Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮೈಕೆಲ್ ಮಧು ನಿಧನ!

ಕೊನೆಯುಸಿರೆಳೆದರು. ಮಧ್ಯಾಹ್ನ ಊಟ ಮಾಡಿದ ನಂತರ ಇದ್ದಕ್ಕಿದ್ದಂತೆ ಅವರು ಕುಸಿದು ಬಿದ್ದರು. ಬಳಿಕ ಅವರನ್ನು ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ನಿಧನರಾದರು.

ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ಅಭಿನಯಿಸುವ ಮೂಲಕ ಮೈಕೆಲ್‌ ಮಧು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ‘ಸೂರ್ಯವಂಶ’, ‘ಓಂ’, ‘ಶ್‌’, ‘ಎ’ ಮುಂತಾದ ಸಿನಿಮಾಗಳ ಮೂಲಕ ಅವರು ಮನೆಮಾತಾಗಿದ್ದರು. ಮೈಕೆಲ್‌ ಮಧು ಮೃತ ದೇಹವನ್ನು ಗುರುವಾರ ಕಿಮ್ಸ್‌ ಆಸ್ಪತ್ರೆಯು ಕುಟುಂಬದವರಿಗೆ ಒಪ್ಪಿಸಲಿದ್ದು, ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ನಟ ಆಗುವುದಕ್ಕೂ ಮುನ್ನ ನೃತ್ಯ ನಿರ್ದೇಶಕ ಆಗಬೇಕು ಎಂದು ಮೈಕೆಲ್‌ ಮಧು ಕನಸು ಕಂಡಿದ್ದರು. ಅವರು ಚೆನ್ನಾಗಿ ಡ್ಯಾನ್ಸ್‌ ಮಾಡುತ್ತಾರೆ ಎಂಬ ಕಾರಣಕ್ಕೇ ಅವರ ಹೆಸರಿನ ಜೊತೆ ‘ಮೈಕೆಲ್‌’ ಸೇರಿಕೊಂಡಿತ್ತು. ಆದರೆ ಅವರ ಡ್ಯಾನ್ಸ್ ಉತ್ಸಾಹಕ್ಕೆ ಪ್ರೋತ್ಸಾಹ ಸಿಗದ ಕಾರಣ ನೃತ್ಯ ನಿರ್ದೇಶಕನಾಗುವ ಕನಸಿಗೆ ವಿದಾಯ ಹೇಳಿ ನಟನೆಯತ್ತ ಗಮನ ಹರಿಸಿದರು.

‘ಸಿಂಗಾರಿ ಬಂಗಾರಿ’ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದ ಮೈಕೆಲ್‌ ಮಧು, ನಂತರ ಹಲವಾರು ಅವಕಾಶಗಳನ್ನು ಪಡೆದುಕೊಂಡರು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಅವರು ಇತ್ತೀಚೆಗೆ ಚಿತ್ರರಂಗದಿಂದ ಕೊಂಚ ದೂರ ಆಗಿದ್ದರು. ಅವಕಾಶಗಳ ಕೊರತೆ ಅವರನ್ನು ಕಾಡಿತ್ತು.

 

Related posts

ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾಕ್ಕೆ ನಿರ್ಮಾಪಕ, ನಿರ್ದೇಶಕ ಫಿಕ್ಸ್!

Times fo Deenabandhu

ಚೀನಾದಲ್ಲಿ ಕೊರೊನಾಗೆ ಈವರೆಗೆ 2,592 ಬಲಿ..! ದ. ಕೊರಿಯಾದಲ್ಲಿ ರೆಡ್‌ ಅಲರ್ಟ್‌ ಘೋಷಣೆ..!

Times fo Deenabandhu

ಕೊವಿಡ್-19 ನಿರ್ಮೂಲನಕ್ಕೆ ಪ್ರಧಾನಿಯವರಿಂದ ವಿಶೇಷ ತಂಡ ರಚನೆ: ಜೋಶಿ

Times fo Deenabandhu