Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

​ದೇಶದಲ್ಲಿ 74,800ರ ಗಡಿದಾಟಿದ ಸೋಂಕಿತರು..!

 

ಭಾರತದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ 74,000 ಸಾವಿರ ದಾಟಿದೆ. ದೆಹಲಿಯಲ್ಲಿ 359, ರಾಜಸ್ತಾನ 87, ಒಡಿಶಾ 101 ಹೊಸ ಪ್ರಕರಣಗಳು ಬುಧವಾರ ಬೆಳಕಿಗೆ ಬಂದಿದೆ. ಜತೆಗೆ ದೆಹಲಿಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 74,877ಕ್ಕೆ ಏರಿಕೆಯಾಗಿದೆ. 24,801 ಮಂದಿ ಗುಣಮುಖರಾಗಿದ್ದು, 2,435 ಮಂದಿ ಸಾವನ್ನಪ್ಪಿದ್ದಾರೆ.

 

ಸೋಂಕಿತ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ 13ನೇ ಸ್ಥಾನದಲ್ಲಿದೆ.

 

​ರಾಜ್ಯದಲ್ಲಿ ಸಾವಿರದ ಸಮೀಪ ಕೊರೊನಾ..!

ಹೊಸ್ತಿಲಲ್ಲಿ ಕೊರೊನಾ ವೈರಸ್‌ ಇದ್ದು, ಬುಧವಾರ ಮತ್ತೆ 34 ಹೊಸ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 959ಕ್ಕೆ ಏರಿದೆ. ಇದರಲ್ಲಿ 451 ಜನ ಗುಣಮುಖರಾಗಿದ್ದರೆ, 33 ಜನ ಸಾವನ್ನಪ್ಪಿದ್ದಾರೆ.

 

ಬುಧವಾರ ಬೀದರ್‌ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, 12 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇವರೆಲ್ಲಾ ಕಂಟೈನ್ಮೆಂಟ್‌ ಝೋನ್‌ನ ಸಂಪರ್ಕ ಹೊಂದಿದ್ದು, ಜಿಲ್ಲೆಯಲ್ಲಿ ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 41ಕ್ಕೆ ಏರಿದೆ. ಕಲಬುರಗಿಯಲ್ಲಿ 8 ಹೊಸ ಪ್ರಕರಣಗಳು ಕಂಡು ಬಂದಿದ್ದು, ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 81ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

 

ಗ್ರೀನ್‌ ಝೋನ್‌ನಲ್ಲಿದ್ದ ಹಾಸನದಲ್ಲಿ ಮತ್ತೆ 4 ಪ್ರಕರಣಗಳು ಕಂಡುಬಂದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9ಕ್ಕೆ ಏರಿದೆ. ದಾವಣಗೆರೆ, ಬೆಂಗಳೂರು ನಗರ, ವಿಜಯಪುರ ಹಾಗೂ ಉತ್ತರ ಕನ್ನಡದಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ ಹಾಗೂ ಬಳ್ಳಾರಿಯಲ್ಲಿಯೂ ತಲಾ ಒಂದು ಪ್ರಕರಣ ದಾಖಲಾಗಿದೆ.

 

Related posts

 ಭಾರತದಲ್ಲಿ ಕೊರೊನಾ ಕಠೋರವಾಗಿಲ್ಲ, ಧೈರ್ಯವಾಗಿರಿ ಎಂದ ಡಾ. ಹರ್ಷವರ್ಧನ್‌

ಓಮಾನ್ ದೊರೆಯ ನಿಧನ: ಭಾರತದಲ್ಲಿ ಸೋಮವಾರ ಶೋಕಾಚರಣೆ

Times fo Deenabandhu

43 ಸಾವಿರದ ಗಡಿ ದಾಟಿದೆ ಅಪರಂಜಿ ಚಿನ್ನದ ಬೆಲೆ..! ಆಭರಣ ಚಿನ್ನ 10 ಗ್ರಾಂಗೆ 40,300 ರೂ.

Times fo Deenabandhu