Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಒಂದು ವರ್ಷದ ವರೆಗೆ ಶೇ. 30ರಷ್ಟು ಸಂಬಳ ತ್ಯಜಿಸಿದ ರಾಷ್ಟ್ರಪತಿ

 

ಮುಂದಿನ ಒಂದು ವರ್ಷದ ಅವಧಿ ವರೆಗೂ ಶೇಕಡಾ 30ರಷ್ಟು ಸಂಬಳವನ್ನು ತ್ಯಜಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿರ್ಧರಿಸಿದ್ದಾರೆ. ಈ ಮೂಲಕ ಸರಕಾರದ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

ರಾಷ್ಟ್ರಪತಿ ಭವನದ ಖರ್ಚು ವೆಚ್ಚಗಳಲ್ಲೂ ಗಣನೀಯ ನಿಯಂತ್ರಣವನ್ನು ತರಲು ನಿರ್ಧರಿಸಲಾಗಿದೆ. ಇವೆಲ್ಲದರ ಮೂಲಕ ರಾಷ್ಟ್ರಪತಿ ಭವನದ ಬಜೆಟ್‌ನಲ್ಲಿ ಸುಮಾರು ಶೇಕಡಾ 20ರಷ್ಟು ಉಳಿತಾಯವಾಗುವುದಾಗಿ ಅಂದಾಜಿಸಲಾಗಿದೆ.

ಭಾರತದಲ್ಲಿ ಕೊರೊನಾ ವೈರಸ್ ಏರುಗತಿ ಸಾಧಿಸುತ್ತಿದ್ದ ಮಾರ್ಚ್ ತಿಂಗಳಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಡ್ ಪಿಎಂ ಕೇರ್ಸ್ ನಿಧಿಗೆ ಒಂದು ತಿಂಗಳ ಸಂಬಳವನ್ನು ನೀಡಿ ಇತರರಿಗೆ ಮಾದರಿಯಾಗಿದ್ದರು.

Related posts

ಕೊರೊನಾಗೆ ಕನಿಷ್ಠ 40 ಮಂದಿ ಭಾರತೀಯ–ಅಮೆರಿಕನ್ನರು ಬಲಿ; 1,500 ಜನರಿಗೆ ಸೋಂಕು

Times fo Deenabandhu

ಗುಂಡು ಹಾರಿಸಿಕೊಂಡ ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ

Times fo Deenabandhu

ಫೆಬ್ರವರಿಗೆ ರಾಷ್ಟ್ರೀಯ ಬಿಜೆಪಿಗೆ ನೂತನ ಸಾರಥಿ?

Times fo Deenabandhu