Times of Deenabandhu
  • Home
  • ಪ್ರಧಾನ ಸುದ್ದಿ
  • ನಟ ಜೈ ಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಾ ರಾ ಗೋವಿಂದು!
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ನಟ ಜೈ ಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಾ ರಾ ಗೋವಿಂದು!

ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಲನಚಿತ್ರ ಕಲಾವಿದರಿಗೆ ದಿನಸಿ ವಿತರಣೆ ವಿಚಾರಕ್ಕೆ ಸಂಬಂಧ ನಿರ್ಮಾಪಕ ಸಾ.ರಾ. ಗೋವಿಂದು ಅವರಿಗೆ ಜೈ ಜಗದೀಶ್ ನಿಂದಿಸಿದ್ದರು ಎಂಬ ಆರೋಪವಿದೆ.

ಘಟನೆ ಏನು?

ಸಾ.ರಾ. ಗೋವಿಂದು ಅವರು ಪ್ರಸ್ತುತ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಲನಚಿತ್ರ ಕಾರ್ಮಿಕರ ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಹಲವರು ಉದ್ಯೋಗ ಕಳೆದುಕೊಂಡ ಊಟ-ತಿಂಡಿ ಮಾಡಲು ಪರದಾಡುತ್ತಿದ್ದಾರೆ. ಹೀಗಾಗಿ ಈ ವೇಳೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಇವರಿಗೆಲ್ಲ ಸಹಾಯ ಮಾಡಲು ವಾಣಿಜ್ಯ ಮಂಡಳಿ ಸದಸ್ಯ ಕೆ.ಎಂ.ವೀರೇಶ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿ ಸರ್ಕಾರದೊಂದಿಗೆ ಮಾತನಾಡಿತ್ತು.

ಜೈ ಜಗದೀಶ್ ಅವರು ಸಿಟ್ಟಾಗಿದ್ದು ಯಾಕೆ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತೃ ಸಂಸ್ಥೆಯಾಗಿದ್ದು, ನಿರ್ಮಾಪಕ, ವಿತರಕ, ಪ್ರದರ್ಶಕ ಮೂರು ವಲಯಗಳು ಇದರಲ್ಲಿ ಒಳಗೊಂಡಿವೆ. ಈ ಬಗ್ಗೆ ಕೋಪಗೊಂಡಿದ್ದ ನಟ ಜೈ ಜಗದೀಶ್ ‘ನಿರ್ಮಾಪಕರು ಅನ್ನದಾತರು, ಸಾವಿರಾರು ಜನಕ್ಕೆ ಅನ್ನವನ್ನು ನೀಡಿದ್ದಾರೆ. ನಮಗೆ ಆಹಾರದ ಕಿಟ್ ನೀಡಿ ಅವಮಾನ ಮಾಡಬೇಡಿ’ ಎಂದು ಹೇಳಿದ್ದರು. ಅಷ್ಟೇ ಅಲ್ಲದೆಸಾ ರಾ ಗೋವಿಂದು, ಕೆ.ಎಂ.ವೀರೇಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈದಿದ್ದರು. ಅವರು ಮಾತನಾಡಿದ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಾಕಷ್ಟು ಚರ್ಚೆಯನ್ನುಂಟು ಮಾಡಿತ್ತು.ಹರಿದಾಡುತ್ತಿತ್ತು. ಈ ಕುರಿತು ಸಾ ರಾ ಗೋವಿಂದು ಅವರು ಜೈ ಜಗದೀಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಆಡಿಯೋದಿಂದ ನನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಜೈ ಜಗದೀಶ್ ವಿರುದ್ಧ ಸಾ ರಾ ಗೋವಿಂದು ದೂರು ನೀಡಿದ್ದಾರೆ. ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯಬೇಕಿದೆ.

 

Related posts

 ಸಿಸಿಬಿ ತನಿಖೆಯಿಂದ ಎಲ್ಲರ ಬಣ್ಣ ಬಯಲು ಎಂದ ಯಡಿಯೂರಪ್ಪ

Times fo Deenabandhu

ಅತ್ಯಾಚಾರ ಆರೋಪಿಗಳ ಅಂತ್ಯಕ್ರಿಯೆ ನಮ್ಮ ಗ್ರಾಮದಲ್ಲಿ ಬೇಡ

Times fo Deenabandhu

 ಕೊರೊನಾ ನಿರ್ವಹಣೆ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆಗಳು