Times of Deenabandhu
  • Home
  • ಅಂಕಣ
  • ಬಣ್ಣದ ಬದುಕು, ಸಂಕಷ್ಟದ ದಿನ : ಸ್ವಂತ ಖರ್ಚಿನಲ್ಲಿ ಜಾಗೃತಿ ಗಮನ ಸೆಳೆಯುತ್ತಿರುವ ಕುಂಚ ಕಲಾವಿದ ಬಿ. ಗುರು
ಅಂಕಣ

ಬಣ್ಣದ ಬದುಕು, ಸಂಕಷ್ಟದ ದಿನ : ಸ್ವಂತ ಖರ್ಚಿನಲ್ಲಿ ಜಾಗೃತಿ ಗಮನ ಸೆಳೆಯುತ್ತಿರುವ ಕುಂಚ ಕಲಾವಿದ ಬಿ. ಗುರು

* ಅನಂತಕುಮಾರ್
ಭದ್ರಾವತಿ: ಬಾಲ್ಯದಿಂದಲೂ ಮೈಗೂಡಿಸಿಕೊಂಡಿದ್ದು ಬಣ್ಣದ ಕಲೆ, ಸಾಧಿಸಿದ್ದೂ ಅದರಲ್ಲೇ, ಬದುಕು ಕಟ್ಟಿಕೊಂಡಿರುವುದು ಅದರಲ್ಲೇ. ಬೇರೆ ಬದುಕು ಗೊತ್ತಿಲ್ಲ. ಈ ನಡುವೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿರುವುದು ಕಾಗದನಗರದ ಲಿಮ್ಕಾ ದಾಖಲೆ ಕುಂಚ ಕಲಾವಿದ ಬಿ. ಗುರು.
ಕಲಾವಿದರ ವೃತ್ತಿ ಎಂದರೆ ದುಡ್ಡು ಸಂಪಾದಿಸುವ ವೃತ್ತಿಯಲ್ಲ. ಆದರೆ ಬದುಕಲು ಅಗತ್ಯವಿರುವಷ್ಟು ಸಂಪಾದನೆ ಮಾಡಬಹುದು. ಆದರೆ ಇಂದು ಎಲ್ಲಾ ವೃತ್ತಿಗಳಲ್ಲೂ ಪೈಪೋಟಿ ಹೆಚ್ಚಾಗಿದ್ದು, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುಂದೆ ಸಾಗುವುದು ಕಷ್ಟ. ಬಿ. ಗುರು ಇಂತಹ ಸವಾಲುಗಳನ್ನು ಸುಲಭವಾಗಿ ಎದುರಿಸುವ ಮೂಲಕ ಸದೃಢವಾಗಿ ಬೆಳೆದು ನಿಂತಿದ್ದಾರೆ.
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಕರ್ಪ್ಯೂ ಜಾರಿಗೊಳಿಸಿ ಯಾರು ಮನೆಯಿಂದ ಹೊರ ಬರದಂತೆ ಸೂಚಿಸಲಾಗಿದೆ. ಇದರಿಂದಾಗಿ ಹಲವು ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಬಿ. ಗುರು ಬದುಕಿನ ಬಗ್ಗೆ ಚಿಂತಿಸದೆ ಕೊರೋನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.
ಆರಂಭದಲ್ಲಿ ಕೊರೋನಾ ವೈರಸ್ ಕುರಿತು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗೋಡೆ ಬರಹ ಬರೆಯುವ ಮೂಲಕ ಜಾಗೃತಿಗೆ ಮುಂದಾಗಿದ್ದರು. ನಂತರ ನಗರದ ಪ್ರಮುಖ ವೃತ್ತಗಳಲ್ಲಿ ಬಣ್ಣದ ಬಣ್ಣದ ಆಕರ್ಷಕ ಚಿತ್ತಾರಗಳೊಂದಿಗೆ ಜಾಗೃತಿಗೆ ಮುಂದಾಗಿದ್ದಾರೆ. ಎಲ್ಲವನ್ನು ಸ್ವಂತ ಖರ್ಚಿನಲ್ಲಿ ಕೈಗೊಳ್ಳುತ್ತಿದ್ದಾರೆ. ಇವರ ಕಾರ್ಯಕ್ಕೆ ಸ್ನೇಹಿತರು ಸಹ ಕೈಜೋಡಿಸಿದ್ದಾರೆ.
ಕಲಾವಿದ ಬಿ. ಗುರು ಅವರ ಕಾರ್ಯಕ್ಕೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಹ ಹೆಚ್ಚಿನ ಸಹಕಾರ ನೀಡುತ್ತಿದ್ದು, ನೂರಾರು ಆಕರ್ಷಕ ಗೋಡೆ ಬರಹಗಳು, ೧೦ಕ್ಕೂ ಹೆಚ್ಚು ಚಿತ್ತಾರಗಳು ನಗರದೆಲ್ಲೆಡೆ ರಾರಾಜಿಸುತ್ತಿವೆ.
ಈ ಹಿಂದೆ ಸಾರ್ವಜನಿಕ ಚುನಾವಣೆಯಲ್ಲೂ ಮತದಾನ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಬಿ. ಗುರು ಗಮನ ಸೆಳೆದಿದ್ದರು. ನಗರಸಭೆ ವತಿಯಿಂದ ಆಯೋಜಿಸಲಾಗುವ ಕಾರ್ಯಕ್ರಮಗಳಲ್ಲೂ ಕುಂಚ ಕಲೆ ಮೂಲಕ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯದಲಲಿ ತೊಡಗಿಸಿ ಕೊಂಡು ಮತ್ತೊಮ್ಮೆ ಗಮನ ಸೆಳೆಯುತ್ತಿದ್ದಾರೆ.
ಹಲವು ವರ್ಷಗಳ ಹಿಂದೆಯೇ ಬಿ. ಗುರು ಅವರ ಸಾಧನೆಗೆ ಲಿಮ್ಕಾ ಗಿನ್ನಿಸ್ ರೆಕಾರ್ಡ್ ಪ್ರಶಸ್ತಿ ಲಭಿಸಿದ್ದು, ಪ್ರತಿ ವರ್ಷ ತಮ್ಮ ಸ್ವಂತ ಖರ್ಚಿನಲ್ಲಿ ಎಂಪಿಎಂ ಕಾರ್ಖಾನೆ ನಿರ್ಮಾತೃ, ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯನವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಬಹುತೇಕ ಸರ್ಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳು ಇವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ.

Related posts

ಸುಜ್ಞಾನ ಹಾಗೂ ವಿಜ್ಞಾನದಿಂದೊಡಗೂಡಿದ ಜ್ಞಾನದ ಮಹಾಮನೆಯನ್ನಾಗಿಸಿದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ…

Times fo Deenabandhu

ದೆಹಲಿಯಲ್ಲಿ ಕೇಜ್ರಿವಾಲ್ ಗೆದ್ದಿದ್ದು ಹೇಗೆ?

Times fo Deenabandhu

10ನೆಯ ತರಗತಿ ಪೋರನ ಅತ್ಯದ್ಭುತ ಆಲೋಚನೆ..! ಏನದು?

Times fo Deenabandhu