Times of Deenabandhu
  • Home
  • ಜಿಲ್ಲೆ
  • ರಾಜಕಾರಣಿಗಳು ಅಪೇಕ್ಷೆಯನ್ನಿಟ್ಟುಕೊಂಡು ಜನರಿಗೆ ಸಹಾಯ ಮಾಡುತ್ತಾರೆ – ಮಾಜಿ ಸಂಸದ ಬಿ.ಎನ್. ಚಂದ್ರಪ್ಪ
ಚಿತ್ರದುರ್ಗ ಜಿಲ್ಲೆ

ರಾಜಕಾರಣಿಗಳು ಅಪೇಕ್ಷೆಯನ್ನಿಟ್ಟುಕೊಂಡು ಜನರಿಗೆ ಸಹಾಯ ಮಾಡುತ್ತಾರೆ – ಮಾಜಿ ಸಂಸದ ಬಿ.ಎನ್. ಚಂದ್ರಪ್ಪ

ಚಿತ್ರದುರ್ಗ – ಏ. 30 – ರಾಜಕಾರಣಿಗಳು, ಮತ್ತೆ ಕೆಲವರು ಯಾವುದಾದರೂ ಅಪೇಕ್ಷೆಯನ್ನಿಟ್ಟುಕೊಂಡು ಜನರಿಗೆ ಸಹಾಯ ಮಾಡುತ್ತಾರೆ ಎಂದು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹೇಳಿದರು.

ಶ್ರೀ ಮುರುಘರಾಜೇಂದ್ರ ಮಠದಲ್ಲಿ ಹಮಾಲಿ ಕಾರ್ಮಿಕರು, ಸೌಖ್ಯ ಸಮುದಾಯ ಸಂಸ್ಥೆ, ಸುಚೇತನ ನೆಟ್‍ವರ್ಕ್ ಮೊದಲಾದ ಸಂಸ್ಥೆಗಳ 300 ಕುಟುಂಬಗಳಿಗೆ ದವಸ-ಧಾನ್ಯಗಳನ್ನು ಡಾ. ಶಿವಮೂರ್ತಿ ಮುರುಘಾ ಶರಣರೊಂದಿಗೆ ವಿತರಿಸಿ ಮಾತನಾಡಿದ ಅವರು, ಮುರುಘಾಮಠ ಒಂದಿಲ್ಲೊಂದು ಜನೋಪಯೋಗಿ ಕೆಲಸಗಳನ್ನು ಮಾಡುತ್ತ ಬರುತ್ತಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರು ಮುಖ್ಯಮಂತ್ರಿಗಳಾದವರು ಶ್ರೀಮಠದ ಮಹತ್ತರ ಕಾರ್ಯಗಳ ಬಗ್ಗೆ ಮಾತನಾಡುತ್ತಾರೆ. ಇದೊಂದು ಅಪೂರ್ವ ಸಂದರ್ಭ ಎಂದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್ ಮಾತನಾಡಿ, ಇಡೀ ವಿಶ್ವವೇ ಕೊರೊನಾ ಸಮಸ್ಯೆಯಿಂದ ಬಳಲುತ್ತಿದೆ. ಲಾಕ್‍ಡೌನ್ ಆದಾಗಿನಿಂದ ಜನಸಾಮಾನ್ಯರು, ಕಟ್ಟಡ ಕಾರ್ಮಿಕರು, ನಿರಾಶ್ರಿತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೊಂದರೆಗೊಳಗಾದ ಜನರ ನೋವನ್ನು ಅರ್ಥೈಸಿಕೊಂಡು ಕಳೆದ ಒಂದು ತಿಂಗಳಿನಿಂದ ಶ್ರೀಮಠವು ಅನೇಕ ಅಸಂಘಟಿತ ಸಮುದಾಯಗಳನ್ನು, ಅಸಹಾಯಕರನ್ನು ಗುರುತಿಸಿ ದವಸ-ಧಾನ್ಯ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

ಸೌಖ್ಯ ಸಮುದಾಯ ಸಂಸ್ಥೆಯ ದೀಪ ಮಾತನಾಡಿದರು.

ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ವಕೀಲರಾದ ಉಮೇಶ್, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.

 

 

 

 

 

 

 

 

 

 

 

 

 

Related posts

ಉಪಚುನಾವಣೆಯ ಫಲಿತಾಂಶದಿಂದಆಡಳಿತ ಸುಭದ್ರ; ಎಂ.ಕೆ.ಪ್ರಾಣೇಶ್

Times fo Deenabandhu

ಗ್ರಾಮೀಣ ರಸ್ತೆಗಳ ಗುಂಡಿ ಮುಚ್ಚುವಲ್ಲಿ ಕಳಪೆ ಕಾಮಗಾರಿ: ಗ್ರಾಮಸ್ಥರ ಆಕ್ರೋಶ

Times fo Deenabandhu

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ ಜ.೨೩ರಿಂದ ೩೦ರವರೆಗೆ ‘ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ’ ಎಂಬ ಅಭಿಯಾನ

Times fo Deenabandhu