Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಮಹದೇಶ್ವರ ಬೆಟ್ಟ: ದಾಸೋಹದ ಅಕ್ಕಿ ಬಡವರಿಗೆ

ಮಹದೇಶ್ವರ ಬೆಟ್ಟ: ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಬೆಟ್ಟದ ಸುತ್ತಮುತ್ತಲಿನ ಕಾಡಂಚಿನಲ್ಲಿರುವ 5,500 ಕುಟುಂಬಗಳಿಗೆ ದಾಸೋಹದ ಅಕ್ಕಿಯನ್ನು ವಿತರಿಸಲು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ದಾಸೋಹಕ್ಕಾಗಿ ದಾನಿಗಳು ನೀಡಿರುವ 80 ಟನ್‌ ಅಕ್ಕಿ ದಾಸ್ತಾನು ಇದ್ದು, ಇದರಲ್ಲಿ 32.5 ಟನ್‌ಗಳಷ್ಟು ಅಕ್ಕಿಯನ್ನು ಪ್ರತಿ ಬಡ ಕುಟುಂಬಕ್ಕೆ 5 ಕೆಜಿಗಳಂತೆ ವಿತರಿಸಲು ಪ್ರಾಧಿಕಾರ ಸಿದ್ಧತೆ ನಡೆಸಿದೆ. ಅಕ್ಕಿಯನ್ನು ಚೀಲದಲ್ಲಿ ತುಂಬಿಸಿ ಸಿದ್ಧಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಭಾನುವಾರ ವಿತರಣೆಗೆ ಚಾಲನೆ ನೀಡಲಿದ್ದಾರೆ.

‘ದಾಸೋಹದ ಅಕ್ಕಿಯನ್ನು 5,000 ಬಡ ಕುಟುಂಬಗಳಿಗೆ ಉಚಿತವಾಗಿ ವಿತರಿಸುವ ಬಗ್ಗೆ ಶಾಸಕ ಆರ್‌.ನರೇಂದ್ರ ಅವರು ಮನವಿ ಮಾಡಿದ್ದರು. ಇದಕ್ಕೆ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಸಮ್ಮತಿಸಿದ್ದಾರೆ. ಇದರ ಜೊತೆಗೆ ಮಾರ್ಟಳ್ಳಿ, ಗೋಪಿನಾಥಂ ಮತ್ತು ಪೊನ್ನಾಚ್ಚಿಯ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ 500 ಕುಟುಂಬಗಳಿಗೂ ಅಕ್ಕಿ ವಿತರಿಸಲು ಉದ್ದೇಶಿಸಲಾಗಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಇ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

ಮುಖಗವುಸು ತಯಾರಿಕೆ: ಪ್ರಾಧಿಕಾರದ ವತಿಯಿಂದ ಕರ್ತವ್ಯ‌ ನಿರತ ಅಧಿಕಾರಿ/ಸಿಬ್ಬಂದಿ ಮತ್ತು ಕಡುಬಡ ಕುಟುಂಬಗಳಿಗೆ ವಿತರಿಸುವುದಕ್ಕಾಗಿ ಬಟ್ಟೆಯಿಂದ 10 ಸಾವಿರ ಮುಖಗವುಸುಗಳನ್ನು ತಯಾರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

1000 ಕುಟುಂಬಗಳಿಗೆ ಎನ್‌ಜಿಒ ನೆರವು

ಡೈನಾಮಿಕ್ ಭಾರತ್ ಗ್ಲೋಬಲ್ ವಿಷನ್ ಎಂಬ ಸ್ವಯಂ ಸೇವಾ ಸಂಸ್ಥೆಯು ಕಾಡಿನಲ್ಲಿಯೇ ವಾಸವಿರುವ ಹಾಗೂ ಮೂಲ ಗ್ರಾಮಗಳಿಗೆ ಸಂಪರ್ಕವಿರದ ಸುಮಾರು 1,000 ಕುಟುಂಬಗಳಿಗೆ ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ವಿವಿಧ ಪಡಿತರ ಹಾಗೂ 30 ವಿವಿಧ ವಸ್ತುಗಳನ್ನು ನೀಡಲು ಉದ್ದೇಶಿಸಿದ್ದು, ಮೊದಲ ದಿನ ಕುಮುದುಕ್ಕಿ ಗ್ರಾಮದ ಬಡ ಪಂಗಡ ಹಾಗೂ ಬಡ ಬೇಡಗಂಪಣರಿಗೆ ನೀಡಲು ಉದ್ದೇಶಿಸಿದೆ. ಜಿಲ್ಲಾ ಉಸ್ತುವಾರಿ‌ ಸಚಿವ ಸುರೇಶ್‌ ಕುಮಾರ್‌ ಅವರು ಭಾನುವಾರ ಈ ಕಾರ್ಯಕ್ರಮಕ್ಕೂ ಚಾಲನೆ ನೀಡಲಿದ್ದಾರೆ ಎಂದು ಜಯವಿಭವಸ್ವಾಮಿ ಹೇಳಿದ್ದಾರೆ.

Related posts

 ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 17,656ಕ್ಕೆ ಏರಿಕೆ: ಮಹಾಮಾರಿಗೆ 559 ಜನ ಬಲಿ

Times fo Deenabandhu

ಔಷಧಿ ತಯಾರಿಕೆಗೆ ಭಾರತದಲ್ಲಿರುವುದು ಎರಡು ತಿಂಗಳಿಗಾಗುವ ದಾಸ್ತಾನು ಮಾತ್ರ

Times fo Deenabandhu

ಪ್ರಿಯಂಕಾ ಗಾಂಧಿ ರಾಜ್ಯಸಭೆಗೆ ! ?

Times fo Deenabandhu