September 27, 2020
Times of Deenabandhu
ಇತರೆ ಜಿಲ್ಲೆಗಳು ಜಿಲ್ಲೆ ನಮ್ಮ ವಿಶೇಷ

ಕೊರೊನಾ ಟೈಮ್ ಪಾಸ್

ಕರೋನ ಎಂಬ ಮಹಾಮಾರಿ ಸೋಂಕು ಯಾವ ಗಳಿಗೆಯಲ್ಲಿ ನಮ್ಮ ದೇಶಕ್ಕೆ ಕಾಲೂರಿತೋ ಏನೋ, ನಾನಂತೂ ಈ ” ಕೆಟ್ಟ ಕರೋನ ಯಾಕಪ್ಪ ಬಂತು ಎಂದು ಹೆಣ್ಣುಮಕ್ಕಳಂತೆ ದಿನಾಲು ಚಿಟಿಕೆ ಮುರಿತ್ತಾ ಇದ್ದೀನಿ…ಪೀಡೆ ಇನ್ನು ತೊಲಗ ಒಲ್ತು…ದಿನಾಲು ಜನರು ತಮ್ಮ ಪಾಡಿಗೆ ತಾವು ಬಿಡುವು ಇಲ್ಲದೆ ಕೆಲಸ ಕಾರ್ಯದಲ್ಲಿ ತೊಡುಗುತ್ತಿದ್ದರು ಸರಕಾರಿ ಬಸ್ಸು ನಮ್ಮ ಊರಿಗೆ ಎರಡು ಟೈಮ್ ಬಂದು ಹೋಗುತ್ತಿತ್ತು ಎಲ್ಲಾ ಆಫೀಸ್ ಗಳು ತಮ್ಮ ಒಡಲ ಬಾಗಿಲುಗಳು ತೆಗೆದುಕೊಳ್ಳುತ್ತಿದ್ದವು ಇನ್ನು ನಮ್ಮ ಊರಿನ ರೈತರು ತಮ್ಮ ತಮ್ಮ ಹೊಲದಲ್ಲಿ ಬೇಸರವಿಲ್ಲದೆ ದಿನವೀಡಿ ಬೇಸಾಯ ಮಾಡುತ್ತಿದ್ದರು ನಿಜ ಹೇಳಬೇಕು ಎಂದರೆ ಕೈ ಕಾಲು ಕಟ್ಟಿ ಹಾಕಿದಂತೆ ಆಗಿದೆ, “ಈ ಕೆಟ್ಟ ಕೋಡಿ ಕರೋನ ಯಾಕ ಬಂತೇನು”,ಅಲ್ಲ ಮಾಮ ಎಂದು ನನ್ನ ಬಳಿಯಲ್ಲೇ ಕುಳಿತ ನನ್ನ ಪುಟ್ಟ ಹಸುಳೆ ಅಳಿಯ ಅಂದ. ಇನ್ನು ನಾನು ಒಂದು ಆಡಿದೆ ಬಂದದ್ದು ಬಂದಿದೆ ಆದರೆ ಬೈಲಾಗಿ ಹೋಗಬೇಕು ಚೋಟು ಎಂದೆ, ತಿರಗ ಅವ ಬಿದೀಲಿ ಹೋರಗೆ ಹೋಗಿ ಬುಗುರಿ ಆಟ ಹಾಡಲಾರದಾಂಗೆ ಆಗಿದೆ ಎಂದು ತೊದಲು ನುಡಿಗಳಲ್ಲಿ ಹೇಳಿದ ಅದಕ್ಕೆ ನಾನು ಹೌದು, ಎಂದೆ.
ಜಾಳಿಗೆ  ಬುಗುರಿಯಿಂದ ಕರೋನಕ್ಕೆ ಸೆಳೆದು ಗಿಚ್ಚೆ ಹಾಕಬೇಕು ಅನಿಸುತ್ತೆ ಅನ್ನುವ ಅವನ ಮಾತಿಗೆ ನಾನು ಬಿದ್ದು ಬಿದ್ದು ಹೊಟ್ಟೆ ಹಿಡಿದು ನಕ್ಕಿದ್ದು ಹೇಳ ತೀರದು.ಚೋಟು ಚೋಟು ಬುಗುರಿ ಜಾಳಿಗಿಯಿಂದ ಅಂಟು ಕರೋನ ರೋಗ ಓಡಿಸಲು ಸಾಧ್ಯವಿಲ್ಲ ಅದಕ್ಕೆ ಶುದ್ಧ ಔಷದಿ ಸಿಗುವತನಕ ‘ನಾವು ನಮ್ಮ ಮನೆಯಲ್ಲಿಯೇ ಇರೋಣ’, ಅಂದಾಗ ಮಾತ್ರ ನಮ್ಮ ಬಳಿ ಸುಳಿಯಲ್ಲ ಎಂದು ಹೇಳುತ್ತಲೆ ಅವನಿಗೆ ಮನೆಯಲ್ಲಿಯೇ ಕೆಲವು ಆಟಿಕೆ ಸಾಮಾನು ಅವನ ಕೈಯಲ್ಲಿ ಕೊಟ್ಟು ಮನೆ ಒಳಗೆ ಹಾಡು ಎಂದು ಹೇಳಿ ನಾನು ನಮ್ಮ ಮನೆಯ ಕೋಣಿಯಲಿ ಚಿಕ್ಕದಾದ ಲೈಬ್ರರಿ ಕಡೆ ವಾಲಿದೆ

ಕರೋನ ಲಾಕ್ ಡೌನ್ ನಡುವೆ ಜಪಾನಿ ದೇಶದ ಹೈಕು ಕಾವ್ಯ ಸಾಹಿತ್ಯ ಪ್ರಕಾರ ಕನ್ನಡ ಹೈಕು ಕಡೆ ಒಂಚೂರು ಓದುವ ಒಲವು…ತೋರಿಸಿದೆ

ನಮ್ಮ ಕನ್ನಡ ಸಾಹಿತ್ಯದಲ್ಲಿ ಇತ್ತಿಚೀಗೆ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಹುಟ್ಟಿದ ಕನ್ನಡ ಹೈಕು ಹೊಸ ಕಾವ್ಯ ಸಾಹಿತ್ಯ ಪ್ರಕಾರವಿದ್ದು ಈ ಭಾಗದ ಹಿರಿಯ ಕಿರಿಯ ಹೈಕು ಕವಿಗಳ ಹದಿನೈದರಿಂದ ಇಪ್ಪತ್ತು ಕವಿಗಳು ಡಾ.ಕೆ.ಬಿ ಬ್ಯಾಳಿ ಜಂಬುನಾಥ ಕಂಚ್ಯಾಣಿ ಡಾ.ಸಿ.ರವೀಂದ್ರ ನಾಥ್ ವೀರಹನುಮಾನ ಡಾ.ಜಯದೇವಿ ಗಾಯಕವಾಡ ಸಿದ್ಧರಾಮ ಹಿರೇಮಠ ಕೂಡ್ಲಿಗಿ ಶರಣಪ್ಪ ತಳ್ಳಿ ಅರುಣಾ ನರೇಂದ್ರ ಈರಣ್ಣ ಬೆಂಗಾಲಿ  ಅತ್ರೆ ರಾಯಚೂರು ಶಿವಶಂಕರ ಕಡದಿನ್ನಿಯವರ.ಸಂಕಲನಗಳು ಅಬ್ಬಾ ಈಗೆ ನನ್ನ ಮನೆಯ ಲೈಬ್ರರಿಯಲ್ಲಿ ಸಾಲು ಸಾಲಾಗಿ ಕಂಡವು. ಈ ಹಿಂದೆ ಓದಿ ಹಿಟ್ಟಿದ್ದೆ ಆದರೂ ಮತ್ತೊಮ್ಮೆ ಓದಲು ಹಂಬಲಿಸಿತು ನನ್ನ ಒಡಲು…
ಅದರಲ್ಲಿ ಯಾವ? ಸಂಕಲನ ಓದಲು ತೆಗೆದುಕೊಳ್ಳಲಿ ಎಂದು ಕೆಲ ಸಮಯ ತಲೆ ಯೋಚನೆಗೆ ಒಳಗಾಯಿತು.
ಮೂರು ಸಾಲು ಒಳಗೊಂಡಿದ್ದು ಚಿಕ್ಕ ಹೈಕು ಕಾವ್ಯ ಸಾಹಿತ್ಯ ಮಾದರಿ 5-7-5 = ಒಟ್ಟು 17 ಅಶ್ಕರ
ವಿರುವ ಈ ಚಿಕ್ಕ ಕಾವ್ಯ ಸಾಹಿತ್ಯ ಪ್ರಕಾರ ಜಪಾನಿ ನೆಲದಲ್ಲಿ ಹುಟ್ಟಿ ಕನ್ನಡಕ್ಕೆ 60 ರ ದಶಕದಲ್ಲಿ ಕಾಲೂರಿತು ಎಂದು ಹೇಳುತ್ತಾರೆ.ಈ ಸಣ್ಣ ಮಾದರಿಯ ಕಾವ್ಯ  ಸಾಹಿತ್ಯ ಪ್ರಕಾರ ಶುದ್ಧ ಒಡುಪು ಹೇಳಿದಂತೆ ಈ ಹೈಕು ಹಾಯ್ಕು ಎಂದೆಲ್ಲ ಹೇಳಬಹುದು… ಅದೇನೆ ಇರಲಿ ಕರೋನ ಲಾಕ್ ಡೌನ್ ಆಗಿರುವುದರಿಂದ ಮನೆಯಲ್ಲಿ ನನ್ನ ಒಡಲಿಗೆ  ಕಾಲಿ ಕುಳಿಸದೆ ಈ ಪುಟ್ಟ ಹೈಕು ಕಾವ್ಯ ಸಾಹಿತ್ಯ ಪ್ರಕಾರ ಕನ್ನಡ ಹೈಕು ಸಂಕಲನಗಳ ಪುಟ ಪುಟಗಳಲ್ಲಿ ಪುಟ್ಟ ಹೈಕುಗಳು ಅದರಲ್ಲಿ ಡಾ.ಕೆ.ಬಿ ಬ್ಯಾಳಿ ಯವರ,ಹೈಕು ಸಂಕಲನ ಕೈಯಲ್ಲಿ ಹಿಡಿದು  ಮೊದಲನೆ ಹೈಕು “ಚೋಟುದ್ದ ಕೂಸು
ಈ ಟುದ್ದ ಬೆಳೆದ
ಬಳ್ಳಿಯ ಕಾಯಿ”, ಈ ಹೈಕು ಬಹಳಷ್ಟು ರುಚಿ ಅನಿಸಿತು ಆಗೆ ಪುಟ ಪುಟಗಳನ್ನು ತಿರುವಿ ಹಾಕುತ್ತ ಓದಲು ಶುರುಮಾಡಿದೆ ಆಗೆ ನನ್ನ ಹೈಕು ಸಂಕಲವು ಕಣ್ಣಾಡಿಸಿದೆ  ಹೈಕು “ಮೂಕ ಬಸವ
ಕುಂಟೆ ರಂಟೆ ಹೊತ್ತಾಗ
ಭೂಮಿಯು ಹದ”,………..

ಶಿವಶಂಕರ ಕಡದಿನ್ನಿ…

 

Related posts

ಕೇಂದ್ರ ಸರ್ಕಾರದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‍ ಪ್ರತಿಭಟನೆ

Times fo Deenabandhu

ಕೊಲ್ಕೋತಾದಲ್ಲೊಂದು  ವಿಚಿತ್ರ ಘಟನೆ:  9 ವರ್ಷ ತನ್ನೊಡನೆ ಜೀವನ ನಡೆಸಿದ್ದ ಪತ್ನಿ … ಅವನಾಗಿದ್ದೇಗೆ? 

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ೮ ವಿವಿಧ ಕಾರ್ಯಕ್ರಮ: ಟಿ.ಕಮಲಾಕ್ಮಮ್ಮ

Times fo Deenabandhu