Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

 ಸುಮಲತಾ ಅಂಬರೀಷ್ ಅವರಿಗೆ ಕಮಲ್ ಹಾಸನ್ ಮೇಲೆ ಕ್ರಷ್ ಇತ್ತಂತೆ!

ಚಿತ್ರರಂಗಕ್ಕೆ ಸಂಬಂಧಿಸಿದ ಕೆಲವೊಂದು ಹಳೇ ಸಂಗತಿಗಳನ್ನು ತಿಳಿದುಕೊಂಡಾಗ ‘ಹೌದಾ’ ಎಂದು ಉದ್ಗಾರ ತೆಗೆಯುವವರೇ ಹೆಚ್ಚು. ಸುಮಲತಾ ಅವರು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಅವರು ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ತಮ್ಮ ಕುರಿತ ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದರು. ಇಲ್ಲಿವೆ ನೋಡಿ ಸುಮಲತಾ ಅಂಬರೀಷ್ ಕುರಿತ ಕುತೂಹಲಕರ ಸಂಗತಿಗಳು.
ತಾವಿಬ್ಬರೂ ಭೇಟಿಯಾಗಿದ್ದು ಆಹುತಿ ಸಿನಿಮಾದ ಸೆಟ್‌ನಲ್ಲಿ ಎಂಬು ಸ್ವತಃ ಅಂಬರೀಷ್ ಹಾಗೂ ಸುಮಲತಾ ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.ಆಹುತಿ, ಅವತಾರ ಪುರುಷ, ಕಲ್ಲರಳಿ ಹೂವಾಗಿ, ನ್ಯೂಡೆಲ್ಲಿ, ಶ್ರೀ ಮಂಜುನಾಥ ಸಿನಿಮಾಗಳಲ್ಲಿ ಅಂಬರೀಷ್ ಹಾಗೂ ಸುಮಲತಾ ಅಭಿನಯಿಸಿದ್ದಾರೆ.
ತನ್ನ ಶಾಲಾ ದಿನಗಳಲ್ಲಿ ನಟ ಕಮಲ್ ಹಾಸನ್ ಮೇಲೆ ಕ್ರಷ್ ಇತ್ತು ಎಂದು ಸ್ವತಃ ಸುಮಲತಾ ಖಾಸಗಿ ವಾಹಿಯ ಕಾರ್ಯಕ್ರಮದಲ್ಲಿ ಹೇಳಿದ್ದರು. ತನ್ನ ಪುಸ್ತಕಗಳಲ್ಲಿ ಕಮಲ್ ಹಾಸನ್ ಪೋಸ್ಟರ್‌ಗಳೇ ತುಂಬಿರುತ್ತಿದ್ದವು ಎಂದಿದ್ದರು.
ಮೊಟ್ಟ ಮೊದಲ ಸಲ ಕಮಲ್ ಹಾಸನ್‍ರನ್ನು ತಾನು ನೋಡಿದ್ದು ಮನ್ಮದ ಲೀಲಾ ಸಿನಿಮಾದಲ್ಲಿ, ಆಗ ತನಗೆ 13 ವರ್ಷ ವಯಸ್ಸು ಎಂದು ತಿಳಿಸಿದ್ದರು ಸುಮಲತಾ.

Related posts

ಕೈಗಾರಿಕೆ, ರಸ್ತೆಗಳಿಗೆ ಪರಿಸರ ಪೂರ್ವಾನುಮತಿ ಬೇಕಿಲ್ಲ; ವಿವಾದಿತ ಕರಡು ಅಧಿಸೂಚನೆ ಪ್ರಕಟ

ವರ್ಷದಲ್ಲಿ100 ದಿನ ಮಾತ್ರ ಶಾಲೆ? ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಮಾದರಿ!

ಚೀನಾ ತಯಾರಿತ ಮೊಬೈಲ್,​ ಟ್ಯಾಬ್ಲೆಟ್ಸ್​ ನಮಗೆ ಬೇಡ: ಬಜೆಟ್​ ಅಧಿವೇಶನದಲ್ಲಿ ಕಾಂಗ್ರೆಸ್​ ನಾಯಕರ ಒತ್ತಾಯ