Times of Deenabandhu
  • Home
  • ಜಿಲ್ಲೆ
  • ನ್ಯಾಯಾಧೀಶರಿಂದ ಪೌರ ಕಾರ್ಮಿಕರ ಸುರಕ್ಷತಾ ಕ್ರಮಗಳ ಪರಿಶೀಲನೆ
ಚಿಕ್ಕಮಗಳೂರು ಜಿಲ್ಲೆ

ನ್ಯಾಯಾಧೀಶರಿಂದ ಪೌರ ಕಾರ್ಮಿಕರ ಸುರಕ್ಷತಾ ಕ್ರಮಗಳ ಪರಿಶೀಲನೆ

ಚಿಕ್ಕಮಗಳೂರು, ಏ.೧೧: ಜಿಲ್ಲಾಡಳಿತದ ಸುರಕ್ಷತಾ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸುವ ಕಾರ್ಯವನ್ನು ಹೈಕೋರ್ಟ್ ಆಯಾ ಜಿಲ್ಲೆಗಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಿಗೆ ವಹಿಸಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ ಚೇಂಗಟಿ ಹೇಳಿದರು.
ಅವರು ನಗರದ ಎಂ.ಜಿ.ರಸ್ತೆ, ಬಸವನಹಳ್ಳಿ ರಸ್ತೆ ಹಾಗೂ ಲಕ್ಷ್ಮೀಶನಗರ ಮತ್ತಿತರ ಕಡೆಗಳಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರನ್ನು ಭೇಟಿ ಮಾಡಿ ಅವರಿಗೆ ನೀಡಲಾಗಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ನಂತರ ಎಂ.ಜಿ.ರಸ್ತೆಯ ಅಂಗಡಿಗಳಿಗೆ ಬೇಟಿ ನೀಡಿ ಸಾಮಾಜಿಕ ಅಂತರ ಮತ್ತು ಸ್ವಾಸ್ಥ್ಯ ಕಾಪಾಡುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ರಾಜ್ಯ ಸರ್ಕಾರದ ಮೇಲೆ ಹೈಕೋರ್ಟ್ ನಿಗಾ ವಹಿಸಿದ್ದು, ಕೋವಿಡ್-೧೯ ತಡೆಗಟ್ಟಲು ಸರ್ಕಾರ ಕೈಗೊಳ್ಳುತ್ತಿರುವ ವಿವಿಧ ಯೋಜನೆಗಳ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ವಿವರಣೆ ಕೇಳುವುದರ ಜೊತೆಗೆ ಸಲಹೆ ಸೂಚನೆಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾ ಕಾರಾಗೃಹ, ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಿರಾಶ್ರಿತರ ಕೇಂದ್ರಗಳನ್ನು ಪರಿಶೀಲಿಸಿದ್ದು, ಮುಂದಿನ ವಾರ ತಾಲ್ಲೂಕುಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್, ನಗರಸಭೆ ಅಭಿಯಂತರರಾದ ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

 

 

 

Related posts

ಯಕ್ಷಗಾನ ಕಲಾವಿದ ಸತೀಶ್ ಶೆಟ್ಟಿ ಪಟ್ಲಾ ಅವಮಾನ ಖಂಡಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಪ್ರತಿಭಟನೆ

Times fo Deenabandhu

ಶ್ರೀ ದೇವಿ ಗುರುಕುಲ ದಿನದರ್ಶಿ ಬಿಡುಗಡೆ

Times fo Deenabandhu

ಕನ್ನಡದ ಮೊದಲಕವಯತ್ರಿ ಅಕ್ಕಮಹಾದೇವಿ ಮಹಿಳಾಪರ ಹೋರಾಟಗಾರ್ತಿಯೂ ಹೌದು

Times fo Deenabandhu