Times of Deenabandhu
  • Home
  • ಜಿಲ್ಲೆ
  • ನಂದಿತಾ ಸಾವಿನ ಪ್ರಕರಣ ಸಿಬಿಐಗೆ ವಹಿಸಿ
ಜಿಲ್ಲೆ ಶಿವಮೊಗ್ಗ

ನಂದಿತಾ ಸಾವಿನ ಪ್ರಕರಣ ಸಿಬಿಐಗೆ ವಹಿಸಿ

ಶಿವಮೊಗ್ಗ: 2014ರ ಅಕ್ಟೋಬರ್ 31ರಂದು ತೀರ್ಥಹಳ್ಳಿ ತಾಲೂಕಿನ ಬಾಳೆಬೈಲು ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ ನಂದಿತಾ ನಿಗೂಢವಾಗಿ ಸಾವನ್ನಪ್ಪಿದ್ದಳು. ಈ ಪ್ರಕರಣವನ್ನು ಈಗಿನ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕೂಡ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಅದರಂತೆ ಕೂಡಲೇ ರಾಜ್ಯ ಸರ್ಕಾರ ನಂದಿತಾಳ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಬೇಕು. ಮೃತ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಎನ್ ಎಸ್ ಯು ಐ ಆಗ್ರಹಿಸಿದೆ.
ಈ ಸಂಬಂಧ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಎನ್ಎಗಸ್ಯುಿಐ ಕಾರ್ಯಕರ್ತರು, 2014 ಅಕ್ಟೋಬರ್ 29ರಂದು ತನ್ನ ಶಾಲೆಗೆ ತೆರಳಿದ್ದ ಕುಮಾರಿ ನಂದಿತಾ, ಅದೇ ದಿನ ಮಧ್ಯಾಹ್ನದ ವೇಳೆ ತೀರ್ಥಹಳ್ಳಿಯಿಂದ 1.5 ಕೀಮಿ ದೂರದ ಆನಂದಗಿರಿ ಗುಡ್ಡದ ಸಮೀಪ ಒಂಟಿಯಾಗಿ ಪತ್ತೆಯಾಗಿದ್ದರು. ವಿದ್ಯಾರ್ಥಿನಿ ಮರುದಿನ ಅಸ್ವಸ್ಥಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ, ನಂತರ ಉಡುಪಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆಗೆ ಸ್ಪಂದಿಸದೇ ಅಕ್ಟೋಬರ್ 31ರಂದು ಮೃತಳಾಗಿದ್ದಳು. ತೀರ್ಥಹಳ್ಳಿ ಬಾಳೆಬೈಲಿನ ನಂದಿತಾ ಮನೆಗೆ ಅಂದು ಭೇಟಿ ಮಾಡಿದ್ದ ಈಗಿನ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಅಮಿತ್ ಶಾ ಅವರು ವಿದ್ಯಾರ್ಥಿನಿ ಸಾವಿನ ತನಿಖೆ ನಡೆಸುವ ಭರವಸೆ ನೀಡಿದ್ದರು ಎಂದು ಮನವಿಯಲ್ಲಿ ವಿವರಿಸಿದ್ದಾರೆ..
ಅಪರಾಧಿಗಳು ಎಷ್ಟೇ ಪ್ರಭಾವಿಗಳು ಆಗಿದ್ದರೂ, ಯಾವುದೇ ಪಕ್ಷ ಆಗಿದ್ದರೂ, ಯಾವುದೇ ಸಮುದಾಯಕ್ಕೆ ಸೇರಿದ್ದರೂ ಶಿಕ್ಷೆ ಆಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನಂದಿತಾಳ ನಿಗೂಢ ಸಾವಿನ ಬಗ್ಗೆ ಸಿಬಿಐಗೆ ತನಿಖೆ ವಹಿಸಲು ವಿಳಂಬ ಮಾಡಿದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ.
ಎನ್ಎೆಸ್ಯುಬಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಜಿಲ್ಲಾಧ್ಯಕ್ಷ ಎಚ್.ಎಸ್.ಬಾಲಾಜಿ, ಕಾರ್ಯಾಧ್ಯಕ್ಷ ವಿನಯ್, ನಗರಾಧ್ಯಕ್ಷ ವಿಜಯ್, ಗ್ರಾಮಾಂತರ ಅಧ್ಯಕ್ಷ ರವಿ, ಅಬ್ದುಲ್ ಸತ್ತರ, ಗಿರೀಶ್, ಶಿವು, ಭರತ್, ಸಂದೀಪ್, ಪ್ರಮೋದ್, ಆಕಾಶ್, ಮಂಜು ಪುರಲೆ, ಪ್ರಮೋದ್, ಪ್ರಜ್ವಲ್, ಶಿವು, ಅಭಿ, ನರಸಿಂಹ. ಇದ್ದರು.

Related posts

ಶಿಕ್ಷಣದ ಗುಣಮಟ್ಟ ಇಂದು ತುಂಬಾ ಸುಧಾರಣೆ ಕಂಡಿದೆ

Times fo Deenabandhu

ಭಾರತೀಯ ಪರಂಪರೆಯ ಶಿಕ್ಷಣದ ಪ್ರಬೋಧಿನಿ ಗುರುಕುಲಮ್

Times fo Deenabandhu

ಜಾತಿ ನಿಂದನೆ ಪ್ರಕರಣ: ಕುವೆಂಪು ವಿವಿ ಕುಲಸಚಿವರನ್ನು ಬಂದಿಸಲು ವಿದ್ಯಾರ್ಥಿ ಸಂಘಟನೆಯ ಆಗ್ರಹ

Times fo Deenabandhu