Times of Deenabandhu
  • Home
  • ಪ್ರಧಾನ ಸುದ್ದಿ
  • ಲಾಕ್‌ಡೌನ್ 4.0 ರೂಪುರೇಷೆ ಸಿದ್ಧ: ಅಧಿಕಾರಿಗಳೊಂದಿಗೆ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ!
ಪ್ರಧಾನ ಸುದ್ದಿ ಮುಖ್ಯಾಂಶಗಳು

ಲಾಕ್‌ಡೌನ್ 4.0 ರೂಪುರೇಷೆ ಸಿದ್ಧ: ಅಧಿಕಾರಿಗಳೊಂದಿಗೆ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ!

 

ನವದೆಹಲಿ: ಇದೇ ಭಾನುವಾರ(ಮೇ.17)ಕ್ಕೆ ಮೂರನೇ ಹಂತದ ಲಾಕ್‌ಡೌನ್ ಮುಕ್ತಾಯವಾಗಲಿದ್ದು, ಸೋಮವಾರ(ಮೇ.18)ರಿಂದ ನಾಲ್ಕನೇ ಹಂತದ ಲಾಕ್‌ಡೌನ್ ಆರಂಭವಾಗಲಿದೆ.

ಮಾರ್ಗಸೂಚಿಗಳ ಬಿಡುಗಡೆಗೂ ಮುನ್ನ ನಡೆದ ಈ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಇಂದು ಸರಣಿ ಸಭೆ ನಡೆದಿದ್ದು, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸೇರಿದಂತೆ ಗೃಹ ಸಚಿವಾಲಯದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಲಾಕ್‌ಡೌನ್ 4.0 ಸಂಬಂಧಿತ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ಕೇಂದ್ರ ಗೃಹ ಸಚಿವಾಲಯ ನಿರತವಾಗಿದ್ದು, ಮಾರ್ಗಸೂಚಿಗಳಿಗೆ ಅಂತಿಮ ರೂಪ ನೀಡಲು ಸರಣಿ ಸಭೆಗಳನ್ನು ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಲಾಕ್‌ಡೌನ್ 4.0ಗೆ ಸಂಬಂಧಿಸಿದ ಮಾರ್ಗಸೂಚಿಗಳು ಬಹುತೇಕ ಅಂತಿಮವಾಗಿದ್ದು, ಇಂದಿನ ಸಭೆಯಲ್ಲಿ ಅಮಿತ್ ಶಾ ಅಧಿಕಾರಿಗಳಿಗೆ ಅಂತಿಮ ಸುತ್ತಿನ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಸೋಮವಾರಕ್ಕೂ ಮೊದಲೇ ಈ ಮಾರ್ಗಸೂಚಿಗಳು ಘೋಷಣೆಯಾಗಲಿವೆ 

Related posts

ಔಷಧಿ ತಯಾರಿಕೆಗೆ ಭಾರತದಲ್ಲಿರುವುದು ಎರಡು ತಿಂಗಳಿಗಾಗುವ ದಾಸ್ತಾನು ಮಾತ್ರ

Times fo Deenabandhu

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಮಣಿಪುರ ಮುಖ್ಯಮಂತ್ರಿ ಅಣ್ಣನನ್ನು ಅಪಹರಿಸಿದರು!

Times fo Deenabandhu

ರೈತ ಸಂಘಟನೆಗಳ ಜೊತೆ ಸೇರಿ ಹೋರಾಟ: ಸಿದ್ದರಾಮಯ್ಯ