತ್ತದೆ.

Related posts

9,000 ತಬ್ಲಿಗಿ ಜಮಾತ್ ಸದಸ್ಯರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ

ಗಣರಾಜ್ಯೋತ್ಸವದ ಕೇಂದ್ರಬಿಂದುವಾಗಲಿದೆ ಕರ್ನಾಟಕದ ‘ಅನುಭವ ಮಂಟಪ’ ಸ್ತಬ್ಧಚಿತ್ರ

Times fo Deenabandhu

ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನ… ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿರುವ ಮನಕಲಕುವ ಈ ಹಾಡು ಕೇಳಿ….

Times fo Deenabandhu