Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

​ಮೈಸೂರು ಸೇರಿ ದೇಶದ 5 ನಗರಗಳಿಗೆ ‘ಕಸ ಮುಕ್ತ’ ನಗರ ಗೌರವ

 

ದೇಶದ ಸ್ವಚ್ಛ ನಗರಗಳ ಪಟ್ಟಿ ಪ್ರಕಟಿಸಿರುವ ಭಾರತ ಸರ್ಕಾರ, ಕರ್ನಾಟಕದ ಹೆಮ್ಮೆಯ ಮೈಸೂರು ನಗರಕ್ಕೆ ಶಹಬ್ಬಾಸ್‌ಗಿರಿ ನೀಡಿದೆ. ದೇಶದ 5 ಕಸ ಮುಕ್ತ ನಗರಗಳ ಪೈಕಿ ಮೈಸೂರು ಕೂಡಾ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ಕರ್ನಾಟಕದ ಮೈಸೂರು ಮಾತ್ರವಲ್ಲ, ಇನ್ನೂ ನಾಲ್ಕು ನಗರಗಳು ಕಸ ಮುಕ್ತ ನಗರಗಳ ಪಟ್ಟಿಯಲ್ಲಿವೆ. ಛತ್ತೀಸ್‌ಗಢದ ಅಂಬಿಕಾಪುರ, ಗುಜರಾತ್‌ನ ರಾಜ್‌ಕೋಟ್, ಮಧ್ಯಪ್ರದೇಶದ ಇಂಧೋರ್‌ ಹಾಗೂ ಮಹಾರಾಷ್ಟ್ರದ ನವಿ ಮುಂಬೈ ನಗರಗಳು ಕಸ ಮುಕ್ತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

 

ದೇಶದ ಈ ಎಲ್ಲಾ 5 ನಗರಗಳು ಕಸ ಮುಕ್ತ ನಗರಗಳಾಗಿದ್ದು, 5 ಸ್ಟಾರ್ ರೇಟಿಂಗ್‌ ಪ್ರಾಪ್ತವಾಗಿವೆ. ಇನ್ನು, ಕರ್ನೂಲ್, ಹೊಸ ದಿಲ್ಲಿ, ತಿರುಪತಿ, ವಿಜಯವಾಡ, ಚಂಡೀಗಢ, ಭಿಲಾಯ್ ನಗರ, ಅಹಮದಾಬಾದ್‌ ನಗರಗಳು 3 ಸ್ಟಾರ್ ರೇಟಿಂಗ್‌ ಪಡೆದಿವೆ. ದಿಲ್ಲಿ ಕಂಟೋನ್ಮೆಂಟ್, ವಡೋದರಾ, ರೋಹ್ಟಕ್ ನಗರಗಳು ಸಿಂಗಲ್ ಸ್ಟಾರ್ ರೇಟಿಂಗ್ ಪಡೆದಿವೆ.

Related posts

ಒಂದೆಡೆ ಮದ್ಯಕ್ಕೆ ಗಂಡಸರ ಸಾಲು, ಪಕ್ಕದಲ್ಲೆ ದಿನಸಿಗೆ ಮಹಿಳೆಯರ ಸಾಲು

ಭಾರತದ ಮುಸ್ಲಿಂರಿಗೆ ಪಂಕ್ಚರ್​ ಶಾಪ್​, ಗುಜರಿ, ಟೀ ಅಂಗಡಿ ಕಾಂಗ್ರೆಸ್​ನ ಕೊಡುಗೆಗಳು; ನಿತಿನ್​ ಗಡ್ಕರಿ ವ್ಯಂಗ್ಯ

Times fo Deenabandhu

 ದಕ್ಷಿಣ ಚೀನಾ ಸಮುದ್ರದಲ್ಲಿ ಭಾರೀ ಅಲೆಗಳು: ಸದ್ದು ಮಾಡುತ್ತಿವೆ ಅಮೆರಿಕ-ಚೀನಾ ಸಮರ ನೌಕೆಗಳು!