Times of Deenabandhu
  • Home
  • ಮುಖ್ಯಾಂಶಗಳು
  • ಸ್ಯಾಂಡಲ್​ವುಡ್​ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಸ್ಯಾಂಡಲ್​ವುಡ್​ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ

 

ಬೆಂಗಳೂರು: ಸ್ಯಾಂಡಲ್​ವುಡ್​ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.

ಶನಿವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಯನಗರದ ಸಾಗರ್ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎಂದು ಮೂಲಗಳು ವರದಿ ಮಾಡಿವೆ.

ಅವರಿಗೆ ಹೃದಯಾಘಾತ ಸಂಭವಿಸಿದ್ದು ವೈದ್ಯರು ಚಿಕಿತ್ಸೆ ನೀಡಿದರೂ ಸ್ಪಂದಿಸಲಿಲ್ಲ. ಚಿರಂಜೀವಿಯ ಗಂಟಲಿನ ದ್ರವ ತೆಗೆದು ಪರೀಕ್ಷೆಗೆ  ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್‌ ಸರ್ಜಾ ಅಳಿಯ ಕನ್ನಡದ ಹಿರಿಯ ನಟ ಶಕ್ತಿ ಪ್ರಸಾದ್‌ ಮೊಮ್ಮಗ ಚಿರಂಜೀವಿ ಸರ್ಜಾ 2009ರಲ್ಲಿ ತೆರೆಕಂಡ ವಾಯುಪುತ್ರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದರು.ರುದ್ರತಾಂಡವ, ವರದನಾಯಕ, ವಾಯುಪುತ್ರ, ಚಿರು ಸೇರಿದಂತೆ 22 ಸಿನೆಮಾಗಳಲ್ಲಿ ಅವರು ನಟಿಸಿದ್ದಾರೆ.

2017ರಲ್ಲಿ ನಟಿ ಮೇಘನಾ ರಾಜ್ ಜತೆ ನಿಶ್ಚಿತಾರ್ಥ ಮಾಡಿ, 2018ರಲ್ಲಿ ಈ ಜೋಡಿ ಮದುವೆಯಾಗಿದ್ದರು. ಈಗ ಮೇಘನಾ  5 ತಿಂಗಳ ಗರ್ಭಿಣಿ.

Related posts

‘ಧರ್ಮ’ನಾಗಿ ಬದಲಾದ ‘ಶ್ರೀಮನ್ನಾರಾಯಣ’ ರಕ್ಷಿತ್ ಶೆಟ್ಟಿ! ಗೋವಾದಲ್ಲಿ ಬೀಡುಬಿಟ್ಟ ‘ಸಿಂಪಲ್ ಸ್ಟಾರ್’!

Times fo Deenabandhu

ಕ್ವಾರಂಟೈನ್‌ನಲ್ಲಿರುವವರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲ

ದೇಶದಲ್ಲಿ ಕೊರೊನಾಗೆ ಮೊದಲ ಬಲಿ: ಕಲಬುರಗಿಯ ವೃದ್ಧರು ಮೃತಪಟ್ಟಿರುವುದು ಕೊರೊನಾದಿಂದ

Times fo Deenabandhu