Times of Deenabandhu
  • Home
  • ಮುಖ್ಯಾಂಶಗಳು
  •  ನವೆಂಬರ್‌ ವೇಳೆಗೆ ದೇಶದಲ್ಲಿ ಗರಿಷ್ಠ ಮಟ್ಟ ತಲುಪಲಿದೆ ಕೋವಿಡ್‌: ಐಸಿಎಂಆರ್
ಪ್ರಧಾನ ಸುದ್ದಿ ಮುಖ್ಯಾಂಶಗಳು

 ನವೆಂಬರ್‌ ವೇಳೆಗೆ ದೇಶದಲ್ಲಿ ಗರಿಷ್ಠ ಮಟ್ಟ ತಲುಪಲಿದೆ ಕೋವಿಡ್‌: ಐಸಿಎಂಆರ್

ನವದೆಹಲಿ: ಭಾರತದಲ್ಲಿ ಪ್ರತಿದಿನ ಪತ್ತೆಯಾಗುವ ಕೋವಿಡ್–19 ಪ್ರಕರಣಗಳ ಸಂಖ್ಯೆ ನವೆಂಬರ್ ಮಧ್ಯದ ವೇಳೆಗೆ ಗರಿಷ್ಠಮಟ್ಟ ಮುಟ್ಟಲಿದೆ. ಆ ವೇಳೆಗೆ ದೇಶದಲ್ಲಿ ಐಸೋಲೇಷನ್ ಹಾಸಿಗೆಗಳು, ತೀವ್ರ ನಿಗಾ ಘಟಕಗಳು ಮತ್ತು ವೆಂಟಿಲೇಟರ್‌ಗಳ ಕೊರತೆ ಉಂಟಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ. ಐಸಿಎಂಆರ್ ರಚನೆ ಮಾಡಿರುವ ‘ಆಪರೇಷನ್ಸ್ ರಿಸರ್ಚ್ ಗ್ರೂಪ್‌’ ನಡೆಸಿದ ಸಾಂಖ್ಯಿಕ ಅಧ್ಯಯನದ ವರದಿಯ ಆಧಾರದ ಮೇಲೆ ಈ ಅಭಿಮತಕ್ಕೆ ಬರಲಾಗಿದೆ.

ಈ ಮೊದಲಿನ ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿದಿನ ಪತ್ತೆಯಾಗುವ ಕೋವಿಡ್–19 ಪ್ರಕರಣಗಳ ಸಂಖ್ಯೆಯು ಜುಲೈ ಅಂತ್ಯದ ವೇಳೆಗೆ ಗರಿಷ್ಠಮಟ್ಟ ತಲುಪಬೇಕಿತ್ತು. ಲಾಕ್‌ಡೌನ್‌ನ ಕಾರಣ ಗರಿಷ್ಠಮಟ್ಟ ತಲುಪುವ ಅವಧಿಯು ನವೆಂಬರ್ ಮಧ್ಯದವರೆಗೆ ವಿಸ್ತರಣೆಯಾಗಿದೆ. ಸೋಂಕಿತರ ಸಂಖ್ಯೆ ಶೇ 67–90ರಷ್ಟು ಕಡಿಮೆಯಾಗಿದೆ. ಲಾಕ್‌ಡೌನ್ ಇಷ್ಟರಮಟ್ಟಿಗೆ ಯಶಸ್ವಿಯಾಗಿದೆ. ವಿಸ್ತರಣೆ ಆಗಿರುವ ಹೆಚ್ಚುವರಿ ಅವಧಿಯಲ್ಲಿ ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಸಾಕಷ್ಟು ಕಾಲಾವಕಾಶ ದೊರೆತಿದೆ ಎಂದು ತಜ್ಞರು ಹೇಳಿದ್ದಾರೆ.

ಸೋಂಕಿತರ ಪತ್ತೆ, ತಪಾಸಣೆ, ಕ್ವಾರಂಟೈನ್ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಲಾಕ್‌ಡೌನ್ ನೆರವಾಗಿದೆ. ಮೂಲಸೌಕರ್ಯ ಹೆಚ್ಚಾಗಿರುವ ಕಾರಣ ಈ ಕ್ರಮಗಳನ್ನು ಜಾರಿಗೆ ತರಲು ಅನುಕೂಲವಾಗುತ್ತಿದೆ. ಕೋವಿಡ್‌–19ಗೆ ಲಸಿಕೆ ದೊರೆಯುವವರೆಗೂ ಇವುಗಳನ್ನು ಪಾಲಿಸಬೇಕಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

21,494: ಕೋವಿಡ್‌ ಚಿಕಿತ್ಸೆಗೆಂದು ಮೀಸಲಿರಿಸಿರುವ ವೆಂಟಿಲೇಟರ್‌ಗಳು

60,848: ಹೆಚ್ಚುವರಿ ವೆಂಟಿಲೇಟರ್‌ಗಳನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ

958: ಕೋವಿಡ್–19 ಆಸ್ಪತ್ರೆಗಳು

1.67: ಲಕ್ಷ ಐಸೊಲೇಷನ್‌ ಹಾಸಿಗೆಗಳು

21,614: ಐಸಿಯುಗಳು

73,469: ಆಮ್ಲಜನಕ ಪೂರೈಕೆ ಸವಲತ್ತಿರುವ ಹಾಸಿಗೆಗಳು

2,313: ಕೋವಿಡ್–19 ಆರೋಗ್ಯ ಕೇಂದ್ರಗಳು

1.33: ಲಕ್ಷ ಐಸೊಲೇಷನ್‌ ಹಾಸಿಗೆಗಳು

10,748: ಐಸಿಯುಗಳು

46,635: ಆಮ್ಲಜನಕ ಪೂರೈಕೆ ಸವಲತ್ತಿರುವ ಹಾಸಿಗೆಗಳು

7,525: ಕೋವಿಡ್–19 ಚಿಕಿತ್ಸಾ ಕೇಂದ್ರಗಳು

7.10: ಲಕ್ಷ ಐಸೊಲೇಷನ್ ಹಾಸಿಗೆಗಳು

Related posts

ವಾಯುಪಡೆಗೆ ಅಧಿಕೃತ ಸೇರ್ಪಡೆಯಾಗಲಿದೆ ರಫೇಲ್‌: ನಾಳೆ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ

Times fo Deenabandhu

ಪ್ಲಾಸ್ಟಿಕ್ ರಾಕ್ಷಸನನ್ನು ಕೊನೆಗಾಣಿಸಲು ಒಡಿಸ್ಸಾದಲ್ಲಿ ವಿಶೇಷ ಹೆಜ್ಜೆ ಇಡಲಾಗಿದೆ. ಈ ಬಗ್ಗೆ ಜನರಿಗೆ ಭರ್ಜರಿ ಆಫರ್ ನೀಡಲಾಗಿದ್ದು, ಪ್ಲಾಸ್ಟಿಕ್ ಕೊಟ್ಟು ಎಲ್ಲರೂ ಹಬ್ಬದೂಟ ಸವಿದಿದ್ದಾರೆ…!

Times fo Deenabandhu

ವಿವಾದಕ್ಕೆ ತಿರುಗಿದ ತಿರುಪತಿ ಆಸ್ತಿ ಹರಾಜು ನಿರ್ಧಾರ, ಆಂಧ್ರ ಪ್ರದೇಶ ಸರಕಾರದಿಂದ ತಡೆ