Times of Deenabandhu
  • Home
  • ಪ್ರಧಾನ ಸುದ್ದಿ
  • ಗಿಲ್ಗಿಟ್‌- ಬಾಲ್ಟಿಸ್ತಾನ ಖಾಲಿ ಮಾಡಿ, ಪಾಕಿಸ್ತಾನಕ್ಕೆ ಭಾರತ ಕಠಿಣ ಸಂದೇಶ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಗಿಲ್ಗಿಟ್‌- ಬಾಲ್ಟಿಸ್ತಾನ ಖಾಲಿ ಮಾಡಿ, ಪಾಕಿಸ್ತಾನಕ್ಕೆ ಭಾರತ ಕಠಿಣ ಸಂದೇಶ

ಹೊಸದಿಲ್ಲಿ: ಪಾಕ್‌ ಆಕ್ರಮಿತ ಕಾಶ್ಮೀರದ ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನವು ಭಾರತದ ಅವಿಭಾಜ್ಯ ಅಂಗಗಳಾಗಿದ್ದು, ಪಾಕಿಸ್ತಾನ ಕೂಡಲೇ ಈ ಪ್ರದೇಶಗಳನ್ನು ಖಾಲಿ ಮಾಡಬೇಕೆಂದು ಭಾರತ ಖಡಕ್‌ ಎಚ್ಚರಿಕೆ ನೀಡಿದೆ. ಇದೇ ವೇಳೆ, ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಲು ಮುಂದಾಗಿರುವ ಪಾಕಿಸ್ತಾನದ ಪ್ರಯತ್ನಗಳಿಗೆ ಭಾರತ ತೀವ್ರ ಪ್ರತಿಭಟನೆ ದಾಖಲಿಸಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಭಾರತ ಇಷ್ಟು ನೇರ ಸಂದೇಶ ನೀಡಿರುವುದು ಇದೇ ಮೊದಲು.

ಗಿಲ್ಗಿಟ್‌- ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಬಹುದು ಎಂದು 2018ರಲ್ಲಿ ಪಾಕ್‌ ಸರಕಾರ ಮಾಡಿದ್ದ ಸಂವಿಧಾನ ತಿದ್ದುಪಡಿಗೆ ಅಲ್ಲಿನ ಸುಪ್ರೀಂ ಕೋರ್ಟ್‌ ಅನುಮೋದನೆ ನೀಡಿದೆ. ಇದಕ್ಕೆ ತಿರುಗೇಟು ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ಅಕ್ರಮವಾಗಿ ವಶಪಡಿಸಿಕೊಂಡಿರುವ ಗಡಿ ಭಾಗಗಳ ಮೇಲೆ ಪಾಕಿಸ್ತಾನದ ಸರಕಾರಕ್ಕಾಗಲೀ ಅಲ್ಲಿನ ನ್ಯಾಯಾಂಗಕ್ಕಾಗಲೀ ಯಾವುದೇ ಹಕ್ಕಿಲ್ಲ. ಈ ಪ್ರದೇಶಗಳಲ್ಲಿಆಡಳಿತಾತ್ಮಕ ಹಾಗೂ ಇತರೆ ಯಾವುದೇ ಮಹತ್ತರ ಬದಲಾವಣೆಗಳನ್ನು ತರುವ ಅಧಿಕಾರವನ್ನು ಪಾಕ್‌ ಸರಕಾರ ಹೊಂದಿಲ್ಲ” ಎಂದು ಆ ದೇಶದ ರಾಯಭಾರಿಗೆ ಕಳುಹಿಸಿದ ಖಡಕ್‌ ಸಂದೇಶದಲ್ಲಿ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಜಮ್ಮು- ಕಾಶ್ಮೀರ ರಾಜ್ಯವನ್ನು ಎರಡು ಭಾಗವಾಗಿ ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ ನಂತರ, ನವಂಬರ್‌ನಲ್ಲಿ ಹೊಸ ರಾಜಕೀಯ ನಕ್ಷೆಯನ್ನು ಭಾರತ ಬಿಡುಗಡೆ ಮಾಡಿತ್ತು. ಅದರಲ್ಲಿ ಗಿಲ್ಗಿಟ್‌- ಬಾಲ್ಟಿಸ್ತಾನವನ್ನು ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಭಾಗವಾಗಿ, ಉಳಿದ ಪಾಕ್‌ ಆಕ್ರಮಿತ ಪ್ರದೇಶ (ಪಿಒಕೆ) ವನ್ನು ಕಾಶ್ಮೀರದ ಭಾಗವಾಗಿ ಭಾರತ ತೋರಿಸಿದೆ.

Related posts

 ಚೀನಾ ಸೇನೆಯಿಂದ ಐವರ ಅಪಹರಣ?

Times fo Deenabandhu

 ವಿಶ್ವದಾದ್ಯಂತ 1.56 ಲಕ್ಷ ದಾಟಿದ ಸಾವಿನ ಸಂಖ್ಯೆ

Times fo Deenabandhu

ಪೌರತ್ವ ತಿದ್ದುಪಡಿ ಕಾನೂನು ಬಗ್ಗೆ ವದಂತಿ ಹರಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ದಾಖಲು

Times fo Deenabandhu