Times of Deenabandhu
ಚಿತ್ರದುರ್ಗ ಮುಖ್ಯಾಂಶಗಳು

ಸೈದ್ಧಾಂತಿಕ ಚರ್ಚೆಗೆ ಸಮಯವಲ್ಲ – ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಬಹಿರಂಗ ಪತ್ರ

ಚಿತ್ರದುರ್ಗ ಏ.29: ಮಾನವ ಸಹಜವಾದ ತಪ್ಪುಗಳು ಘಟಿಸುತ್ತವೆ. ತಪ್ಪು ಕಲ್ಪನೆಗಳನ್ನು ತಿದ್ದಿಕೊಳ್ಳುವ ಅಥವಾ ಸರಿಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ  ಐತಿಹಾಸಿಕ ಸಂಗತಿಗಳು ಮುಖ್ಯ ಆಗುತ್ತವೆ. ಬಸವಣ್ಣನವರು ಈ ಜಗತ್ತು ಕಂಡಂತಹ ಮಹಾನ್ ದಾರ್ಶನಿಕರು. ಅವರು ಎತ್ತಲ್ಲ; ಎಲ್ಲರನ್ನು ಎತ್ತುವವರು. ಇತಿಹಾಸ ಇತಿಹಾಸವೆ. ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಯಾರೂ ಮಾಡುವಂತಹದ್ದಲ್ಲ. ಯಾರಿಂದ ಯಾರು ಅನ್ನುವುದಕ್ಕಿಂತ, ಯಾರಿಂದ ಏನು ಸಮಾಜಕ್ಕೆ ಕೊಡುಗೆ ನೀಡಲ್ಪಟ್ಟಿದೆ ಎನ್ನುವುದು ಬಹಳ ಮುಖ್ಯ. ಲಿಂಗಾಯತ ಮತ್ತು ವೀರಶೈವ ಈ ಪ್ರಭೇದಗಳ ನಡುವೆ ನಡೆಯುತ್ತಿರುವ ಚರ್ಚೆ ನಿನ್ನೆ ಮೊನ್ನೆಯದಲ್ಲ. ಅವರವರಿಗೆ ಅವರವರ ಸಂಸ್ಥಾಪಕರು ಅಥವಾ ಮೂಲ ಪುರುಷರು ಮುಖ್ಯರಾಗುತ್ತಾರೆ. ಇಂಥ ಸೈದ್ಧಾಂತಿಕವಾದ ಚರ್ಚೆಗಳನ್ನು ಎತ್ತಿಕೊಳ್ಳುವ ಕಾಲ ಇದಲ್ಲವೆಂದು ಚಿತ್ರದುರ್ಗದ ಶೂನ್ಯಪೀಠಾಧ್ಯಕ್ಷರಾದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಬಹಿರಂಗ ಪತ್ರವನ್ನು ಬರೆದು ನಿವೇದಿಸಿಕೊಂಡಿದ್ದಾರೆ.

ಪತ್ರದಲ್ಲಿ ಮುಂದುವರೆದು, ಇಡೀ ಜಗತ್ತು ಕೊರೊನಾ ಅನ್ನುವಂತಹ ಕಾಯಿಲೆಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಕೆಲವರ ಹಸಿವಿಗೆ ಅನ್ನವಿಲ್ಲ. ಕೆಲವರಿಗೆ ಅನ್ನವಿದ್ದು ನೆಮ್ಮದಿಯಲ್ಲ. ಇಂಥದೊಂದು ಜಟಿಲವಾದ ಸಮಸ್ಯೆಗೆ ಜಗತ್ತು ಹಿಂದೆಂದೂ ಒಳಗಾಗಿರಲಿಲ್ಲ. ಇಂತಹ ಸಂಕಟದ ಸಂದರ್ಭದಲ್ಲಿ ಯಾವುದೇ ವ್ಯಕ್ತಿ, ಸಂಘಟನೆಯಿಂದ ಎಂತಹ ಸೇವೆಯನ್ನು ಮತ್ತು ಸಹಕಾರವನ್ನು ನೀಡಬೇಕಾಗುತ್ತದೆ ಎಂಬುದು ಈ ಸಂದರ್ಭದ ಬಹುದೊಡ್ಡ ಹೊಣೆಗಾರಿಕೆ. ಉಭಯತರಿಗೆ ನಾನು ಕೇಳಿಕೊಳ್ಳುವುದೇನೆಂದರೆ ಸೈದ್ಧಾಂತಿಕ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಿ ಕೊರೊನಾದಿಂದ ತತ್ತರಿಸುತ್ತಿರುವ ಸಂತ್ರಸ್ತರಿಗೆ ಸಹಕರಿಸಲು ಮುಂದಾಗೋಣ. ನಮ್ಮ ಹೃದಯ ವೈಶಾಲ್ಯ ತೋರಿಸೋಣವೆಂದು ತಿಳಿಸಿದ್ದಾರೆ.

 

 

Related posts

ಹನಿಟ್ರ್ಯಾಪ್ ತನಿಖೆ ಚುರುಕು: ರಾಜ್ಯದ 10ಕ್ಕೂ ಹೆಚ್ಚು ಶಾಸಕರ ರಾಸಲೀಲೆ ವೀಡಿಯೋ ಸೆರೆ, ದೂರು ನೀಡಲು ಹಿಂದೇಟು

Times fo Deenabandhu

ಕರ್ನಾಟಕ ಮತ್ತು ಹೈದರಾಬಾದ್ ತಂಡಗಳ ನಾಯ್ಡು ಟ್ರೋಫಿ ಪಂದ್ಯಾವಳಿ ಆರಂಭ

Times fo Deenabandhu

ಸಾವಿರಾರು ರೂ. ಖರ್ಚು ಮಾಡಿ ಇಟಲಿಗೆ ಅಮೇರಿಕಾದ ಮಣ್ಣು ತಂದ ಯೋಧ…! : ಯಾಕೆ ಗೊತ್ತಾ…?

Times fo Deenabandhu