Times of Deenabandhu
  • Home
  • ಜಿಲ್ಲೆ
  • ಗಾಂಧಿಬಜಾರ್ ವರ್ತಕರು ಲಾಕ್ ಡೌನ್ ನಿಯಮ ಪಾಲಿಸಿ ವಹಿವಾಟು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ಸೂಚನೆ
ಜಿಲ್ಲೆ ಶಿವಮೊಗ್ಗ

ಗಾಂಧಿಬಜಾರ್ ವರ್ತಕರು ಲಾಕ್ ಡೌನ್ ನಿಯಮ ಪಾಲಿಸಿ ವಹಿವಾಟು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ಸೂಚನೆ

ಶಿವಮೊಗ್ಗ ಏ.28: ಗಾಂಧಿಬಜಾರ್ ವರ್ತಕರು ಲಾಕ್ ಡೌನ್ ನಿಯಮ ಪಾಲಿಸಿ ಜಿಲ್ಲಾಡಳಿತ ವಿಧಿಸಿದ ಷರತ್ತಿನೊಂದಿಗೆ  ನಿಗದಿತ ಸಮಯಾನುಸಾರ ಸಾಮಾಜಿಕ ಅಂತರ ಕಾಯ್ದುಕೊಂಡು ವಹಿವಾಟು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಶಾಂತರಾಜ್ ಅವರೊಂದಿಗೆ ಗಾಂಧಿಬಜಾರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶಿವಕುಮಾರ್, ಲಾಕ್ ಡೌನ್ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿ ಅನುಮತಿ ನೀಡಿದೆ. ಅಂತೆಯೇ, ಗಾಂಧಿ ಬಜಾರ್ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಅನ್ವಯಿಸುವಂತೆ ಕೆಲವೊಂದು ಷರತ್ತುಗಳೊಂದಿಗೆ ವಹಿವಾಟಿಗೆ ನಿನ್ನೆಯಿಂದಲೇ ಅವಕಾಶ ನೀಡಲಾಗಿತ್ತು. ಆದರೆ, ಜಿಲ್ಲಾಡಳಿತ ಅವಕಾಶ ನೀಡಿದ್ದರೂ ಪೊಲೀಸ್ ಇಲಾಖೆಯಿಂದ ಬಲವಂತವಾಗಿ ಬೆಳಗ್ಗೆಯೇ ಬಾಗಿಲು ಹಾಕಿ ಬಂದ್ ಮಾಡಿಸಲಾಗಿದೆ ಎಂದು ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ದೂರಿದ್ದರು. ಈ ಸಂಬಂಧ ಇಂದು ಜಿಲ್ಲಾಧಿಕಾರಿ ಭೇಟಿ ನೀಡಿ ಕೆಲವು ಸಲಹೆ ಸೂಚನೆ ನೀಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಕೃಷಿ ಉಪಕರಣಗಳು, ಹಾರ್ಡ್ ವೇರ್, ಯಂತ್ರೋಪಕರಣ ಬಿಡಿಭಾಗಗಳು, ಎಲೆಕ್ಟ್ರಿಕಲ್ ಶಾಪ್ ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು. ವ್ಯಾಪಾರಸ್ಥರ ಮನವಿ ಮೇರೆಗೆ ಲಾಕ್ ಡೌನ್ ನಿಯಮ ಪಾಲಿಸಿ ಕಿರಾಣಿ ಅಂಗಡಿ, ಇತರೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ತೆರೆಯಲು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸರನ್ನು ಕಂಡ ವರ್ತಕರು ದಡಬಡಾಯಿಸಿ ಅಂಗಡಿ ಬಾಗಿಲು ಹಾಕಲು ಮುಂದಾದರು. ಅವರನ್ನು ಕರೆದು ಮಾತನಾಡಿಸಿದ ಜಿಲ್ಲಾಧಿಕಾರಿ, ನಾವು ಬಾಗಿಲು ಹಾಕಿಸಲು ಬಂದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ಮಾಡಿ. ಹೆಚ್ಚಿನ ಸಿಬ್ಬಂದಿ ಇದ್ದರೆ ಅರ್ಧದಷ್ಟು ಸಿಬ್ಬಂದಿ ಬಳಸಿಕೊಳ್ಳಿ. ಕೆಲವು ಅಂಗಡಿಗಳಲ್ಲಿ ಬಿಲ್ ನೀಡಿದ್ದೀರಾ ಎಂದು ಪ್ರಶ್ನಿಸಿದ್ದು, ಕೆಲವರು ಬಿಲ್ ನೀಡಿರಲಿಲ್ಲ. ಮತ್ತೆ ಕೆಲವರು ನೋಂದಣಿಯನ್ನೇ ಮಾಡಿಸಿಲ್ಲದಿರುವುದು ಗೊತ್ತಾಗಿ ಕ್ರಮಕೈಗೊಳ್ಳಲು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದ ದ್ವಿಚಕ್ರವಾಹನ ಸವಾರರನ್ನು ತಡೆದು ಎಚ್ಚರಿಕೆ ನೀಡಿದರು.

ಪ್ರಾರಂಭಿಕವಾಗಿ ಲಾಕ್ ಡೌನ್ ಸಡಿಲಿಕೆಗಳ ಪರಿಣಾಮಗನ್ನು ಗಮನಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

 

 

 

 

 

 

 

 

Related posts

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಪ್ರೊ.ಜಿ.ಪ್ರಶಾಂತ ನಾಯಕ ಸೇರಿ 10 ಜನರಿಗೆ ಸಾಹಿತ್ಯಶ್ರೀ ಪ್ರಶಸ್ತಿ,ಐವರಿಗೆ ಗೌರವ ಪ್ರಶಸ್ತಿ

Times fo Deenabandhu

ಕುಲಪತಿಗಳ ನೇಮಕಾತಿಗೆ ತಜ್ಞರ ಸಮಿತಿ ರಚನೆ : ಉಪ ಮುಖ್ಯಮಂತ್ರಿ ಡಾ.ಅಶ್ವಥ ನಾರಾಯಣ

Times fo Deenabandhu

ಕೊರೊನಾ: ರಾಜ್ಯದಲ್ಲಿ 19 ಬಲಿ, 1502 ಜನರಿಗೆ ಸೋಂಕು.. 29 ಜಿಲ್ಲೆಗಳಲ್ಲೂ ಮಹಾಮಾರಿಯ ಹಾವಳಿ. ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ ಸೋಂಕು…….ಇಲ್ಲಿದೆ ಫುಲ್ ಡಿಟೈಲ್ಸ್……