Times of Deenabandhu
  • Home
  • ಪ್ರಧಾನ ಸುದ್ದಿ
  • ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ, ಮೇ 7ರಿಂದ ಚಾಲನೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ, ಮೇ 7ರಿಂದ ಚಾಲನೆ

ಹೊಸದಿಲ್ಲಿ: ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ಆಪೋಶನ ತೆಗೆದುಕೊಂಡಿದೆ. ಈಗ ವಿದೇಶದಲ್ಲಿ ಸಿಲುಕಿರುವ ಭಾರತೀಯರು ದಿನವೂ ಪರಿತಪಿಸುತ್ತಿದ್ದಾರೆ. ನಾವು ಭಾರತಕ್ಕೆ ಬರುತ್ತೇವೆ ನಮ್ಮನ್ನು ಕರೆಸಿಕೊಳ್ಳಿ ಎಂದು.
ಈಗ ಅನಿವಾಸಿ ಭಾರತೀಯರ ಕರೆಗೆ ಓಗೊಟ್ಟಿರುವ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಬಾರತಕ್ಕೆ ಕರೆ ತರಲು ಕೇಂದ್ರ ಸರಕಾರ ಮುಂದಾಗಿದೆ.
ಮೇ 7ರಿಂದ ಈ ಯೋಜನೆಯನ್ನು ಸೂಕ್ತ ಕಾರ್ಯರೂಪದೊಂದಿಗೆ ಜಾರಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ.

ಅನಿವಾಸಿ ಭಾರತೀಯರು ಇದಕ್ಕಾಗಿ ಶುಲ್ಕ ಕೂಡ ಪಾವತಿಸಬೇಕಾಗುತ್ತದೆ.

ಮುಂದಿನ ಕೆಲವೇ ದಿನಗಳಲ್ಲಿ ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.

ವಿದೇಶಾಂಗ ವ್ಯವಹಾರ ಸಚಿವಾಲಯ ಈ ಸಂಬಂಧ ಮಾಹಿತಿ ಒದಗಿಸುತ್ತದೆ.

Related posts

 ಜುಲೈ 14ರ ರಾತ್ರಿಯಿಂದ ಒಂದು ವಾರ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಲಾಕ್‌ಡೌನ್‌

ಸಾರ್ವಜನಿಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ: ಶ್ರೀರಾಮುಲು

Times fo Deenabandhu

ಟಿಕೆಟ್‌ ರೀಫಂಡ್‌ಗೆ ಖಾಸಗಿ ವಿಮಾನಯಾನ ಕಂಪನಿಗಳ ನಿರಾಕರಣೆ

Times fo Deenabandhu