Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸುವ ತುರ್ತು ಏನಿತ್ತು?

 

ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿರುವುದನ್ನು ಪ್ರಶ್ನಿಸಲಾದ ಅರ್ಜಿ ಸಂಬಂಧ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

 

ಬೆಂಗಳೂರಿನ ದೀಪಾಂಜಲಿ ನಗರದ ಎಚ್‌ ಮಾರುತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾ. ಸಚಿನ್‌ ಶಂಕರ್‌ ಮಗ್ದಮ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

 

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿತು. ಅಲ್ಲದೆ, ಆಕ್ಷೇಪಣೆ ಸಲ್ಲಿಸುವಾಗ ಅರ್ಜಿಯಲ್ಲಿ ಹೇಳಲಾಗಿರುವಂತೆ ಕೆಲಸದ ಅವಧಿ ಹೆಚ್ಚಿಸಲು ಸಾರ್ವಜನಿಕ ತುರ್ತು ಏನಿತ್ತು? ಹೆಚ್ಚುವರಿ ಕೆಲಸದ ಅವಧಿಗೆ ಹೆಚ್ಚುವರಿ ವೇತನ ನೀಡಲಾಗುತ್ತದೆಯೇ? ಕಾರ್ಖಾನೆಗಳಲ್ಲಿ ಕೊರೊನಾ ವೈರಸ್‌ ಸೋಂಕು ಹರಡದಂತೆ ಕೈಗೊಂಡಿರುವ ಸುರಕ್ಷತಾ ಕ್ರಮಗಳೇನು? ಎಂಬ ಅಂಶಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಜೂ. 5ಕ್ಕೆ ಮುಂದೂಡಿತು

Related posts

ಗುಂಡು ಹಾರಿಸಿಕೊಂಡು ಹೊಟೆಲ್ ಉದ್ಯಮಿ ಆತ್ಮಹತ್ಯೆ

Times fo Deenabandhu

 60 ಸಾವಿರದ ಸನಿಹಕ್ಕೆ ಸೋಂಕಿತರ ಒಟ್ಟು ಸಂಖ್ಯೆ

ಆರೋಗ್ಯ ಇಲಾಖೆಗೆ ಅನಾರೋಗ್ಯ: ಕಿರಿಯ ಸಿಬ್ಬಂದಿ ಮೇಲೆ ಒತ್ತಡ

Times fo Deenabandhu