Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೊಬ್ಬರಿಗೆ ₹1,300 ಬೆಂಬಲ ಬೆಲೆ: ಸಚಿವ ಮಾಧುಸ್ವಾಮಿ

 

ಗುಬ್ಬಿ: ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಕೊಬ್ಬರಿ ದರ ಕುಸಿದಿದ್ದು, ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ವಿಂಟಲ್‌ಗೆ ₹1,300 ಬೆಂಬಲ ಬೆಲೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಶನಿವಾರ ತಿಳಿಸಿದರು.

 

ತಾಲ್ಲೂಕಿನ ಕಡಬ ಹೋಬಳಿಯ ಮಾರಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೊಬ್ಬರಿಗೆ ಬೇಡಿಕೆ ಇಲ್ಲದಿರುವುದರಿಂದ ಕ್ವಿಂಟಲ್‌ಗೆ ₹16,000ರಿಂದ ₹18,000 ಇದ್ದ ದರ ಈಗ ₹9,000ಕ್ಕೆ ಕುಸಿದಿದೆ. ಕ್ವಿoಟಲ್‌ಗೆ ₹1,300 ಬೆಂಬಲ ಬೆಲೆ ಸೇರಿ ₹10,300ಕ್ಕೆ ನಾಫೆಡ್ ಮೂಲಕ ಖರೀದಿಸಲಾಗುವುದು ಎಂದು ಹೇಳಿದರು.

Related posts

ಒಂದು ವೇಳೆ ಬಿಜೆಪಿಗೆ ಬಹುಮತ ಸಿಗದೆ ಇದ್ದಿದ್ದರೆ ಜೆಡಿಎಸ್‌ ಇಬ್ಭಾಗವಾಗುತ್ತಿತ್ತು

Times fo Deenabandhu

ಗುಂಡು ಹಾರಿಸಿಕೊಂಡು ಹೊಟೆಲ್ ಉದ್ಯಮಿ ಆತ್ಮಹತ್ಯೆ

Times fo Deenabandhu

ಅವಿನಾಷ್ ಮಾಲಿಂಗ ಕುಡಿತದ ಅಮಲಿನಲ್ಲಿ ಕೆರೆಗೆ ಬಿದ್ದು ಸಾವು.

Times fo Deenabandhu