Times of Deenabandhu
  • Home
  • ಮುಖ್ಯಾಂಶಗಳು
  • ರಾಜ್ಯಸಭಾ ಚುನಾವಣೆ: ಕೋರೆ,ಕತ್ತಿ,ಶೆಟ್ಟಿಗೆ ಇಲ್ಲ ಟಿಕೆಟ್..ಅಚ್ಚರಿಯ ಆಯ್ಕೆ…!
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ರಾಜ್ಯಸಭಾ ಚುನಾವಣೆ: ಕೋರೆ,ಕತ್ತಿ,ಶೆಟ್ಟಿಗೆ ಇಲ್ಲ ಟಿಕೆಟ್..ಅಚ್ಚರಿಯ ಆಯ್ಕೆ…!

ನವದೆಹಲಿ ಜೂ.8: ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಬೆಳಗಾವಿ ಮೂಲದ ಪ್ರಭಾಕರ ಕೋರೆ, ರಮೇಶ್ ಕತ್ತಿ ಹಾಗೂ ಕರಾವಳಿ ಮೂಲದ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರನ್ನು ರಾಜ್ಯ ಬಿ‌ಜೆ‌ಪಿ ಕೋರ್ ಕಮಿಟಿಯಿಂದ ಕೇಂದ್ರಕ್ಕೆ ಶಿಪಾರಸ್ಸು ಮಾಡಲಾಗಿತ್ತು. ಆ ಎಲ್ಲ ಹೆಸರುಗಳನ್ನು ತಿರಸ್ಕರಿಸಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ ಸೇರಿದ ಬಿಜೆಪಿ ಈರಣ್ಣ ಕಡಾಡಿ  ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ನೀಡಿ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ರಾಜ್ಯಸಭಾ ಚುನಾವಣೆ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ಕಂಡುಬಂದಿತ್ತು. ಸಹೋದರ ರಮೇಶ್ ಕತ್ತಿಯವರಿಗೆ ಟಿಕೆಟ್ ನೀಡಬೇಕೆಂದು ಶಾಸಕ ಉಮೇಶ್ ಕತ್ತಿಯವರು ಪಕ್ಷದ ನಾಯಕರ ಮೇಲೆ ಒತ್ತಡ ಹಾಕಿದ್ದರು. ಹಾಲಿ ರಾಜ್ಯಸಭಾ ಸಂಸದ ಪ್ರಭಾಕರ ಕೋರೆಯವರು ಕೂಡಾ ಮತ್ತೊಮ್ಮೆ ಆಯ್ಕೆಗಾಗಿ ಟಿಕೆಟ್ ಬಯಸಿದ್ದರು. ರಾಜ್ಯ ಕೋರ್ ಕಮಿಟಿ ಈ ಇಬ್ಬರಲ್ಲಿ ಒಬ್ಬರಿಗೆ ಹಾಗೂ ಮತ್ತೊಂದು  ಪ್ರಕಾಶ್ ಶೆಟ್ಟಿ ಗೆಂದು ಶಿಪಾರಸ್ಸು ಮಾಡಿತ್ತು.

ಆದರೆ ಬಿಜೆಪಿ ವರಿಷ್ಠರು ಈ ಮೂರು ಹೆಸರನ್ನು ಕೈಬಿಟ್ಟಿದ್ದು, ಈರಣ್ಣ ಕಡಾಡಿ  ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ನೀಡಿದೆ. ಅಶೋಕ್ ಗಸ್ತಿಯವರು ರಾಯಚೂರು ಜಿಲ್ಲೆಯವರಾಗಿದ್ದು, ಕಲ್ಯಾಣ ಕರ್ನಾಟಕ ವಿಭಾಗೀಯ ಪ್ರಭಾರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ವಿಭಾಗೀಯ ಪ್ರಭಾರಿಯಾಗಿರುವ ಈರಣ್ಣ ಕಡಾಡಿಯವರ ಹೆಸರನ್ನು ಅಂತಿಮಗೊಳಿಸಲಾಗಿದೆ.ಬೆಳಗಾವಿಯ ಹಾಗೂ ಲಿಂಗಾಯಿತ ಸಮುದಾಯದವರೇ ಆದ ಈರಣ್ಣ ಕಡಾಡಿ ಅವರನ್ನು ಆಯ್ಕೆ‌ಮಾಡಿರುವ ಮೂಲಕ‌ ಸಂಘಟನೆ ಮೂಲದವರಿಗೆ ಆದ್ಯತೆ ನೀಡಿದಂತಾಗಿದೆ.

ಸದ್ಯ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜೆಪಿಯಿಂದ ಈರಣ್ಣ ಕಡಾಡಿ  ಮತ್ತು ಅಶೋಕ್ ಗಸ್ತಿಯವರು, ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆಯವರು, ಜೆಡಿಎಸ್ ನಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಎಚ್ ಡಿ ದೇವೇಗೌಡ ಅವರು ಕಣದಲ್ಲಿದ್ದಾರೆ. ಜೂನ್ 19ರಂದು ಚುನಾವಣೆ ನಡೆಯಲಿದ್ದು, ಇವರೆಲ್ಲರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.

 

Related posts

ಇಂದಿರಾ ಕ್ಯಾಂಟೀನ್‌ ಉಚಿತ ಊಟಕ್ಕೆ ಬ್ರೇಕ್‌, ಸಿದ್ದರಾಮಯ್ಯ ಅಸಮಾಧಾನ

Times fo Deenabandhu

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಗಣನೀಯ ಇಳಿಕೆ

Times fo Deenabandhu

ರಾಜ್ಯದಲ್ಲಿ ಕೊರೊನಾ ರುದ್ರನರ್ತನ…  ಮತ್ತೆ 38 ಸಾವು,ಬೆಂಗಳೂರು ನಗರವೊಂದರಲ್ಲೇ 1235 ಜನರಲ್ಲಿ ಸೋಂಕು.. ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ……ಇಲ್ಲಿದೆ ಫುಲ್ ಡಿಟೈಲ್ಸ್……