Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಪಡಿತರ ಕಿಟ್ ಹಂಚಲು ಕಮಿಷನ್ ಕೇಳಿದ ತಿಪಟೂರು ಶಾಸಕ, ಆಡಿಯೋ ವೈರಲ್‌

ತುಮಕೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನರಿಗೆ ಉಚಿತವಾಗಿ ಪಡಿತರ ಕಿಟ್ ವಿತರಿಸಲು ತಿಪಟೂರು ಬಿಜೆಪಿ ಶಾಸಕ ಬಿ.ಸಿ ನಾಗೇಶ್ ಶೇ.20ರಷ್ಟು ಕಮಿಷನ್ ಕೇಳಿದ್ದಾರೆ ಎನ್ನಲಾದ ಆಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ. ಶಾಸಕರದ್ದು ಎನ್ನಲಾದ ಆಡಿಯೋಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.
ಕ್ಷೇತ್ರದ ಕೋಟನಾಯಕನಹಳ್ಳಿ ಬಿಜೆಪಿ ಕಾರ್ಯಕರ್ತ ಉಮಾಶಂಕರ್ ಎಂಬಾತ ಶಾಸಕರಿಗೆ ದೂರವಾಣಿ ಕರೆ ಮಾಡಿ ತಮ್ಮ ಗ್ರಾಮಕ್ಕೆ ಪಡಿತರ ಕಿಟ್ ಹಂಚುವಂತೆ ಮನವಿ ಮಾಡಿದ್ದರು. ಆಗ ಶಾಸಕ ಕಮೀಷನ್‌ ಕೇಳಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಬಂದಿದೆ.

ಆಡಿಯೋದಲ್ಲಿ ಶಾಸಕ ಬಿ.ಸಿ ನಾಗೇಶ್, ‘ನಿಮಗೆಲ್ಲಾ ಕೆಲಸ‌ ಕೊಟ್ಟಿದ್ದೀನಲ್ವಾ, ಅದರಲ್ಲಿ ಶೇ.20ರಷ್ಟು ದುಡ್ಡು ತಂದು ಕೊಡಿ, ಎಲ್ಲಾ ಎಂಎಲ್ಎಗಳು ಅದಕ್ಕೆ ಶೇ.20ರಷ್ಟು ಹಣ ವಸೂಲಿ ಮಾಡ್ತಾರೆ. ನೀವು ತಂದು ಕೊಡಿ, ಇನ್ಮೇಲೆ ನಿಮಗೆಲ್ಲಾ ಸಹಾಯ ಮಾಡ್ತೀವಲ್ವಾ. ಅದ್ರಲ್ಲಿ ಕಮಿಷನ್ ಹೊಡೆಯಬೇಕು ನಾವು’ ಎಂದು ಹೇಳಿದ್ದಾರೆ.
ಈ ಧ್ವನಿ ಮುದ್ರಿಕೆ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಕಷ್ಟದಲ್ಲಿರುವ ಸಮಯದಲ್ಲಿ ಜವಾಬ್ದಾರಿಯುತ ಶಾಸಕ ಈ ಮಾತನ್ನು ಆಡಿರುವುದು ಸರಿಯೇ? ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಶಾಸಕರ ಮೇಲಿನ ಈ ಆರೋಪ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.

Related posts

ಉಗ್ರರ ವಿರುದ್ಧ ಕಾದಾಡುವ ಯೋಧರಿಗೆ ಸರಿಯಾದ ಊಟ, ಬಟ್ಟೆ ಸಿಗ್ತಿಲ್ಲ..!

Times fo Deenabandhu

70 ಲಕ್ಷ ಕೋವಿಡ್-19 ಟೆಸ್ಟಿಂಗ್ ಕಿಟ್ ಗಳಿಗೆ ಆರ್ಡರ್ ಮಾಡಿದ ಭಾರತ!

Times fo Deenabandhu

 ಕೊರೊನಾ: ಖರೀದಿಯಲ್ಲಿಅಕ್ರಮ, ಕೇಂದ್ರ ತಂಡದಿಂದ ಮಂಗಳವಾರ ಸಿಎಂ ಭೇಟಿ