Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

70 ಲಕ್ಷ ಕೋವಿಡ್-19 ಟೆಸ್ಟಿಂಗ್ ಕಿಟ್ ಗಳಿಗೆ ಆರ್ಡರ್ ಮಾಡಿದ ಭಾರತ!

ನವದೆಹಲಿ: ಕೊರೋನಾವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಲವು ರೀತಿಯ ಕ್ರಮ ಕೈಗೊಂಡಿದ್ದು, ಹೆಚ್ಚುವರಿಯಾಗಿ 70 ಲಕ್ಷ ಟೆಸ್ಟಿಂಗ್ ಕಿಟ್ ಗಳಿಗೆ ಆರ್ಡರ್ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಆರು ವಾರಗಳಿಗೆ ಇರಬಹುದಾದ ಕಿಟ್ ಗಳನ್ನು ಹೊಂದಿರುವುದಾಗಿ ನಿನ್ನೆ ಹೇಳಿಕೆ ನೀಡಲಾಗಿತ್ತು. ಧೀರ್ಘಕಾಲದವರೆಗೂ ಅಗತ್ಯವಿರುವಷ್ಟು ಕಿಟ್ ಗಳನ್ನು ಹೊಂದುವ ನಿಟ್ಟಿನಲ್ಲಿ ಮತ್ತೊಂದು ಕಂತಿನಲ್ಲಿ ಆರ್ ಟಿ- ಪಿಸಿಆರ್ ಕಿಟ್ ಗಳನ್ನು ಪಡೆಯಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಹೆಚ್ಚುವರಿಯಾಗಿ ಸುಮಾರು 33 ಲಕ್ಷ ಆರ್ ಟಿ- ಪಿಸಿಆರ್ ( ರಿವರ್ಸ್ ಟ್ರಾನ್ಸ್ ಕ್ರಿಪ್ಸನ್ -ಪಾಲಿಮರೇಸ್ ಚೈನ್ ರಿಯಾಕ್ಷನ್) ಮತ್ತು 37 ಲಕ್ಷ ಕ್ಷಿಪ್ರ ಕಿಟ್ ಗಳು ಯಾವುದೇ ಸಂದರ್ಭದಲ್ಲೂ ಬರುವ ನಿರೀಕ್ಷೆ ಹೊಂದಲಾಗಿದೆ.

ನಿನ್ನೆಯವರೆಗೂ 2, 31, 903 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಈವರೆಗೂ 1036 ಜನರು ಗುಣಮುಖರಾಗಿದ್ದಾರೆ. ನಿರ್ದಿಷ್ಟ ಪ್ರದೇಶದಲ್ಲಿ 28 ದಿನಗಳವರೆಗೂ ಯಾವುದೇ ಕೋವಿಡ್-19 ಪ್ರಕರಣಗಳು ವರದಿಯಾಗದಿದ್ದರೆ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿರುವುದಾಗಿ ಹೇಳಿಕೊಳ್ಳಬಹುದಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Related posts

 ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳ

Times fo Deenabandhu

ಗಣರಾಜ್ಯೋತ್ಸವದ ಕೇಂದ್ರಬಿಂದುವಾಗಲಿದೆ ಕರ್ನಾಟಕದ ‘ಅನುಭವ ಮಂಟಪ’ ಸ್ತಬ್ಧಚಿತ್ರ

Times fo Deenabandhu

ಭಾರತದಲ್ಲಿ 5000 ಗಡಿ ದಾಟಿದ ಕೊರೊನಾ, ಮುಂಬೈ ಒಂದರಲ್ಲಿಯೇ 642 ಕೇಸ್‌..!

Times fo Deenabandhu