Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಪಾಕ್‌‌ ಜೊತೆಗೂಡಿ ಚೀನಾ ಮೊಂಡಾಟ

 

ಇಸ್ಲಾಮಾಬಾದ್‌: ಭಾರತದ ಪ್ರಬಲ ವಿರೋಧದ ನಡುವೆಯೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 1,124 ಮೆಗಾವ್ಯಾಟ್‌ ಸಾಮರ್ಥ್ಯದ ಜಲ ವಿದ್ಯುತ್‌ ಸ್ಥಾವರ ನಿರ್ಮಾಣ ಯೋಜನೆಯನ್ನು ಕೈಬಿಡುವುದಿಲ್ಲ ಎಂದು ಚೀನಾ ಮೊಂಡಾಟ ಪ್ರದರ್ಶಿಸಿದೆ.

ಬಹುಕೋಟಿ ಡಾಲರ್‌ ಚೀನಾ-ಪಾಕ್‌ ಆರ್ಥಿಕ ಕಾರಿ­ಡಿಡಾರ್‌ (ಸಿಪಿಇಸಿ) ಯೋಜನೆ ಅಡಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಚೀನಾ ಮುಂದಾಗಿದೆ. ಪಿಒಕೆಯ ಕೊಹಲಾ ಬಳಿ ಝೇಲೂಮ್‌ ನದಿಗೆ ಅಡ್ಡಲಾಗಿ ಈ ಜಲವಿದ್ಯುತ್‌ ಸ್ಥಾವರ ನಿರ್ಮಾಣಗೊಳ್ಳಲಿದೆ. ಈ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಭಾರತವೂ ಖಡಕ್‌ ಉತ್ತರ ನೀಡಿದೆ.

ಅದರ ನಡುವೆಯೇ, ಪಾಕ್‌ ಸರಕಾರ ಸೋಮವಾರಷ್ಟೇ ಚೀನಾ ಹೂಡಿಕೆ­ಯೊಂದಿಗೆ ಯೋಜನೆ ಜಾರಿಗೆ ಸಮ್ಮತಿ ನೀಡಿದೆ. ಚೀನಾದ ತ್ರಿ ಜಾಜ್‌ರ್‌ ಕಾರ್ಪೊರೇಷನ್‌, ಪಾಕ್‌ ಪ್ರೈವೇಟ್‌ ಪವರ್‌ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಬೋರ್ಡ್‌ (ಪಿಪಿಐಬಿ) ಮತ್ತು ಪಿಒಕೆ ಆಡಳಿತದ ನಡುವೆ ಯೋಜನೆ ಅನುಷ್ಠಾನಕ್ಕೆ ತ್ರಿಕೋನ ಒಪ್ಪಂದ ಅಖೈರುಗೊಂಡಿದೆ.

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 2.4 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಿ ವಿದ್ಯುತ್‌ ಸ್ಥಾವರವನ್ನು ಚೀನಾ ನಿರ್ಮಿಸುತ್ತಿದೆ. ಬಹಳ ದೊಡ್ಡ ಹೂಡಿಕೆ ಎನ್ನಲಾಗಿದೆ. ಕಳೆದ ತಿಂಗಳು ಪಾಕಿಸ್ತಾನ ಗಿಲ್ಗಿಟ್‌-ಬಲಿಸ್ತಾನದಲ್ಲಿ ಜಲಾಶಯ ನಿರ್ಮಿಸಲು ಮುಂದಾದಾಗ ಭಾರತ ಪ್ರತಿಭಟಿಸಿತ್ತು. ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಇಂತಹ ಯೋಜನೆಗಳನ್ನು ಮಾಡಬಾರದು ಎಂದು ಹೇಳಿತ್ತು.

ಆದರೂ, ಚೀನಾದ ಸರಕಾರಿ ಸಂಸ್ಥೆ ಹಾಗೂ ಪಾಕಿಸ್ತಾನದ ಸೈನ್ಯದ ಸಹಯೋಗದಲ್ಲಿ 442 ಬಿಲಿಯನ್‌ ರೂಪಾಯಿ‌ ಒಪ್ಪಂದವನ್ನು ದಿಯಾಮರ್‌ – ಭಾಷಾ ಜಲಾಶಯವನ್ನು ನಿರ್ಮಿಸಲು ಪಾಕಿಸ್ತಾನ ಮುಂದಾಗಿರುವುದು ಭಾರತವನ್ನು ಕೆರಳಿಸಿತ್ತು.

Related posts

ಜು.13ರಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಶುರು: 71 ಸಾವಿರ ಶಿಕ್ಷಕರ ನೇಮಕ

ರಾಜ್ಯದಲ್ಲಿ ಕೊರೊನಾಗೆ ಒಂದೇ ದಿನ ಇಬ್ಬರು ಬಲಿ, ಒಟ್ಟು 8 ಜನ ಸಾವು

Times fo Deenabandhu

2024ರೊಳಗೆ ‘ಎನ್‌ಆರ್‌ಸಿ’ ದೇಶವ್ಯಾಪಿ : ಅಮಿತ್‌ ಶಾ

Times fo Deenabandhu