Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಐಟಿ-ಬಿಟಿ ಕಂಪೆನಿಗಳು ಕೆಲಸ ಆರಂಭಿಸಲು 14 ಷರತ್ತುಗಳ ಪಾಲನೆ ಕಡ್ಡಾಯ

ಬೆಂಗಳೂರು: ರಾಜ್ಯದ ಕೈಗಾರಿಕೆಗಳು, ಐಟಿ, ಐಟಿಇಎಸ್‌ ಕಂಪನಿಗಳು, ಡಾಟಾ, ಕಾಲ್‌ ಸೆಂಟರ್‌ಗಳು, ಟೆಲಿ ಕಮ್ಯುನಿಕೇಷನ್‌, ಇಂಟರ್‌ನೆಟ್‌ ಸರ್ವೀಸ್‌‌ ಹಾಗೂ ಇಂಕ್ಯೂಬರೇಟರ್‌ ಕಂಪನಿಗಳು ಇಲ್ಲವೇ ಘಟಕಗಳು ತಮ್ಮ ಚಟುವಟಿಕೆಗಳನ್ನು ಆರಂಭಿಸಲು ಆನ್‌ಲೈನ್‌ ಮೂಲಕ ಸ್ವಯಂ ದೃಢೀಕರಣ (ಸೆಲ್ಫ್‌ ಡಿಕ್ಲರೇಷನ್‌) ಸಲ್ಲಿಸಬೇಕಾಗುತ್ತದೆ.

ರಾಜ್ಯ ಸರಕಾರ ಮೇ 2 ರಂದು ಹೊರಡಿಸಿರುವ ಆದೇಶದ ಅನ್ವಯ ಈ ಕಂಪನಿಗಳು www.kum.karnataka.gov.in ನ ವೆಬ್‌‍ಸೈಟ್‌‍ನಲ್ಲಿ ಆನ್‌‍ಲೈನ್‌ ಮುಖಾಂತರ ಸ್ವಯಂ ದೃಢೀಕರಣ ಸಲ್ಲಿಸಬೇಕಾಗಿದೆ. ನೈರ್ಮಲ್ಯತೆ, ಸಾಮಾಜಿಕ ಅಂತರ, ಸಿಬ್ಬಂದಿಯ ಕೆಲಸ ಪಾಳಿ ಸೇರಿದಂತೆ ಒಟ್ಟು 14 ಷರತ್ತುಗಳನ್ನು ವಿಧಿಸಲಾಗಿದೆ.

ಪ್ರಮುಖ ಷರತ್ತುಗಳೇನು?

– ಕೆಲಸದ ಸ್ಥಳದಲ್ಲಿ ಮಾಸ್ಕ್‌ ಧರಿಸಬೇಕು

– ಕೆಲಸ, ಪ್ರಯಾಣ, ಊಟದ ವೇಳೆ ಸಾಮಾಜಿಕ ಅಂತರ ಪಾಲನೆ

– ಥರ್ಮಲ್‌ ಸ್ಕ್ಯಾ‌ನಿಂಗ್‌, ಕೈ ತೊಳೆಯಲು, ಸ್ಯಾನಿಟೈಸರ್‌ಗೆ ವ್ಯವಸ್ಥೆ

– ಒಳಗೆ – ಹೊರಗೆ ಹೋಗುವ ಸ್ಥಳಗಳಲ್ಲಿ ಟಚ್‌ಫ್ರೀ ವ್ಯವಸ್ಥೆ ಇರಬೇಕು.

– 65 ವರ್ಷ ಮೇಲ್ಪಟ್ಟ ಸಿಬ್ಬಂದಿ, ಗರ್ಭಿಣಿಯರು ಮನೆಯಲ್ಲಿಯೇ ಇರಬೇಕು.

– ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್‌ ಅಳವಡಿಕೆ

– ಗುಂಪು ಸೇರಿ ಸಭೆ ನಡೆಸುವಂತಿಲ್ಲ.

– ಕಂಪನಿಗಳೇ ತಮ್ಮ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ ಮಾಡಬೇಕು.

– ಒಟ್ಟು ಸಿಬ್ಬಂದಿಯಲ್ಲಿ ಕೇವಲ ಶೇ.33 ಸಿಬ್ಬಂದಿ ಕಚೇರಿಯಲ್ಲಿಕೆ ಲಸ ನಿರ್ವಹಿಸಬೇಕು

Related posts

ಹೆಚ್.ವಿಶ್ವನಾಥರು ಜೊತೆಗಿದ್ದ ಮಾಜಿ ಅನರ್ಹ ಶಾಸಕರುಗಳು ಅರ್ಹರಾಗಿ ಅಧಿಕಾರ ಅನುಭವಿಸುತ್ತಿದ್ದಾರೆ…ಆದರೆ….?

ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಮತ್ತೆ ಸೋಂಕು, ತೆಲಂಗಾಣದಲ್ಲಿ 2 ಪ್ರಕರಣ ದೃಢ!

Times fo Deenabandhu

ಮನೆಯಲ್ಲೇ ಕೊರೊನಾ ಚಿಕಿತ್ಸೆ..! ಯಾರಿಗೆ ಅವಕಾಶ..? ಮಾನದಂಡಗಳೇನು..?