Times of Deenabandhu
  • Home
  • ಜಿಲ್ಲೆ
  • ಕೊರೊನಾ ವೈರಸ್ ಧರ್ಮ ದೇವರುಗಳನ್ನು ಕಟ್ಟಿಹಾಕಿದ ಸಂದರ್ಭದಲ್ಲಿ ಮುರುಘಾಮಠ ಮಾನವೀಯತೆಯ ಬಾಗಿಲನ್ನು ತೆಗೆದಿದೆ- ಡಾ. ಶಿವಮೂರ್ತಿ ಮುರುಘಾ ಶರಣರು
ಚಿತ್ರದುರ್ಗ ಜಿಲ್ಲೆ

ಕೊರೊನಾ ವೈರಸ್ ಧರ್ಮ ದೇವರುಗಳನ್ನು ಕಟ್ಟಿಹಾಕಿದ ಸಂದರ್ಭದಲ್ಲಿ ಮುರುಘಾಮಠ ಮಾನವೀಯತೆಯ ಬಾಗಿಲನ್ನು ತೆಗೆದಿದೆ- ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ, ಮೇ.03 – ಕೊರೊನಾ ವೈರಸ್ ಧರ್ಮ ದೇವರುಗಳನ್ನು ಕಟ್ಟಿಹಾಕಿದ ಸಂದರ್ಭದಲ್ಲಿ ಮುರುಘಾಮಠ ಮಾನವೀಯತೆಯ ಬಾಗಿಲನ್ನು ತೆಗೆದಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಕೊನೆಯ ದಿನವಾದ ಇಂದು ಪೆಟ್ರೋಲ್‍ಬಂಕ್ ಕಾರ್ಮಿಕರು, ಗರ್ಭಿಣಿ ಸ್ತ್ರೀಯರು, ಕೊರಿಯರ್ ಸಿಬ್ಬಂದಿ, ಸೀಬಾರ, ಗುತ್ತಿನಾಡು ಕಾರ್ಮಿಕರು, ಬಸವಬಳಗ, ಕೊಳಗೇರಿ ನಿವಾಸಿಗಳು ಮುಂತಾದ ಕುಟುಂಬಗಳಿಗೆ ದವಸ-ಧಾನ್ಯ ವಿತರಿಸಿ ಮಾತನಾಡಿದ ಅವರು, ಎಂದೂ ಕಾಣದಂತಹ ಅಸಹಾಯಕ ಪರಿಸ್ಥಿತಿ ಇಂದು ಬಂದೊದಗಿದೆ. ಈ ಕಾಯಿಲೆ ಜನರನ್ನು  ಅಸಹಾಯಕರನ್ನಾಗಿ ಅಮಾಯಕರನ್ನಾಗಿ ಮಾಡಿದೆ. ಕೆಲವರ ಹತ್ತಿರ ಅನ್ನವಿಲ್ಲ. ಇನ್ನುಕೆಲವರ ಹತ್ತಿರ ಅನ್ನ ಇದ್ದು ನೆಮ್ಮದಿಯಿಲ್ಲ. ಏಕಾಂಗಿತನ, ಜುಗುಪ್ಸೆ ಜನರ ನೆಮ್ಮದಿಯನ್ನು ಹಾಳುಮಾಡಿದೆ. ಎಲ್ಲರೂ ಗೃಹಬಂಧನದಲ್ಲಿದ್ದಾರೆ. ಬೀದಿ ಸಂಚಾರ ಸುರಕ್ಷಿತವಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದರು.

ಶ್ರೀಮಠದಿಂದ ದಿ. 4-4-2020ರಿಂದ ದಿ. 3-5-2020ರವರೆಗೆ ಬಣ್ಣ ಬಳಿಯುವ ಮತ್ತು ವುಡ್ ಪಾಲಿಶ್ ಕಾರ್ಮಿಕರು, ತಮಟಗಲ್ ಕಾರ್ಮಿಕರು. ಮಹಿಳಾ ಸೇವಾ ಸಮಾಜ, ದೇವಸ್ಥಾನದ ಅರ್ಚಕರುಗಳು, ಶರಣಸಂಸ್ಕøತಿ ಉತ್ಸವ ಕಾರ್ಯಕ್ರಮದಲ್ಲಿ ಕೆಲಸ ಮಾಡಕುವ ಕಾರ್ಮಿಕರು, ಅಗಸರಹಳ್ಳಿ ಕಾರ್ಮಿಕರು, ಮಾದಾರ ಸಮಾಜ, ಸವಿತಾ ಸಮಾಜ, ಚಾಲಕರು, ಕಾರ್ಮಿಕರು, ಬೋವಿ ಸಮಾಜ, ನಿರ್ವಸತಿಗರು, ಪತ್ರಿಕೆ ಹಂಚುವವರು, ಛಲವಾದಿ ಸಮಾಜ, ಕೋಟೆ ಮತ್ತು ಚಂದ್ರವಳ್ಳಿ ಗೈಡ್ಸ್‍ಗಳು, ಮಡಿವಾಳ ಸಮಾಜ, ಮೇದಾರ ಸಮಾಜ, ಕೊರಚ ಸಮಾಜ, ಬುರುಜನಹಟ್ಟಿ ಕಾರ್ಮಿಕರು, ಬೆಸ್ತ ಸಮಾಜ, ಕುಂಬಾರ ಸಮಾಜ, ಚಲನಚಿತ್ರ ಮಂದಿರದ ಕಾರ್ಮಿಕರು, ಉಪ್ಪಾರ ಸಮಾಜ, ಕ್ರೈಸ್ತ ಸಮಾಜ, ಗೋಸಾಯಿ ಜನಾಂಗ, ಹಾಲು ವಿತರಕರು, ಹಕ್ಕಿಪಿಕ್ಕಿ ಜನಾಂಗ, ಜೋಗಿ ಸಮಾಜ, ಬಂಜಾರ ಸಮಾಜ, ಕರ್ನಾಟಕ ರಾಜ್ಯ ನಿರ್ಗತಿಕ ಸಮಾಜ, ಚೆನ್ನಯ್ಯನಹಟ್ಟಿ ಬಂಜಾರ ಸಮಾಜ, ನೇಕಾರ ಸಮಾಜ, ದೇವಾಂಗ ಸಮಾಜ, ಕಮ್ಮಾರ ಸಮಾಜ, ಬಲಿಜ ಸಮಾಜ, ಸಿದ್ದಾಪುರ ಬಡಕುಟುಂಬಗಳು, ಲಕ್ಷ್ಮೀಸಾಗರ ಬಡಕುಟುಂಬಗಳು, ಸಾಸಲಹಟ್ಟಿ ಬಡಕುಟುಂಬಗಳು, ವಿಶ್ವಕರ್ಮ ಸಮಾಜ  ಬಡಕುಟುಂಬಗಳು, ಸಾದಿಕ್ ನಗರ ಬಡಕುಟುಂಬಗಳು, ಕೊಳಚೆ ನಿರ್ಮೂಲನೆ ಮಂಡಳಿ ಕಾರ್ಮಿಕರು, ಐ.ಯು.ಡಿ.ಪಿ. ಬಡಕುಟುಂಬಗಳು, ಛಾಯಾಚಿತ್ರಕಾರರು, ಮುಸ್ಲಿಂ ಸಮಾಜ, ಕುರುಬ ಸಮಾಜ, ಮಠದ ಕುರುಬರಹಟ್ಟಿ ಕಾರ್ಮಿಕರು, ನದಾಫ್ ಸಮಾಜ, ವಿಜಯನಗರದ ಮುಸ್ಲಿಂ ಸಮಾಜ ಬಡಕುಟುಂಬಗಳು, ವೀರಶೈವ ಮತ್ತು ಜಂಗಮ ಸಮಾಜ ಮತ್ತು ಕೊಳಗೇರಿ ನಿವಾಸಿಗಳು, ಕವಾಡಿಗರಹಟ್ಟಿ ಕಾರ್ಮಿಕರು, ಅಡಿಗೆ ತಯಾರಕರು, ಹಗಲು ವೇಷದ ಸಮುದಾಯದವರು, ಮಂಗಳಮುಖಿಯರು, ಕಾಡಸಿದ್ಧರು, ಮಂಜುನಾಥ ವಿಕಲಚೇತನ ಸೇವಾ ಸಂಘ, ಈಡಿಗರ ಸಮಾಜ ಬಡಕುಟುಂಬಗಳು, ಆಟೋ ಚಾಲಕರ ಸಂಘ, ಬಿ.ಎಸ್.ಎನ್.ಎಲ್‍ನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು, ಪಡಿತರ ಚೀಟಿ ಹೊಂದಿಲ್ಲದ ನಿವಾಸಿಗಳು, ವಿಜಯನಗರದ ಕೂಲಿ ಕಾರ್ಮಿಕರು, ಸೌಖ್ಯ ಸಮುದಾಯ ಸಂಸ್ಥೆ, ಸುಚೇತನ ನೆಟ್‍ವಕ್ರ್ಸ್, ಹಮಾಲಿ ಕಾರ್ಮಿಕರು, ರಂಗಭೂಮಿ ಕಲಾವಿದರು, ಟ್ಯಾಕ್ಸಿ ಚಾಲಕರು, ಗೃಹ ರಕ್ಷಕ ಸಿಬ್ಬಂದಿ, ಗರ್ಭಿಣಿ ಮಹಿಳೆಯರು, ಪೆಟ್ರೊಲ್ ಬಂಕ್ ಕಾರ್ಮಿಕರು, ಕೋರಿಯರ್ ಸಿಬ್ಬಂದಿಗಳು, ಗುತ್ತಿನಾಡು, ಸೀಬಾರ ಕಾರ್ಮಿಕರು, ಬಸವ ಬಳಗ, ಕೊಳಗೇರಿ ನಿವಾಸಿಗಳು, ಕರಿಯಮ್ಮನಹಟ್ಟಿ ಬಡಕುಟುಂಬಗಳು, ಮೆದೆಹಳ್ಳಿ ನಿವಾಸಿಗಳು ಮತ್ತು ಗಾರೇಹಟ್ಟಿ ಕಾರ್ಮಿಕರ ಕುಟುಂಬಗಳಿಗೆ ಅಕ್ಕಿ, ರಾಗಿ, ಅಡುಗೆ ಎಣ್ಣೆ, ಬೇಳೆ, ಗೋಧಿ, ಗೋಧಿಹಿಟ್ಟು ಮೊದಲಾದ ದವಸಧಾನ್ಯ ಇರುವ ಒಟ್ಟು 9710 ಕಿಟ್‍ಗಳನ್ನು ವಿತರಿಸಲಾಗಿದೆ. ಇದರ ಜೊತೆಯಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಪೆÇಲೀಸ್ ಇಲಾಖೆಯ ಸಾವಿರಾರು ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಪೆÇಲೀಸ್ ಇಲಾಖೆಗಳಿಗೆ ಸ್ಯಾನಿಟೈಸರ್ ಯಂತ್ರೋಪಕರಣ, ಸ್ಯಾನಿಟೈಸರ್, ಸಾವಿರಾರು ಮಾಸ್ಕ್‍ಗಳನ್ನು ವಿತರಿಸಲಾಗಿದೆ. ದವಸ-ಧಾನ್ಯ ನೀಡುವ ಸಂದರ್ಭದಲ್ಲಿ ಬೆಳಗಿನ ಉಪಾಹಾರವನ್ನು ನೀಡಲಾಗಿದೆ. ಇಂತಹ ಕಾರ್ಯಗಳು ಮುಂದೊಂದು ದಿನ ಮುರುಘಾಮಠದ ಇತಿಹಾಸದಲ್ಲಿ ದಾಖಲಾಗುತ್ತವೆ ಎಂದು ಹೇಳಿದರು.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ,  ಮುರುಘಾಮಠದಲ್ಲಿ ದಾಸೋಹ ಸೇವೆ ಪರಂಪರಾನುಗತವಾಗಿ ನಡೆದುಕೊಂಡು ಬಂದಿದೆ. ಹಿಂದಿನ ಜಗದ್ಗುರುಗಳು ನಾಡಿನ ಸಮಸ್ಯೆ, ಜನರ ಕಷ್ಟ ಅರಿತುಕೊಂಡು ಜನರಿಗೆ ಆಸರೆಯಾದ ಸಂದರ್ಭಗಳು ನಮ್ಮ ಕಣ್ಮುಂದೆ ಇವೆ. ಅಸಹಾಯಕ ಸಮಾಜವನ್ನು ಗುರುತಿಸಿ ಅವರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿದ್ದಾರೆ. ಹಿಂದಿನ ಪರಂಪರೆ ಎಂದರೆ ಜಯದೇವ ಸ್ವಾಮಿಗಳು ಉಳಿಸಿ ಗಳಿಸಿದ್ದಾರೆ. ಜಯವಿಭವ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು ಶ್ರೀಮಠವನ್ನು ಚೆನ್ನಾಗಿ ಬೆಳೆಸಿದ್ದಾರೆ. ಈಗಿನ ಜಗದ್ಗುರುಗಳಾದ ಮುರುಘಾ ಶರಣರು ಶ್ರೀಮಠವನ್ನು ವಿಶ್ವದ ಭೂಪಟದಲ್ಲಿ ಬರುವಂತೆ ಮಾಡಿದ್ದಾರೆ. ಇದು ನಮ್ಮೆಲ್ಲರ ಪುಣ್ಯ. ನಾಡಿಗೆ, ರಾಷ್ಟ್ರಕ್ಕೆ ಗೌರವ ತರುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ದಾಸೋಹಕ್ಕಾಗಿ 50 ಕ್ವಿಂಟಾಲ್ ಅಕ್ಕಿಯನ್ನು ನೀಡುವುದಾಗಿ ತಿಳಿಸಿದರು.

ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಜಂಗಮ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಬಸವೇಶ್ವರ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ|| ಪ್ರಶಾಂತ್, ಉಪಪ್ರಾಂಶುಪಾಲರಾದ ಡಾ|| ನಾರಾಯಣಮೂರ್ತಿ, ವೈದ್ಯಕೀಯ ಅಧೀಕ್ಷಕರಾದ ಡಾ|| ಪಾಲಾಕ್ಷಪ್ಪ, ರಾಜಕೀಯ ಧುರೀಣ ಜಯಣ್ಣ, ಪೈಲ್ವಾನ್ ತಿಪ್ಪೇಸ್ವಾಮಿ, ವಕೀಲರಾದ ಉಮೇಶ್, ಪೆÇಲೀಸ್ ಇನ್ಸ್‍ಪೆಕ್ಟರ್ ಗಿರೀಶ್, ವೀರೇಂದ್ರಕುಮಾರ್, ಷಡಾಕ್ಷರಯ್ಯ ಮೊದಲಾದವರಿದ್ದರು.

Related posts

ಹುಟ್ಟಿನಿಂದಲೇ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ: ಎಸ್.ಎಲ್ ಭೋಜೆಗೌಡ

Times fo Deenabandhu

ನಾಲ್ಕು ವಾರದ ಲಾಕ್‍ಡೌನ್ : ಕಲಿತ ಪಾಠವೇನು ?

Times fo Deenabandhu

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ: ಬಸವರಾಜ್ ಚೇಂಗಟಿ

Times fo Deenabandhu