Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 103 ಕೊರೊನಾ ರೋಗಿಗಳ ಗುಣಮುಖ

ಬೆಂಗಳೂರು: ಶನಿವಾರ ರಾಜ್ಯದಲ್ಲಿ ಹೊಸದಾಗಿ 141 ಕೊರೊನಾ ವೈರಸ್‌ ಪ್ರಕರಣಗಳು ದೃಢಪಟ್ಟಿವೆ. ಆದರೆ ಇದೇ ವೇಳೆ 103 ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದು ರಾಜ್ಯದ ಮಟ್ಟಿಗೆ ಹೊಸ ದಾಖಲೆಯಾಗಿದೆ.
ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌-19ನಿಂದ ಚೇತರಿಸಿಕೊಂಡವರ ಸಂಖ್ಯೆ 1 ಸಾವಿರದ ಅಂಚಿಗೆ ತಲುಪಿದ್ದು 977ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಶನಿವಾರ 43 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 21 ಮಂದಿ ಹಾಗೂ ದಾವಣಗೆರೆಯ 20 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದವರಲ್ಲಿ ಸೇರಿದ್ದಾರೆ.

ಇವರ ಜೊತೆಗೆ ಕೋಲಾರದಲ್ಲಿ 5, ಬೀದರ್‌ ಮತ್ತು ಬಾಗಲಕೋಟೆಯಲ್ಲಿ ತಲಾ 3, ದಕ್ಷಿಣ ಕನ್ನಡ ಹಾಗೂ ರಾಯಚೂರಿನಲ್ಲಿ ತಲಾ 2, ಗದಗ, ಉಡುಪಿ, ಚಿಕ್ಕಬಳ್ಳಾಪುರ ಮತ್ತು ವಿಜಯಪುರದಲ್ಲಿ ತಲಾ ಓರ್ವ ರೋಗಿಗಳು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಉಡುಪಿಯಲ್ಲಿ 18 ಮಕ್ಕಳು ಸೇರಿ 15 ಜನರನ್ನು ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಆದರೆ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ಉಡುಪಿಯ ಕೇವಲ ಒಬ್ಬರು ರೋಗಿಯನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ. ಇವರ ಸಂಖ್ಯೆಯೂ ಸೇರಿದರೆ ಒಂದೇ ದಿನ 147 ರೋಗಿಗಳು ಗುಣಮುಖರಾದಂತೆ ಆಗುತ್ತದೆ.

ಇನ್ನು ಶನಿವಾರದ ಬುಲೆಟಿನ್‌ ನಂತರ ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ. ಇವರಲ್ಲಿ 997 ರೋಗಿಗಳು ಗುಣಮುಖರಾಗಿದ್ದು, 49 ಸೋಂಕಿತರು ಅಸುನೀಗಿದ್ದಾರೆ. ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಸದ್ಯ ರಾಜ್ಯದಲ್ಲಿ 1,874 ಸಕ್ರಿಯ ಪ್ರಕರಣಗಳು ಇವೆ.

Related posts

‘ಪಾಸಿಟಿವ್’ ಆರ್ಭಟದ ನಡುವೆ ಪ್ಯಾಕೇಜ್..!

ಒಳ ಒಪ್ಪಂದ ರಾಜಕಾರಣ ಬಹಳ ಕಾಲ ನಡೆಯಲ್ಲ: ಕುಮಾರಸ್ವಾಮಿ

Times fo Deenabandhu

ಪ್ರಾದೇಶಿಕ ಭದ್ರತೆ: ಇರಾನ್‌ ಸಚಿವರ ಜತೆ ರಾಜನಾಥ್‌ ಸಿಂಗ್ ಮಾತುಕತೆ

Times fo Deenabandhu