Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ವಾಣಿಜ್ಯ ಲಾಕ್‌ ತೆರೆಯಲು ರಾಜ್ಯಗಳ ಸಲಹೆ

 

ಲಾಕ್‌ಡೌನ್‌ ಮೇ 18ರಿಂದ ಹೊಸ ರೂಪದಲ್ಲಿ ಜಾರಿಗೆ ಬರಲಿದ್ದು ಕೊರೊನಾ ಕಂಟೇನ್ಮೆಂಟ್‌ ವಲಯ ಹೊರತಾದ ಪ್ರದೇಶಗಳಲ್ಲಿ ಬಸ್‌, ಮೆಟ್ರೊ ರೈಲು, ವಿಮಾನ ಸಂಚಾರಕ್ಕೆ ಅವಕಾಶ ನೀಡುವಂತೆ ಬಹಳಷ್ಟು ರಾಜ್ಯಗಳು ಕೇಂದ್ರ ಸರಕಾರವನ್ನು ಕೋರಿವೆ.

ರಾಜ್ಯಗಳು ಬೇಡಿಕೆಗಳನ್ನು ಪರಿಗಣಿಸಿ ಈಗಿರುವ ನಿಯಮಗಳ ಜತೆಗೆ ಇನ್ನಷ್ಟು ಸಡಿಲಿಕೆಗಳನ್ನು ಮಾಡುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಿತಿಗತಿ ಕುರಿತು ವಿವರ ಪಡೆದುಕೊಂಡಿದ್ದರು. ಮುಖ್ಯಮಂತ್ರಿಗಳು ಕೊಟ್ಟಿರುವ ಅಭಿಪ್ರಾಯ ಹಾಗೂ ಸಲಹೆಗಳ ಆಧಾರದ ಮೇಲೆ ಲಾಕ್‌ಡೌನ್‌ 4.0 ಮಾರ್ಗಸೂಚಿ ಸಿದ್ಧಗೊಳ್ಳುತ್ತಿದ್ದು ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದು ಮೂಲಗಳು ಹೇಳಿವೆ.

ಕೊಡಬೇಕು.

ತಮಿಳುನಾಡು: ಕಂಟೈನ್ಮೆಂಟ್‌ ವಲಯ ಹೊರತಾದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳ ಪುನರಾರಂಭ ಮಾಡಬೇಕು.

ಕರ್ನಾಟಕ: ಹೋಟೆಲ್‌ ಉದ್ಯಮಕ್ಕೆ ಪೂರ್ಣ ಪ್ರಮಾಣ ಅನುಮತಿ ಹಾಗೂ ರೆಸಾರ್ಟ್‌, ಜಿಮ್‌, ಗಾಲ್‌್ಫ ಕೋರ್ಸ್‌ಗಳನ್ನು ತೆರೆಯಲು ಅವಕಾಶ ನೀಡಬೇಕು.

ಮಹಾರಾಷ್ಟ್ರ: ಯಥಾಸ್ಥಿತಿಯನ್ನೇ ಮುಂದುವರಿಸಬೇಕು.

ಗುಜರಾತ್‌, ದಿಲ್ಲಿ: ಪ್ರಮುಖ ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಬೇಕು ಹಾಗೂ ಕಂಟೈನ್‌ಮೆಂಟ್‌ ಅಲ್ಲದ ಪ್ರದೇಶಗಳಲ್ಲಿನಿರ್ಬಂಧ ಸಡಿಲಿಸಬೇಕು.

ಕಠಿಣ ಲಾಕ್‌ಡೌನ್‌ಗೆ ಒಲವು

ಬಿಹಾರ, ಜಾರ್ಖಂಡ್‌, ಒಡಿಶಾ, ಅಸ್ಸಾಂ, ಪಂಜಾಬ್‌

ಮಿಜೋರಾಂ, ಮಹಾರಾಷ್ಟ್ರದಲ್ಲಿ ವಿಸ್ತರಣೆ?

ಮಿಜೋರಾಂ ಮತ್ತು ಮಹಾರಾಷ್ಟ್ರಗಳು ಮೇ 31ರವರೆಗೆ ಲಾಕ್‌ಡೌನ್‌ ವಿಸ್ತರಣೆಗೆ ನಿರ್ಧರಿಸಿವೆ. ಮಹಾರಾಷ್ಟ್ರದಲ್ಲಿಮುಂಬಯಿ, ಪುಣೆ, ಮಾಲೇಗಾಂವ್‌, ಔರಂಗಾಬಾದ್‌ ಹಾಗೂ ಸೊಲ್ಲಾಪುರದಲ್ಲಿಲಾಕ್‌ಡೌನ್‌ ವಿಸ್ತರಣೆಯಾಗಲಿದೆ.

Related posts

ತಾಯಿಯ ಹಾಲು ಕುಡಿಯುತ್ತಲೇ ಪ್ರಾಣ ಕಳೆದುಕೊಂಡ ಮಗು…

ಏ. 14ರ ಬಳಿಕ ಲಾಕ್‌ಡೌನ್‌ ಮುಂದುವರಿಸುವುದು ಅನಿವಾರ್ಯ: ಶ್ರೀರಾಮುಲು

ಗಿಲ್ಗಿಟ್‌- ಬಾಲ್ಟಿಸ್ತಾನ ಖಾಲಿ ಮಾಡಿ, ಪಾಕಿಸ್ತಾನಕ್ಕೆ ಭಾರತ ಕಠಿಣ ಸಂದೇಶ